ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಭೂಮಿ ಹಕ್ಕು ಹೋರಾಟ ಸಮಿತಿಯಿಂದ ಪ್ರತಿಭಟನೆ

Source: sonews | By Staff Correspondent | Published on 25th September 2020, 6:15 PM | Coastal News |

ಶಿರಸಿ: ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ದಾಸನಕೊಪ್ಪ ಗ್ರಾಮದ ಸರ್ಕಲ್‌ನಲ್ಲಿ ಶುಕ್ರವಾರದಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿಯು  ಟೈಯರ್ ಸುಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸರಕಾರದ ರೈತ ವಿರೋಧ ನೀತಿಯನ್ನ ಖಂಡಿಸಿತು.

ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಆಗಮಿಸಿದ ಹೋರಾಟಗಾರರು ಸರಕಾರದ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗುವ ಮೂಲಕ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

ದೇಶದ ಭದ್ರತೆಯು, ರೈತನ ಭದ್ರತೆಯ ಮೇಲೆ ಅವಲಂಬಿತವಾಗಿದೆ. ಇಂದು ರೈತನಿಗೆ ಮಾರಕವಾಗಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿ ಉಳುವವನೇ ಭೂ ಒಡೆಯನಾಗಿದ್ದವನು ಇಂದು ಸರಕಾರದ ತಪ್ಪಾದ ನೀತಿಯಿಂದ ಇದ್ದವನೇ ಭೂ ಒಡೆಯನಾಗುವ ಸಂದರ್ಭ ಬಂದೊದಗಿದ್ದು ವಿಷಾದಕರ. ಕರ್ನಾಟಕದಲ್ಲಿ .೨೩ ಸ್ಕೆö್ಯÃರ್ ಕಿ.ಮಿ ನಷ್ಟು ಕೃಷಿಭೂಮಿ ಇದ್ದು, ಒಟ್ಟು ಭೌಗೋಳಿಕವಾಗಿ ಶೇಕಡಾ ೬೪ ರಷ್ಟು ಕೃಷಿ ಭೂಮಿ ಹೊಂದಿದ್ದರೂ ಸಹಿತ ಇಂದಿಗೂ ಆಹಾರ ಬಧ್ರತೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮೂಲಕ ಆಹಾರ ಅಭದ್ರತೆಗೆ ಮಾರಕವಾಗುವುದರಲ್ಲಿ ಸಂಶಯವಿಲ್ಲ ಎಂದು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಸಂದರ್ಭದಲ್ಲಿ ಮಾತನಾಡುತ್ತಾ ಹೇಳಿದರು.

ಇಂದು ರೈತ ಅತೀವೃಷ್ಟಿ, ಬೆಳೆನಷ್ಟ, ಭತ್ತಕ್ಕೆ ಬೆಂಕಿ ರೋಗ, ಅಡಿಕೆ ಮತ್ತು ಶುಂಠಿಗೆ ಕೊಳೆರೋಗ, ಹಳದಿ ಎಲೆ ರೋಗ, ಬೆಳೆವಿಮೆ, ಪರಿಹಾರ, ಆಸಾಮಿ ಸಾಲ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ರೈತನಿಗೆ ಆರ್ಥೀಕ, ಸಾಮಾಜಿಕ ಬಧ್ರತೆ ನೀಡುವಲ್ಲಿ ರಾಜ್ಯ ಸರಕಾರವು ಸಂಪೂರ್ಣ ವಿಫಲವಾಗಿದೆ ಎಂದು ರವೀಂದ್ರ ನಾಯ್ಕ ಆಪಾದಿಸಿದರು.

ಇಂದಿನ ಜನಪ್ರತಿನಿಧಿಗಳಲ್ಲಿ ಸಾಮಾಜಿಕ ಸೇವಾ ಮನೋಭಾವನೆ ಕಡಿಮೆ ಆಗಿದ್ದು, ಜನಹಿತಕ್ಕಿಂತ ವಾಣಿಜ್ಯ ಮನೋಭಾವನೆಯ ಆರ್ಥೀಕ ಫಲಾನುಭವಿ ದೃಷ್ಟಿಕೋನ ಹೊಂದಿರುವದರಿA ಇಂತಹ ರೈತ ವಿರೋಧ ಕಾನೂನುಗಳು ಜಾರಿಗೆ ಬರುತ್ತಿದೆ ಎಂದು ರವೀಂದ್ರ ನಾಯ್ಕ ವಿಷಾದಿಸಿದರು.

ಜಿಲ್ಲಾ ಸಂಘದ ಅಧ್ಯಕ್ಷ ಸತೀಶ ನಾಯ್ಕ ರೈತರ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಉಗ್ರರೂಪದ ಹೋರಾಟವನ್ನು ಮುಂದುವರೆಸಲಾಗುವುದೆAದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಶಿವಾನಂದ ಜೋಗಿ ಮುಂಡಗೋಡ, ನಾಗಣ್ಣ ಯಾಲಕ್ಕಿ ದಾಸನಕೊಪ್ಪ, ರೈತ ಧುರೀನ ನವೀನ್ ಜಡಗದವರ ಮಾತನಾಡಿದರು.

ಪ್ರತಿಭಟನೆಯ ನೇತ್ರತ್ವವನ್ನು ಇಬ್ರಾಹಿಂ ಸಾಬ ಸೈಯದ್, ತಿಮ್ಮ ಮರಾಠಿ, ನೇಹರೂ ನಾಯ್ಕ ಬಿಳೂರ, ಎಮ್ ಆರ್ ನಾಯ್ಕ ಕಂಡ್ರಾಜಿ, ಮೋಹನ ನಾಯ್ಕ ಅಂಡಗಿ, ದೇವರಾಜ ಕೊವೆರ ವದ್ದಳ, ರಾಜು ನಾಯ್ಕ ನರೇಬೈಲ್, ರೈತ ಸಂಘದ ಪ್ರವೀಣ್ ಜಕ್ಕಲಣ್ಣವರ ಮುಂತಾದವರು ವಹಿಸಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...