ಸದಾಶಿವಗಢ ಉರುಸ್ ಗೆ ಸಾರ್ವಜನಿಕರಿಗೆ ನಿಷೇಧ. ದರ್ಗಾ ಆಡಳಿತ ಮಂಡಳಿ ಪ್ರಕಟಣೆ.

Source: SO News | By Laxmi Tanaya | Published on 21st September 2020, 10:52 PM | State News | Don't Miss |

ಕಾರವಾರ : ಸದಾಶಿವಗಢದ ದರ್ಗಾದ ಉರುಸ್ ಗೆ ಸರ್ಕಾರದಿಂದ ಅನುಮತಿ ನೀಡದಿರುವುದರಿಂದ ಸಾರ್ವಜನಿಕರಿಗೆ ಉರುಸ್ ಗೆ ಬರಲು ನಿಷೇಧಿಸಲಾಗಿದೆ ಎಂದು ದರ್ಗಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೊಬರ್ 2 ಮತ್ತು 3ರಂದು ವಾರ್ಷಿಕ ಉರುಸ್ ಕಾರ್ಯಕ್ರಮ ನಡೆಯಲಿದೆ. ಆದರೆ ಕೋವಿಡ್ 19 ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ 
‌ಸಂದಲ್ ಮತ್ತು ಉರುಸ್ ಗೆ ಅನುಮತಿ ಸಿಕ್ಕಿಲ್ಲ.ಹೀಗಾಗಿ ಬೇರೆಬೇರೆ ಸ್ಥಳಗಳಿಂದ ಸಾರ್ವಜನಿಕರು ಬರಲು ನಿಷೇಧಿಸಲಾಗಿದೆ. ಆದ್ದರಿಂದ ಯಾರೂ ಕೂಡ ಪರಸ್ಥಳದಿಂದ ಬರಬಾರದು ಎಂದು ಆಡಳಿತ ಮಂಡಳಿ ತಿಳಿಸಿದ್ದಾರೆ.

ಉರುಸ್ ಪ್ರಯುಕ್ತ ವ್ಯಾಪಾರ ವಹಿವಾಟಿಗೂ ಕೂಡ ಪರವಾನಿಗೆ ನೀಡಿಲ್ಲ. ನಿಷೇಧ ಅವಧಿ ಉರುಸ್ ಎರಡು ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಉರುಸ್ ನಂತರ ಯಥಾಸ್ಥಿತಿಯಂತೆ ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ‌ಪೀರ್ ರವರ ದರ್ಶನ ಮತ್ತು ತಮ್ಮ ಇಷ್ಠಾರ್ಥಗಳನ್ನ ಪೂರೈಸಿಕೊಳ್ಳಬಹುದೆಂದು ದರ್ಗಾ ಆಡಳಿತ ಮಂಡಳಿಯವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...