ಮಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ಬಾರೀ ಪ್ರತಿಭಟನೆ

Source: SO News | By Laxmi Tanaya | Published on 26th November 2020, 7:32 PM | Coastal News | Don't Miss |

ಮಂಗಳೂರು :  ಸಾರ್ವತ್ರಿಕ ಮುಷ್ಕರದ ಪ್ರಯುಕ್ತ ಕಾರ್ಮಿಕ ಸಂಘಟನೆಗಳಿಂದ ಮಂಗಳೂರು ಮಿನಿವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು .

 ಪ್ರತಿಭಟನೆಯನ್ನು ಉದ್ದೇಶಿಸಿ ವಿವಿಧ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಮುಖಂಡರು ಮಾತನಾಡಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವಸಂತ ಆಚಾರಿ , ಮಹಮ್ಮದ್ ರಫೀಕ್ , ಹೆಚ್ ವಿ ರಾವ್  , ರವಿಕಿರಣ್ ಪುಣಚ , ಮುನೀರ್ ಕಾಟಿಪಳ್ಳ , ವಾಸುದೇವ ಉಚ್ಚಿಲ್ , ರಾಘವ,   ಮಾಧವ , ಬಿ ಎಂ ದೇವಾಡಿಗ , ಚಿತ್ತರಂಜನ್ ಶೆಟ್ಟಿ , ಮನೋಹರ್ ಶೆಟ್ಟಿ ,  ಬಿ ಕೆ ಇಮ್ತಿಯಾಝ್ , ವಸಂತ್ ಕುಮಾರ್ ಬಜಾಲ್ ಮೊದಲಾದವರು ಪ್ರತಿಭಟನೆ ಯಲ್ಲಿ ಉಪಸ್ಥಿತರಿದ್ದರು ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಕನಿಷ್ಠ ಕೂಲಿಗಾಗಿ  ಹಲವಾರು ಸಮಯದಿಂದ ಹೋರಾಟ ನಡೆಸಲಾಗುತ್ತಿದೆ. ಇಂದಿಗೂ ಗುತ್ತಿಗೆ ಕಾರ್ಮಿಕರು ಮಾಸಿಕ ಸುಮಾರು 7ಸಾವಿರೂ ಗಳಿಗೆ ಕಡಿಮೆ ವೇತನದಲ್ಲಿ ದುಡಿಯುವ ಪರಿಸ್ಥಿತಿ ಇದೆ. ಸಾಮಾಜಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಒಪ್ಪಿಸಲಾಗುತ್ತಿದೆ. ಕೋರೋನಾ ಹೆಸರಿನಲ್ಲಿ ಲಾಕ್ ಡೌನ್ ನೆಪದಲ್ಲಿ ಜನರನ್ನು ಮನೆಯಲ್ಲಿರಿಸಿ ಕೇಂದ್ರ ಸರಕಾರ ಕಾರ್ಮಿಕ ರೈತ ದಲಿತ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು . 

ಸಂಕಷ್ಟ ಸಮಯದಲ್ಲಿ ದುಡಿಯುವ ವರ್ಗ ಕಾರ್ಮಿಕ ರೈತ ವರ್ಗದ ಹಿತ ಕಾಯಬೇಕಾದ ಸರಕಾರದ ಅದಾನಿ ಅಂಬಾನಿಯಂತಹ ಕಾರ್ಪೊರೇಟ್ ಬಂಡವಾಳಶಾಹಿಗಳ ಹಿತ ವನ್ನು ಕಾಯುತ್ತಿದೆ ನರೇಂದ್ರ ಮೋದಿ ಸರಕಾರ ಆಡಳಿತ ಬಂದ ಬಳಿಕ ದೇಶದಲ್ಲಿ ಖಾಸಗೀಕರಣ ಗೊಳ್ಳದ ಕ್ಷತ್ರಗಳಿಲ್ಲ  ಎಂಬುದಾಗಿ ಸುನಿಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು . ಪ್ರತಿಭಟನಾ ನಿರತರು ಕೇಂದ್ರ ಸರಕಾರದ ವಿರುದ್ಧ ವಿವಿಧ ಘೋಷಣೆಗಳನ್ನ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

Read These Next

ಮುಂಡಗೋಡ: ಡಾ. ಅಂಬೇಡ್ಕರ ಅಸ್ಪøಶ್ಯರಿಗೆ ಪ್ರತ್ಯೇಕವಾದ ಮತದಾನದ ಹಕ್ಕು ಹಾಗೂ ಪ್ರತ್ಯೇಕ ಮತಕ್ಷೇತ್ರ ಕೇಳಿದ್ದರು

ಜನ ಸಂಖ್ಯಾಧಾರಿತ ಮೇಲೆ ಮೀಸಲಾತಿಯನ್ನು ಹೆಚ್ಚಿಸಬೇಕು. ಮೀಸಲಾತಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರದ ಪ್ರಮುಖ ...