'ಧಾರ್ಮಿಕ ಕಾರಣ' ನೀಡಿ ಕೊರೋನ ಪರೀಕ್ಷೆಗೊಳಗಾಗದ ಯುವಕರು ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ ಪಬ್ಲಿಕ್ ಟಿವಿ

Source: sonews | By Staff Correspondent | Published on 17th March 2020, 11:02 PM | National News | Don't Miss |

ಹೊಸದಿಲ್ಲಿ: ದುಬೈಯಿಂದ ಮರಳಿದ್ದ ಭಟ್ಕಳದ ಸುಲ್ತಾನ್ ಸ್ಟ್ರೀಟ್ ನಿವಾಸಿಗಳಾದ ನಾಲ್ಕು ಮಂದಿ  ಯುವಕರು 'ಧಾರ್ಮಿಕ ಕಾರಣಗಳ' ನೆಪವೊಡ್ಡಿ ಕೊರೋನವೈರಸ್ ಪರೀಕ್ಷೆಗೊಳಗಾಗಲು ನಿರಾಕರಿಸಿದ್ದಾರೆಂದು 'ಪಬ್ಲಿಕ್ ಟಿವಿ' ಕನ್ನಡ ವಾಹಿನಿ ಮಾರ್ಚ್ 14ರಂದು ಪ್ರಸಾರ ಮಾಡಿದ್ದ ಕಾರ್ಯಕ್ರಮದಲ್ಲಿ  ಹೇಳಿಕೊಂಡಿತ್ತು.

"ಕೊರೋನವೈರಸ್ ಪರೀಕ್ಷೆಗೊಳಪಡುವುದಿಲ್ಲ ನಮ್ಮ ಧರ್ಮದಲ್ಲಿ ಇಂತಹ ಪರೀಕ್ಷೆಗೆ ಅವಕಾಶವಿಲ್ಲ... ಹೀಗೆಂದು ದುಬೈಯಿಂದ ಮರಳಿದ್ದ ನಾಲ್ಕು ಯುವಕರು ಹೇಳಿದ್ದಾರೆ,'' ಎಂದು ಕಾರ್ಯಕ್ರಮದ ನಿರೂಪಕರು ಹೇಳಿಕೊಂಡಿದ್ದರು.

ಸ್ಥಳೀಯ ನಿವಾಸಿಯೊಬ್ಬರ ಹೇಳಿಕೆಯ ಆಧಾರದಲ್ಲಿ ವಾಹಿನಿ ಮೇಲಿನಂತೆ ತನ್ನ ಕಾರ್ಯಕ್ರಮದಲ್ಲಿ ತಿಳಿಸಿತ್ತು. "ಅವರು ವಿದೇಶದಿಂದ ಬಂದಿದ್ದರು. ಆರೋಗ್ಯಾಧಿಕಾರಿಗಳು ಅವರನ್ನು ಭೇಟಿಯಾಗಲು ಹೋದಾಗ ಅವರು  ಬೊಬ್ಬೆ ಹೊಡೆದಿದ್ದಾರೆ,'' ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತಲ್ಲದೆ ಇಂತಹ ಯುವಕರನ್ನು ಕಸ್ಟಡಿಗೆ ಪಡೆದುಕೊಂಡು ಪರೀಕ್ಷೆಗೊಳಪಡಿಸಬೇಕು'' ಎಂದು ನಿರೂಪಕರು ಹೇಳಿದ್ದರು.

ಇದೇ ವಿಚಾರವೆತ್ತಿಕೊಂಡು ಬಲಪಂಥೀಯ ವೆಬ್ ಸೈಟ್ OpIndia ಕೂಡ ಟ್ವೀಟ್ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಆಧಾರದಲ್ಲಿ ಇನ್ನೊಂದು ಬಲಪಂಥೀಯ ವೆಬ್ ತಾಣ My Nation ಕೂಡ ವರದಿ ಪ್ರಕಟಿಸಿತ್ತು. ನಕಲಿ ಸುದ್ದಿಗಳ ತಾಣ ಪೋಸ್ಟ್ ಕಾರ್ಡ್ ನ್ಯೂಸ್ ಸ್ಥಾಪಕ ಮಹೇಶ್ ಹೆಗ್ಡೆ ಕೂಡ ಇದೇ ವಿಚಾರ ಶೇರ್ ಮಾಡಿದ್ದರು.

Islam does not approve: Four Muslims who returned from Dubai threaten health officials in Karnataka, refuse to undergo Coronavirus testhttps://t.co/wTj5vDURmX

— OpIndia.com (@OpIndia_com) March 15, 2020

4 youths have refused to undergo Coronavirus tests after they returned from Dubai, saying their religion doesn’t permit them to do so. #coronavirusindia #CoronaVirusUpdates #WHO #pandemic https://t.co/FBxvPM3TLr

— MyNation (@MyNation) March 15, 2020

ವಾಸ್ತವವೇನು?:

ಪಬ್ಲಿಕ್ ಟಿವಿಯ ಸಂಪೂರ್ಣ ಕಾರ್ಯಕ್ರಮ ಸ್ಥಳೀಯರೊಬ್ಬರ ಹೇಳಿಕೆಯಾಧರಿತವಾಗಿತ್ತಲ್ಲದೆ ಆರೋಗ್ಯಾಧಿಕಾರಿಗಳು ಅಥವಾ ಜಿಲ್ಲಾಡಳಿತದ ಹೇಳಿಕೆಗಳ್ಯಾವುದನ್ನೂ ಪ್ರಸಾರ ಮಾಡಿರಲಿಲ್ಲ.  ಮೇಲಾಗಿ ಸ್ಥಳೀಯ ತನ್ನ ಹೇಳಿಕೆಯಲ್ಲಿ ಯುವಕರ ಧರ್ಮ ಅಥವಾ ಅವರು ಪರೀಕ್ಷೆಗೊಳಪಡಿಸಲು ನಿರಾಕರಿಸಿದ್ದರೆಂದೇನೂ ಹೇಳಿರಲಿಲ್ಲ.

ಈ ಕುರಿತಂತೆ altnews.in ಪರಿಶೀಲನೆ ನಡೆಸಿದಾಗ ಭಟ್ಕಳ ಡಿವೈಎಸ್ಪಿ ಹಾಗೂ ಸಹಾಯಕ ಆಯುಕ್ತರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯ ವೀಡಿಯೋವೊಂದು ಯೂಟ್ಯೂಬ್ ನಲ್ಲಿ ಕಂಡು ಬಂತು. ಭಟ್ಕಳದಲ್ಲಿ ಯಾವುದೇ ಕೊರೋನವೈರಸ್ ಪ್ರಕರಣಗಳಿಲ್ಲ ಹಾಗೂ ಈ ಕುರಿತಂತೆ ವದಂತಿ ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಈ ಕುರಿತಂತೆ altnews.in ಉತ್ತರ ಕನ್ನಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಹರೀಶ್ ಕುಮಾರ್ ಕೆ ಅವರಲ್ಲಿ ಮಾತನಾಡಿದಾಗ ಅಂತಹ ಯಾವುದೇ ಘಟನೆ ನಡೆದಿಲ್ಲ ಹಾಗೂ ಶಂಕಿತ ರೋಗಿಗಳನ್ನು ಪರೀಕ್ಷೆಗೊಳಪಡಿಸುವ ಪ್ರಕ್ರಿಯೆ ಸುಸೂತ್ರವಾಗಿ ನಡೆಯುತ್ತಿದೆ ಎಂದರು. ಸಹಾಯಕ ಆಯುಕ್ತ ಭರತ್ ಇದನ್ನೊಂದು ಸುಳ್ಳು ಸುದ್ದಿ ಎಂದರು.

ಭಟ್ಕಳದ ಸಮಾಜ ಸೇವಾ ಸಂಸ್ಥೆ ಮಜ್ಲಿಸೆ ಇಸ್ಲಾಹ್ ವಾ ತನ್ಝೀಂ ಅಧ್ಯಕ್ಷ ಸಯ್ಯದ್ ಪರ್ವೇಝ್ ಮಾತನಾಡುತ್ತಾ, ತಾವು ಕೂಡ ಸುಲ್ತಾನ್ ಸ್ಟ್ರೀಟ್ ನಿವಾಸಿಯಾಗಿದ್ದು ಅಂತಹ ಯಾವುದೇ ಘಟನೆ ತಮ್ಮ ಪ್ರದೇಶದಲ್ಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಕೃಪೆ: vbnewsonline.inaltnews.in

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...