ಭಟ್ಕಳ: ಬಡ ಜನರ ನೆರವಿಗೆ ಬ್ಯಾಂಕುಗಳಿಲ್ಲ; ರಾಷ್ಟ್ರೀಯ ಹೆದ್ದಾರಿ ಬರಕತ್ತಾಗಲಿಲ್ಲ; ಶಿರಾಲಿ ಗ್ರಾಪಂ ಗ್ರಾಮ ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ

Source: S O News service | By I.G. Bhatkali | Published on 21st September 2021, 5:04 PM | Coastal News |

ಭಟ್ಕಳ: ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಜೋರಾಗಿದೆ. ಎಲ್ಲೆಂದೆಲ್ಲಿಗೋ ಬ್ಯಾಂಕ್ ನೌಕರರು ವರ್ಗಾವಣೆಯಾಗುತ್ತಿದ್ದು, ಶಿರಾಲಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಕನ್ನಡ ಬಾರದವರೇ ಇದ್ದಾರೆ. ಸ್ಥಳೀಯ ಜನಸಾಮಾನ್ಯರಿಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ವ್ಯವಹಾರ ನಡೆಸುವುದು ಕಷ್ಟವಾಗುತ್ತಿದೆ ಎಂದು ಜಿಲ್ಲೆಯ ಅತಿ ದೊಡ್ಡ ಪಂಚಾಯತ ಶಿರಾಲಿ ಭಾಗದ ಸಾರ್ವಜನಿಕರು ಆಕ್ರೋಶವನ್ನು ಹೊರ ಹಾಕಿದರು.

ಸೋಮವಾರ ನಡೆದ ಗ್ರಾಮಸಭೆಯ ಮಧ್ಯೆ ವಿಷಯವನ್ನು ಪ್ರಸ್ತಾಪಿಸಿದ ಸ್ಥಳೀಯ ನಿವಾಸಿ ಮಾದೇವ, ಸರಕಾರದಿಂದ ಯಾವೆಲ್ಲ ಯೋಜನೆಗಳು ಬಂದಿದೆ ಎನ್ನುವುದು ಜನರಿಗೆ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹೆಸರಿನಲ್ಲಿ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿದೆ. ಶಿರಾಲಿ ಜನತಾ ವಿದ್ಯಾಲಯದ ಎದುರು ಮಳೆಯ ನೀರು ತುಂಬಿಕೊಳ್ಳುತ್ತಿದ್ದು, ಜನರಿಗೆ ಆಗುತ್ತಿರುವ ತೊಂದರೆಯನ್ನು ಯಾರಿಗೆ ಹೇಳುವುದು?

ಗೊತ್ತಾಗುತ್ತಿಲ್ಲ, ಬಡ ಜನರನ್ನು ಕೀಳಾಗಿ ನೋಡಲಾಗುತ್ತಿದೆ, ಸಣ್ಣ ಕೆಲಸಕ್ಕೂ ಬ್ಯಾಂಕುಗಳಿಗೆ ಅಲೆದಾಟ ಹೆಚ್ಚುತ್ತಲೇ ಇದೆ, ಸಾಲ ಸೌಲಭ್ಯ ಏನಿದ್ದರೂ ವಿಜಯ ಮಲ್ಯನಂತವರಿಗೆ ಆಗಿ ಬಿಟ್ಟಿದೆ ಎಂದು ಆಕ್ರೋಶ ಹೊರ ಹಾಕಿದರು. ಇದಕ್ಕೆ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕರ ಪರವಾಗಿ ಮಾತನಾಡಿದ ಬ್ಯಾಂಕ್ ಅಧಿಕಾರಿ ರಾಜೇಂದ್ರ, ಬ್ಯಾಂಕಿನ ವಿಲೀನವಾಗಲೀ, ನೌಕರರ ನಿಯೋಜನೆಯಾಗಲೀ ನಮ್ಮ ಕೈಯಲ್ಲಿ ಇಲ್ಲ, ಕನ್ನಡಿಗರನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಿ, ಅವರಿಗೆ ಬೇರೆ ರಾಜ್ಯದ ಭಾಷೆ ಬಾರದೇ ಇದ್ದರೆ ಇಂತಹ ಆರೋಪವನ್ನೇ ಎದುರಿಸಬೇಕಾಗುತ್ತದೆ, ಸಾಲ ಸೌಲಭ್ಯಗಳು ಮರುಪಾವತಿಯ ಸಾಮಥ್ರ್ಯವನ್ನು ಅವಲಂಬಿಸಿರುತ್ತದೆ, ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಶಿರಾಲಿ ಭಾಗದ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಇಲಾಖೆಯ ಗಮನ ಸೆಳೆದ ಸ್ಥಳೀಯ ನಿವಾಸಿ ನಾಗಪ್ಪ ನಾಯ್ಕ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹೆಸರಿನಲ್ಲಿ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿದೆ. ಶಿರಾಲಿ ಜನತಾ ವಿದ್ಯಾಲಯದ ಎದುರು ಮಳೆಯ ನೀರು ತುಂಬಿಕೊಳ್ಳುತ್ತಿದ್ದು, ಜನರಿಗೆ ಆಗುತ್ತಿರುವ ತೊಂದರೆಯನ್ನು ಯಾರಿಗೆ ಹೇಳುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹೆದ್ದಾರಿ ಅಗಲೀಕರಣದ ಸಂಬಂಧ ಅಭಿಯಂತರ ಶ್ರೀನಿವಾಸ ಜೋಶಿ ಆಡಿದ ಮಾತೊಂದು ಕೋಲಾಹಲಕ್ಕೆ ಕಾರಣವಾಯಿತು.

ಶಿರಾಲಿ ಭಾಗದಲ್ಲಿ ಹೆದ್ದಾರಿಯಲ್ಲಿ 30ಮೀ.ಗೆ ಸೀಮಿತಗೊಳಿಸಿ ಸಂಸದರ ಉಪಸ್ಥಿತಿಯಲ್ಲಿ ಠರಾವು ಪಾಸು ಮಾಡಲಾಗಿದೆ ಎನ್ನುತ್ತಿದ್ದಂತೆಯೇ ತಿರುಗಿ ಬಿದ್ದ ಪಂಚಾಯತ ಸದಸ್ಯರು ಹಾಗೂ ಜನರು, ಸುಮ್ಮನೇ ಪಂಚಾಯತ ಹಾಗೂ ಸಂಸದರ ಬಗ್ಗೆ ಜನರನ್ನು ತಪ್ಪು ದಾರಿಗೆ ಎಳೆಯಬೇಡಿ, ಈ ಸಂಬಂಧ ಹೋರಾಟವೇ ನಡೆದು ಹೋಗಿದೆ, ಸಂಸದರೇ ಹೆದ್ದಾರಿಯನ್ನು 45ಮೀ. ಅಗಲಕ್ಕೆ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದು ಪಟ್ಟು ಹಿಡಿದರು. ನಂತರ ತಮ್ಮ ಮಾತನ್ನು ವಾಪಸ್ಸು ಪಡೆದ ಅಭಿಯಂತರ ಶ್ರೀನಿವಾಸ, ಹಾಗಿದ್ದರೆ ಜನರು ಬಯಸಿದಂತೆ ಮುಂದಿನ ಕ್ರಮ ಜರುಗಲಿದೆ ಎಂದು ತಿಳಿಸಿದರು.

ಹೆದ್ದಾರಿ ಅಧಿಕಾರಿಗಳ ಬೆಂಬಲಕ್ಕೆ ಬಂದ ಶಿರಾಲಿ ಗ್ರಾಮ ಪಂಚಾಯತ ಪಿಡಿಓ ಮಹೇಶ, 30ಮೀ. ಬಗ್ಗೆ ಎಲ್ಲಿಯೂ ಸಭೆಯಲ್ಲಿ ಠರಾವು ಆಗಿಲ್ಲ, ಉಳಿದ ಕಡೆ ನಡೆಯುವ ಸಭೆಯ ನಡಾವಳಿಯನ್ನು ಗಮನದಲ್ಲಿಟ್ಟುಕೊಂಡು ಅಭಿಯಂತರರು ಹಾಗೆ ಹೇಳಿದ್ದಾರೆ ಎಂದು ಗೊಂದಲಕ್ಕೆ ತೆರೆ ಎಳೆದರು. ಮನೆ ಹಾನಿ ಪರಿಹಾರದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಮನೆ ಕುಸಿದು ಯಾರೂ ವಾಸಿಸದಂತಹ ಪರಿಸ್ಥಿತಿ ನಿರ್ಮಾಣವಾದರೂ 5200 ರುಪಾಯಿ ಪರಿಹಾಋ ನೀಡಲಾಗಿದೆ. ಇಂತಹ ಪರಿಹಾರವನ್ನು ನೀಡದಿದ್ದರೇ ಒಳಿತು ಎಂದು ಸಭೆಯಲ್ಲಿ ಅಸಮಾಧಾನವನ್ನು ಹೊರ ಹಾಕಲಾಯಿತು.

ಶಿರಾಲಿ ಮೀನು ಮಾರುಕಟ್ಟೆ, ವೆಂಕಟಾಪುರ ಮತ್ತಿಗುಂಡಿ ನೆಟ್‍ವರ್ಕ್ ಟವರ್ ಸೇರಿದಂತೆ ಹಲವು ಸಮಸ್ಯೆಗಳನ್ನು ಸಭೆಯಲ್ಲಿ ಪ್ರಸ್ತಾಪವಾದವು. ಗ್ರಾಪಂ ಅಧ್ಯಕ್ಷೆ ರೇವತಿ ನಾಯ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷ ಭಾಸ್ಕರ ದೈಮನೆ, ಹಿರಿಯ ಸದಸ್ಯ ಎಬಿಡಿ ಕೊಸ್ತಾ, ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ, ನೋಡೆಲ್ ಅಧಿಕಾರಿ ಸುಶೀಲಾ ಮೊಗೇರ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ ಸಿಬ್ಬಂದಿ ರೋಹಿದಾಸ ದೇವಡಿಗ ಎಲ್ಲರನ್ನೂ ಸ್ವಾಗತಿಸಿದರು.

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...