ಮುಂಡಗೋಡ: ವೃದ್ದೆಗೆ ತಹಶೀಲ್ದಾರ ಕಚೇರಿಗೆ ಬಿಟ್ಟು ಹೃದಯವಂತಿಕೆ ಮೆರೆದ ಪಿಎಸ್‍ಐ ಮಬನೂರ

Source: Nazir Tadapatri | By S O News | Published on 14th June 2021, 9:26 PM | Coastal News |

ಮುಂಡಗೋಡ: ತಹಶೀಲ್ದಾರ ಕಚೇರಿಯ ತನಕಾ ಬೀಡ್ರಿ ಪಾ ನನ್ನದು ಸ್ವಲ್ಪ ಕೆಲಸ ಐತಿ ನಿಮಗ ಪುಣ್ಯಾ ಬರತೈತಿ ಎಂದು ಸುಮಾರು 70-75 ವಯಸ್ಸು ಅಸುಪಾಸಿನ ವೃದ್ದೆಯೊಬ್ಬಳು ಹುಬ್ಬಳ್ಳಿ- ಶಿರಸಿ ರಸ್ತೆಯಲ್ಲಿ ಮಿನಿವಿಧಾನಸೌಧ ದಿಕ್ಕಿಗೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಕೈಮಾಡಿ ಅಂಗಲಾಚಿಸುತ್ತಾ ಬೇಡಿಕೊಂಡರು ಯಾರೂ ಸಹ ಆ ವೃದ್ದೆಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಎಲ್ಲಿ ಆ ವೃದ್ದೆಗೆ ಸೋಂಕು ಇದಿಯೋ ಎನೋ ಎಂದು ಹೆದರಿಕೆಯಿಂದ ಕೆಲವರು ಸಹಾಯ ಮಾಡಲು ಮನಸ್ಸು ಮಾಡಲಿಲ್ಲ. ಕಾರ್ಯನಿಮಿತ್ತ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮುಂಡಗೋಡ ಠಾಣಾ ಪಿಎಸ್‍ಐ ಬಸವರಾಜ ಮಬನೂರ ವೃದ್ದೆಯು ಅಂಗಲಾಚುತ್ತಿದ್ದ ದೃಶ್ಯವನ್ನು ನೋಡಿ ಮನಕರಗಿ ತಮ್ಮ ವಾಹನವನ್ನು ನಿಲ್ಲಿಸಿ ಆ ವೃದ್ಧೆಗೆ ತಮ್ಮ ವಾಹನದಲ್ಲಿ ಕುಳ್ಳರಿಸಿ ತಹಶೀಲ್ದಾರ ಕಚೇರಿಗೆ ಬಿಟ್ಟು ಬಂದು ತಮ್ಮ ಹೃದಯವಂತಿಕೆಯನ್ನು ಮರೆದಿದ್ದಾರೆ. ಪಿಎಸ್‍ಐ ಮಬನೂರ ರವರು ಇಂತಹ ಪುಣ್ಯದ ಕೆಲಸ ಮಾಡುತ್ತಿರುವುದು ಹೊಸದೇನಲ್ಲಾ ಲಾಕ್‍ಡೌನ್ ಸಂದರ್ಭದಲ್ಲಿ ಗೋ ಶಾಲೆಗೆ ಹೋಗಿ ಅಲ್ಲಿಯ ತಮ್ಮ ಹಣದಿಂದ ಮೇವು ಖರೀದಿಸಿ ದನಕರುಗಳಿಗೆ ಮೇವು ತಿನ್ನಸಿದ್ದರು. ಮೊನ್ನೆ ಅಪ್ರಾಪ್ತ ಬಾಲಕಿಯೊಬ್ಬಳು ಮನೆ ಬಿಟ್ಟು ಬಂದಾಗ ಅವಳನ್ನು sಸಂತೈಸಿ ಅವರ ಪಾಲಕರಿಗೆ ಒಪ್ಪಿಸಿದ್ದರು.

Read These Next