ಎಟಿಎಂನಲ್ಲಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸಿದ ಇಬ್ಬರನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Source: SO News | By Laxmi Tanaya | Published on 23rd February 2021, 2:55 PM | Coastal News | Don't Miss |

ಮಂಗಳೂರು  : ಎಟಿಎಂನಲ್ಲಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸಿದ್ದ ಇಬ್ಬರು ವಂಚಕರನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. 

ನಗರದ ಮಂಗಳಾದೇವಿಯಲ್ಲಿರುವ ಎಟಿಎಂನಲ್ಲಿ ಈ ವಂಚಕರು ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದರೂ ಇದನ್ನು ಗಮನಿಸಿದ ಸ್ಥಳೀಯರು ಇವರನ್ನು ಸೆರೆ ಹಿಡಿಯಲು ಹೋದಾಗ ವಂಚಕರು ತಪ್ಪಿಸಲು ಯತ್ನಿಸಿದ್ದಾರೆ. ಕೂಡಲೇ ಮೂವರು ಸೇರಿ ವಂಚಕರನ್ನು ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಎಟಿಎಂ ಯಂತ್ರಗಳಲ್ಲಿ ಸೂಕ್ಷ್ಮ ಉಪಕರಣ ಅಳವಡಿಸಿ ಎಟಿಎಂ ಕಾರ್ಡ್ ಗಳ ಮಾಹಿತಿ ಕದ್ದು ಅನಂತರ ನಕಲಿ ಕಾರ್ಡ್ ತಯಾರಿಸಿ ಹಣ ವಿತ್ ಡ್ರಾ ಮಾಡೋದಕ್ಕೆ ಸ್ಕಿಮ್ಮಿಂಗ್ ಎನ್ನಲಾಗುತ್ತದೆ. ಇದಕ್ಕೆ ವಂಚಕರು ಅಳವಡಿಸುವ ಉಪಕರಣ ಬಳಕೆದಾರರು ಎಟಿಎಂ ಕಾರ್ಡ್ ಸ್ಪೈಸ್ ಮಾಡಿದಾಗ  ಅದರಲ್ಲಿರುವ ಹದಿನಾರು ಅಂಕಿಗಳ ಸಂಖ್ಯೆ ಮತ್ತು ಸಿವಿಸಿ ಸಂಗತಿಗಳನ್ನು ದಾಖಲಿಸಿಕೊಳ್ಳುತ್ತದೆ .

ಮಂಗಳೂರು ಭಾಗದಲ್ಲಿ ಇತ್ತೀಚೆಗೆ ಇಂತಹ ಕೆಲವು ಘಟನೆಗಳು ನಡೆದಿವೆ. ನಗರದ ಚಿಲಿಂಬಿ ನಾಗುರಿ ಮತ್ತು ಕುಲಾಯಿ ತಲಾ 1ಎಟಿಎಂ ಗಳಲ್ಲಿ ಈ ರೀತಿ ಸ್ಕಿಮ್ಮಿಂಗ್ ನಡೆದಿದ್ದು ವಂಚಕರು ನೂರಾರು ಗ್ರಾಹಕರ ಲಕ್ಷಾಂತರ ರೂಪಾಯಿಗಳನ್ನು ಎಗರಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...