ತೈಲ ಬೆಲೆ ಹೆಚ್ಚಳದ ವಿರುದ್ಧ ಪ್ರತಿಭಟನೆ ನ.5ರಂದು ಲಾರಿ ಮಾಲಕರಿಂದ ವಿಧಾನಸೌಧ ಮುತ್ತಿಗೆ

Source: VB News | By I.G. Bhatkali | Published on 25th October 2021, 10:57 AM | State News | National News |

ಬೆಂಗಳೂರು:  ರಾಜ್ಯ ಸರಕಾರ ಈ ಕೂಡಲೇ ಇಂಧನ ಬೆಲೆ ತಗ್ಗಿಸುವಂತೆ ಆಗ್ರಹಿಸಿ ನ5ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ಫೆಡರೇಷನ್ ಆಫ್ ಕರ್ನಾಟಕ ಸೇಟ್ ಲಾರಿ ಓನರ್ಸ್ ಆ್ಯಂಡ್ ಏಜೆಂಟ್ಸ್ ಅಸೋಸಿಯೇಷನ್ ತಿಳಿಸಿದೆ.

ರವಿವಾರ ಈ ಕುರಿತು ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅಸೋಸಿಯೇಷನ್‌ ಅಧ್ಯಕ್ಷ ಜಿ.ಆರ್. ಷಣುಗಪ್ಪ, ಕೋವಿಡ್ ಆರ್ಥಿಕ ನಷ್ಟ ಅನುಭವಿಸುತ್ತಿದ್ದರೂ ಪ್ರತಿ ನಿತ್ಯ ಡಿಸೇಲ್ ದರ ಏರಿಕೆಯಾಗುತ್ತಿದೆ. ಸದ್ಯ ಡಿಸೇಲ್ ಬೆಲೆ ಲೀಟರ್‌ಗೆ 103 ರೂ. ಇದೆ. 2019ರ ಸೆಪ್ಟೆಂಬರ್‌ನಿಂದ ಈವರೆಗೆ ಡಿಸೇಲ್ ಮೇಲೆ ಒಟ್ಟಾರೆ 35 ರೂ. ಹೆಚ್ಚಳವಾಗಿದೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದಕ್ಕೆ ಹೆಚ್ಚು ಮ ತೆರಿಗೆ ಹಾಕುತ್ತಿವೆ. ಇದರಿಂದ ಪ್ರತಿ ಕಿ.ಮೀ.ಗೆ 12 ರೂ. ಹೆಚ್ಚಿನ ಹೊರೆ ಬೀಳುತ್ತಿದೆ. ಶೀಘ್ರದಲ್ಲೇ ಈ ದರವನ್ನು ಕಡಿಮೆಗೊಳಿಸದಿದ್ದು ವಿಧಾನಸೌಧ ಹಾಗೂ ಸಾರಿಗೆ ಕಚೇರಿಗಳಿಗೆ ಮುತ್ತಿಗೆ ಹಾಕಲಾಗು ವುದು ಎಂದು ಎಚ್ಚರಿಕೆ ನೀಡಿದರು. ಕೇಂದ್ರ ಸರಕಾರ ಹಣಕಾಸು ಸಂಸ್ಥೆಗಳಿಗೆ ಅಂದಾಜು 70 ಸಾವಿರ ಕೋಟಿ ರೂ. ನೆರವು ನೀಡಿದೆ. ಆದರೆ, ಫೈನಾನ್ಸ್ ಕಂಪನಿಗಳು ಸಾಲ ಪಡೆದಿರುವ ವಾಹನ ಮಾಲಕರಿಗೆ ಅಧಿಕ ಬಡ್ಡಿ ಹಾಕುತ್ತಿವೆ. ವಾಹನಗಳನ್ನು ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮನನೊಂದು ಮಾಲಕರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸ್ಥೆಗಳ ಜತೆ ಚರ್ಚಿಸಬೇಕು ಎಂದ ಅವರು, ಪರವಾನಿಗೆ ಪರ್ಮಿಟ್ ಅವಧಿಯನ್ನು ಅ.31ರವರೆಗೆ ವಿಸ್ತರಿಸಿದ್ದರೂ ಸಾರಿಗೆ ಇಲಾಖೆಯ ಅಧಿಕಾರಿಗಳು ತೆರಿಗೆ ಕಟ್ಟುವಂತೆ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆಸೋಸಿಯೇಷನ್' ಪ್ರಧಾನ ಕಾರ್ಯದರ್ಶಿ ಕೆ.ಎನ್. ಅಶ್ವಥ್ ಮಾತನಾಡಿ, ಹೊಸ ವಾಹನ ಗಳು, ಬಿಡಿಭಾಗಗಳು, ಡೀಸೆಲ್ ಮತ್ತು ಟೋಲ್ ಸೇರಿ ಹಲವು ತೆರಿಗೆಗಳ ಭಾರದಿಂದ ಸರಕು ಸಾಗಣೆ ಉದ್ಯಮ ನಷ್ಟದಲ್ಲಿದೆ. ಸಾವಿರಾರು ಮಾಲಕರು ವಾಹನಗಳ ದಾಖಲೆಗಳನ್ನೇ ಸಾರಿಗೆ ಇಲಾಖೆಗೆ ಹಿಂದಿರುಗಿಸುತ್ತಿದ್ದಾರೆ ಎಂದರು.

Read These Next

ವಿಶ್ವ ವಿಕಲಚೇತನರ ದಿನಾಚರಣೆ ಕಾನೂನು ಸೇವಾ ಪ್ರಾಧಿಕಾರದಿಂದ ಸಹಕಾರ, ನ್ಯಾಯಾಧೀಶೆ ಪುಪ್ಷಲತಾ.

ಧಾರವಾಡ : ವಿಕಲಚೇತನರಿಗೆ ಅನುಕಂಪದ ಕಾರಣದಿಂದ ಅವಕಾಶ ವಂಚಿತರಾಗಬಾರದು, ಇಂತಹ ಮಕ್ಕಳಿಗೆ ಅಸಡ್ಯೆ ತೋರದೆ ಕಾಳಜಿ ಪೂರ್ವಕವಾಗಿ ...

ಎಸ್ ಡಿ ಎಂ ಹೊರ ಮತ್ತು ಒಳ ರೋಗಿಗಳ ವಿಭಾಗ ಸೇವೆಗಳ ಪುನರಾರಂಭಕ್ಕೆ ಷರತ್ತುಬದ್ಧ ಅನುಮತಿ : ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ.

ಧಾರವಾಡ : ಸತ್ತೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ(ಎಸ್‌ಡಿಎಂಸಿಹೆಚ್)ಯ ಆವರಣದಲ್ಲಿ ಕಳೆದ ...

ಗೃಹರಕ್ಷಕರ ಈಶಾನ್ಯ ವಲಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ ದೈಹಿಕ, ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಯಲ್ಲಿ ಪಾಲ್ಗೊಳ್ಳಿ: ವಿಮ್ಸ್ ನಿರ್ದೇಶಕ ಗಂಗಾಧರ್

ಬಳ್ಳಾರಿ : ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಯಾವುದಾದರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿಮ್ಸ್ ನಿರ್ದೇಶಕ ...