ಭಟ್ಕಳದಲ್ಲಿ ಮೊಗೇರ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಟನೆ. ಎಸ್ಸಿ ಸೌಲಭ್ಯ ಮುಂದುವರಿಸಲು ಆಗ್ರಹ.

Source: SO News | By Laxmi Tanaya | Published on 21st June 2022, 5:09 PM | Coastal News |

ಭಟ್ಕಳ : ಸರ್ಕಾರ ಹಿಂದೆ ನೀಡುತ್ತಿದ್ದ ಪರಿಶಿಷ್ಟ ಜಾತಿ ಸೌಲಭ್ಯಗಳನ್ನ ಪುನಃ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಮೊಗೇರ ಜನಾಂಗದ  ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.

ನಗರದ ಸಂಶುದ್ಧಿನ್ ವೃತ್ತದಲ್ಲಿ ಸೇರಿದ ವಿದ್ಯಾರ್ಥಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಪರ ಘೋಷಣೆ ಕೂಗುತ್ತಾ ಬಿಇಓ ಕಚೇರಿಗೆ ಮುತ್ತಿಗೆ ಹಾಕಿದರು.   ಕಳೆದ 91 ದಿನಗಳಿಂದ ಮೊಗೇರ ಸಮಾಜದವರು  ಹೋರಾಟ ನಡೆಸುತ್ತಿದ್ದರೂ ಸರ್ಕಾರ ಮಾತ್ರ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿಲ್ಲ. ವಿದ್ಯಾರ್ಥಿಗಳಾದ ತಮಗೂ ಅನ್ಯಾಯವಾಗುತ್ತಿದೆ. ಶಿಕ್ಷಣ ಇಲಾಖೆ ನಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಬಳಿ ತಮ್ಮ ಬೇಡಿಕೆಗಳನ್ನ  ಮುಂದಿಟ್ಟರು.  ಕಳೆದ 1976ರಿಂದ ಉತ್ತರಕನ್ನಡ ಜಿಲ್ಲೆಯ ಮೊಗೇರ ಸಮುದಾಯಕ್ಕೆ ಸಂವಿಧಾನಬದ್ದವಾಗಿ ಪರಿಶಿಷ್ಟ ಜಾತಿ ಸೌಲಭ್ಯ ನೀಡಲಾಗುತಿತ್ತು. 2004ರಿಂದ ಸರ್ಕಾರ ಸೌಲಭ್ಯ ನೀಡೋದನ್ನ ನಿಲ್ಲಿಸಿದೆ. ಶಾಲಾ ದಾಖಲಾತಿಯಲ್ಲಿ ನಮಗೆ ಎಸ್ಸಿ ಎಂದು ನಮೂದಿಸಿ ಎಂದು ಒತ್ತಾಯಿಸಿದರು.

 ಕಳೆದ 14 ವರ್ಷಗಳಿಂದ ಸರ್ಕಾರ ತಮ್ಮ ಹಕ್ಕನ್ನ ಕಸಿದುಕೊಂಡಿದೆ. ಪುನಃ ನಮ್ಮ ಸಮುದಾಯಕ್ಕೆ ಪರಿಶಿಷ್ಟ ಜಾತಿಯ ಸೌಕರ್ಯ ನೀಡಬೇಕೆಂಬುದು ಸಮುದಾಯದ ನಾಗರಿಕರ ಆಗ್ರಹವಾಗಿದೆ. ನಮ್ಮ ಅಪ್ಪಅಮ್ಮ ಎಲ್ಲರದ್ದು ಎಸ್ಸಿ ಪ್ರಮಾಣ ಪತ್ರವಿದೆ. ನಮಗೆ ಮಾತ್ರ ಎಸ್ಸಿ ಸೌಲಭ್ಯ ನೀಡುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರ

 ಹಿಂದೆ ಸರ್ಕಾರ ಮೊಗೇರ ಜನಾಂಗದವರಿಗೆ ಪರಿಶಿಷ್ಟ ಸೌಲಭ್ಯ ನಿಲ್ಲಿಸಿದಾಗ ಹೈಕೋರ್ಟ್ ಮತ್ತು ಸುಪ್ರಿಮ್ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಕೂಡ ಮೊಗೇರರು ಪರಿಶಿಷ್ಟರು ಎಂದು ಹೇಳಿದೆ. ಅಲ್ಲದೇ ರಾಷ್ಟ್ರೀಯ ಪರಿಶಿಷ್ಟ ಮತ್ತು ಪಂಗಡದ ಆಯೋಗ ಕೂಡ ಮೊಗೇರರಿಗೆ ಪರಿಶಿಷ್ಟ ಸೌಲಭ್ಯ ಪಡೆಯಲು ಅರ್ಹರು ಎಂದು ಹೇಳಿದೆ. ಹೀಗಾಗಿ ನಮಗೆ ಸೌಲಭ್ಯ ನೀಡಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
 
ಜಾತಿ ವಿಚಾರದಲ್ಲಿ  ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. 

ಭಟ್ಕಳ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಕಳೆದ 91 ದಿನಗಳಿಂದ ಮೊಗೇರ ಸಮುದಾಯದ ನಾಗರಿಕರು ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದರೂ ಮೀನಮೇಷ ಎಣಿಸಲಾಗುತ್ತಿದೆ‌. ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲದಿದ್ದಲ್ಲಿ ನಾವು ಶಾಲೆಗೆ ಹೋಗೋದಿಲ್ಲ ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ. 

ಇನ್ನೂ ಮೂರು ದಿನದೊಳಗೆ ನಮ್ಮ ಬೇಡಿಕೆ ಈಡೇರಿಸಬೇಕೆಂದು ವಿದ್ಯಾರ್ಥಿಗಳ ಪರವಾಗಿ ತಿಲಕ ಮೊಗೇರ, ಸಮೃದ್ಧಿ ಮೊಗೇರ, ಯಶಸ್ವಿ ಹೇಳಿದ್ದಾರೆ.

ಬಿಇಓ ಕಚೇರಿ ಬಳಿಕ ಸುರಿಯುತ್ತಿರುವ ಮಳೆಯ ನಡುವೆ ವಿದ್ಯಾರ್ಥಿಗಳು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...