ಭಟ್ಕಳ: ವಿದ್ಯಾರ್ಥಿನಿಗೆ 22 ಅಂಕ ಹೆಚ್ಚಳ !

Source: S.O. News Service | By I.G. Bhatkali | Published on 7th September 2020, 2:09 AM | Coastal News | Don't Miss |

ಭಟ್ಕಳ: ಕಳೆದ ಪಿಯುಸಿ ಪರೀಕ್ಷೆಯ ಫಲಿತಾಂಶದಿಂದ ತೃಪ್ತಳಾಗದ ಇಲ್ಲಿನ ಮುರುಡೇಶ್ವರ ಆರೆನ್ನೆಸ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು, ಮರುಮೌಲ್ಯಪಾನಕ್ಕೆ ಅರ್ಜಿ ಸಲ್ಲಿಸಿ ಒಂದೇ ವಿಷಯದಲ್ಲಿ 22 ಅಧಿಕ ಅಂಕಗಳನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ.

ಕಳೆದ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಹೇಮಾ ಗಿಡ್ಡ ನಾಯ್ಕ , ಕನ್ನಡದಲ್ಲಿ 68, ಇಂಗ್ಲೀಷ್‍ನಲ್ಲಿ 90, ಭೌತಶಾಸ್ತ್ರದಲ್ಲಿ 89, ರಸಾಯನ ಶಾಸ್ತ್ರದಲ್ಲಿ 87, ಗಣಿತದಲ್ಲಿ 93, ಜೀವಶಾಸ್ತ್ರದಲ್ಲಿ 81 ಅಂಕಗಳೊಂದಿಗೆ ಒಟ್ಟೂ 508 ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಳು. ಆದರೆ ಕನ್ನಡ ಭಾಷಾ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಬೇಸರಗೊಂಡ ಆಕೆ ಮರು ಮೌಲ್ಯ ಮಾಪನದ ಮೊರೆ ಹೋಗಿದ್ದಳು. ಈಗ 22 ಅಧಿಕ ಅಂಕಗಳೊಂದಿಗೆ ಕನ್ನಡ ಭಾಷಾ ವಿಷಯಕ್ಕೆ 90 ಅಂಕ ಲಭಿಸಿದಂತಾಗಿದ್ದು, ಒಟ್ಟೂ ಅಂಕ 530 (88.33%) ಅಂಕಗಳಿಗೆ ಏರಿಕೆಯಾಗಿದೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು, ಪ್ರಾಚಾರ್ಯರು, ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...