‘ಕೊರೋನಾ ವಾರಿಯರ್ಸ್’ ಗಳ ಸಹಾಯಕ್ಕೆ ಭಟ್ಕಳದ ಧೃತಿ ಸರ್ಜಿಕಲ್ ಫ್ಯಾಕ್ಟರಿ; ಮುಖಗವಚ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರು

Source: sonews | By Staff Correspondent | Published on 1st April 2020, 7:00 PM | Coastal News | Special Report | Don't Miss |

ಭಟ್ಕಳ: ದೇಶದಲ್ಲಿ ಕೊರೋನಾ ಸೋಂಕು ಪ್ರವೇಶಿಸಿದ ನಂತರದಲ್ಲಿ ದೇಶದ ರಾಜಧಾನಿಯಿಂದ ಹಿಡಿದು ಸಣ್ಣಪುಟ್ಟ ಗ್ರಾಮಗಳಲ್ಲಿಯೂ ಕೂಡ ಮಾಸ್ಕ್ (ಮುಖಗವಚ) ಗೆ ಎಲ್ಲಿಲ್ಲದ ಬೇಡಿಕೆಯುಂಟಾಗುತ್ತಿದೆ. ಈಗ ಎಲ್ಲಿಯೂ ಮತ್ತು ಯಾವುದೇ ಮೆಡಿಕಲ್ಸ್ ಗಳಲ್ಲಿ ಮಾಸ್ಕ್ ಲಭ್ಯವಿಲ್ಲ. ಜನರು ಮಾಸ್ಕ್ ತಂದುಕೊಡಿ ಎನ್ನುವ ಬೇಡಿಕೆಯಂತೂ ದಿನವು ಇಡುತ್ತಿದ್ದಾರೆ. ಸದ್ಯ ದೇಶವ್ಯಾಪಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಘೋಷಣೆಯಾಗಿದ್ದು, ಬಹುತೇಕ ಎಲ್ಲಾ ಕಂಪೆನಿಗಳು, ವ್ಯವಹಾರ ಕೇಂದ್ರಗಳು, ಕಾರ್ಮಿಕರನ್ನು ಅವಲಂಬಿಸಿರುವ ಫ್ಯಾಕ್ಟರಿಗಳು ಬಂದ್ ಆಗಿವೆ. ಆದರೆ, ಭಟ್ಕಳ ತಾಲೂಕಿನ ಬೆಳಕೆಯ ಧ್ರುತಿ ಸರ್ಜಿಕಲ್ ಸೊಲ್ಯುಶನ್ ಪ್ರೈವೇಟ್ ಲಿಮಿಟೆಡ್‍ನ ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಕೊರೋನಾ ಕರ್ತವ್ಯನಿರತ ವೈದ್ಯರು, ನರ್ಸ್ ಹಾಗೂ ಆಸ್ಪತ್ರೆಗಳಿಗೆ ಅವಶ್ಯಕವಾಗಿರುವ ಕಿಟ್ ತಯಾರಿಕೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದು ಮುಖಗವಚ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. 

ಇಲ್ಲಿನ ಸಿಬ್ಬಂದಿಗಳು ದೇಶ ಸೇವೆ ಹಾಗೂ ಆಪತ್ಕಾಲದಲ್ಲಿ ನೆರವಾಗುವ ಉದ್ದೇಶದಿಂದ ಹಗಲಿರುಳು ಕಿಟ್ ತಯಾರಿಕೆಯಲ್ಲಿ ಪರಿಶ್ರಮಪಡುತ್ತಿದ್ದಾರೆ. ಬೆಳಕೆಯ ಧೃತಿ ಸರ್ಜಿಕಲ್‍ನ ಈಗಾಗಲೇ 25 ಸಾವಿರ ಪರ್ಸನಲ್ ಪೆÇ್ರಟೆಕ್ಟೀವ್ ಇಕ್ವೀಪ್‍ಮೆಂಟ್ಸ್ (ಪಿಪಿಇ) ತಯಾರಿಸಲಾಗಿದ್ದು, ಇನ್ನು ಸಹ ಕಿಟ್ ತಯಾರಿಕೆಗೆ ಎಲ್ಲೆಡೆಯಿಂದ ಬೇಡಿಕೆ ಹಚ್ಚಾಗಿದ್ದು, ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲವಾಗಿದೆ. ಈ ನಡುವೆ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಹಕಾರದಿಂದ ಕಿಟ್ ತಯಾರಿಕೆಗೆ ಎಲ್ಲಾ ಸಹಕಾರ, ಬೆಂಬಲ ವ್ಯಕ್ತವಾಗಿದ್ದು, ಇದರಿಂದ ಕಿಟ್ ತಯಾರಿಕೆಯಲ್ಲಿ ಕಾರ್ಮಿಕರಿಗೂ ಇನ್ನಷ್ಟು ಉತ್ತೇಜನ ಸಿಕ್ಕಿದಂತಾಗಿದೆ.

ಪ್ರಸ್ತುತ ಪಿಪಿಇ ತಯಾರು ಮಾಡಲಾಗುತ್ತಿದ್ದು, ಚೀನಾದಲ್ಲಿ 2 ತಿಂಗಳ ಹಿಂದೆ ಕೊರೋನಾ ಕಂಡುಬಂದಾಗಲೇ ಬೆಂಗಳೂರಿನಿಂದ ಇದಕ್ಕೆ ಬೇಡಿಕೆ ಬಂದಿತ್ತು. ಎರಡು ತಿಂಗಳಿಂದ ಇದನ್ನು ತಯಾರಿಸುತ್ತಿದ್ದು, ಪ್ರಸ್ತುತ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಿಂದ ವ್ಯಾಪಕ ಬೇಡಿಕೆಯಿದೆ. ಬೇಡಿಕೆಗೆ ತಕ್ಕಷ್ಟು ಪೂರೈಸಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಕಲಬುರಗಿ ಜಿಲ್ಲಾಧಿಕಾರಿ ಸಹ ಇವರನ್ನು ಸಂಪರ್ಕಿಸಿದ್ದು, ಕಿಟ್ ಪೂರೈಕೆಗೆ ಅವರು ಬೇಡಿಕೆಯನ್ನಿಟ್ಟಿದ್ದು, ಪೂರೈಕೆಯಾಗುತ್ತಿದೆ. ಜೊತೆಗೆ ರಾಜ್ಯ, ಕೇಂದ್ರ ಸರಕಾರದಿಂದಲೂ 100ಕ್ಕೆ 100 ಸಹಕಾರ ಸಿಕ್ಕಿದ್ದು, ಫ್ಯಾಕ್ಟರಿಯಲ್ಲಿನ ಕಾರ್ಮಿಕರು ಸಹ ದೇಶ ಸೇವೆಯ ರೀತಿಯ ಹಗಲಿರುಳು ಕೆಲಸ ನಡೆಸುತ್ತಿದ್ದಾರೆ. ಫ್ಯಾಕ್ಟರಿಗಳಿಗೆ ವೃತ್ತ ನಿರೀಕ್ಷಕರು, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ. ಕಂಪೆನಿ ಸಿಬ್ಬಂದಿ ಕೂಡ ಕೊರೋನಾ ಅಗತ್ಯ ಪರಿಕರ ಪೂರೈಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬಹು ಬೇಡಿಕೆಯ ಪಿಪಿಇ ಈ ಭಾಗದಲ್ಲಿ ಸಿದ್ಧವಾಗುತ್ತಿರುವುದು ಇನ್ನಷ್ಟು ಹೆಮ್ಮೆಯ ವಿಚಾರವಾಗಿದೆ. ಮಾರಕ ರೋಗ ಕೊರೋನಾ ವಕ್ಕರಿಸಿದ ದಿನದಿಂದ ದೃತಿ ಸರ್ಜಿಕಲ್ ಫ್ಯಾಕ್ಟರಿಗೆ ಬಿಡುವು ಇಲ್ಲ ಎನ್ನುವಂತಾಗಿದೆ. ಈ ತುರ್ತು ಸಂದರ್ಭದಲ್ಲಿ ವ್ಯವಹಾರಿಕವಾಗಿ ಕಿಟ್ ಉತ್ಪಾದನೆಯನ್ನು ನೋಡದೆ, ಸೇವೆಯಂತೆ ಸಂಸ್ಥೆಯನ್ನು ಹಗಲು ರಾತ್ರಿ ನಡೆಸುತ್ತಿದ್ದಾರೆ.
ವೈದ್ಯರಿಗೆ ಗ್ಲೌಸ್, ತಲೆಗೆ ಧರಿಸಿಸುವ ಕ್ಯಾಪ್, ಮಾಸ್ಕ್, ಗೌನ್, ಶೂ ಲೆಗ್ಗಿನ್ಸ್, ಏಪ್ರಾನ್‍ಗಳು ಕೂಡ ಇಲ್ಲಿ ಸಿದ್ಧಗೊಳ್ಳುತ್ತಿವೆ. ಇದನ್ನು ವಿವಿಧ ಸ್ಥರಗಳಲ್ಲಿ ಇಲ್ಲಿ ಉತ್ಪಾದಿಸಲಾಗುತ್ತಿದೆ. ಇಲ್ಲಿನ ನೌಕರರ ಆರೋಗ್ಯವನ್ನು ಮನದಲ್ಲಿರಿಸಿ ಅವರಿಗೆ ವೈದ್ಯಕೀಯ ಚೆಕ್ ಅಪ್, ಧರಿಸಲು ಮಾಸ್ಕ್, ಗ್ಲೌಸ್, ತಲೆಗೆ ಸ್ಕಾರ್ಪ್ ನೀಡಲಾಗುತ್ತಿದೆ. ಹೈಜಿನ್ ಉದ್ದೇಶಕ್ಕೆ ಬಿಸಿ ನೀರು ನೀಡಲಾಗುತ್ತಿದ್ದು, ತೊಳೆಯಲು ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುತ್ತಿದೆ.

ಕಾರ್ಮಿಕ ಸ್ನೇಹಿ ಫ್ಯಾಕ್ಟರಿ: ಕಳೆದ ಮೂರು ವರ್ಷದ ಹಿಂದೆ ತಯಾರಾದ ಸರ್ಜಿಕಲ್ ಫ್ಯಾಕ್ಟರಿ ಇದಾಗಿದ್ದು, ಕೆಲಸಗಾರರನ್ನು ತೀರಾ ಸ್ನೇಹ ಬಾಂಧವ್ಯದಿಂದ ನೋಡಿಕೊಳ್ಳುತ್ತಿದ್ದು, ಕೆಲಸಗಾರರಿಗೆ ಎಲ್ಲಾ ರೀತಿಯ ಮೂಲಸೌಕರ್ಯಗಳ ಜೊತೆಗೆ ಉತ್ತಮ ಸಂಬಳ, ಆರೋಗ್ಯ ವಿಮಾ, ಸೇವಾ ಭದ್ರತೆ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಮುಂಜಾನೆ 8.30ರಿಂದ ಸಂಜೆ 5 ಗಂಟೆಯವರೆಗೆ ನಿತ್ಯ ಕೆಲಸದ ಅವಧಿ ನಡೆಯುತಲಿದ್ದು, ಈ ಕೊರೋನಾ ಮಹಾಮಾರಿ ಆರಂಭದ ದಿನದಿಂದ ಓವರ್‍ಟೈಮ್ ಕೆಲಸ ಮಾಡುತ್ತಿದ್ದಾರೆ. ಒಟ್ಟು 150ಕ್ಕೂ ಅಧಿಕ ಕಾರ್ಮಿಕರು ವಿವಿಧ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸರ್ಜಿಕಲ್ ಫ್ಯಾಕ್ಟರಿಗೆ ಬೆನ್ನೆಲುಬಾಗಿ ಕಾರ್ಮಿಕರು ನಿಂತಿದ್ದಾರೆ. ಭಟ್ಕಳ ಸುತ್ತಮುತ್ತ ಸ್ಥಳೀಯವಾಗಿ ಯುವತಿಯರು, ಯುವಕರು ಸರ್ಜಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲರು ನುರಿತು ಕೆಲಸಗಾರರಾಗಿದ್ದಾರೆ. ಈ ಕೊರೋನಾ ಮಹಾಮಾರಿ ಆರಂಭದ ದಿನದಿಂದ ಬಿಹಾರ ರಾಜ್ಯದಿಂದಲೂ ಫ್ಯಾಕ್ಟರಿಯಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ.
ಹೊರರಾಜ್ಯದಿಂದ ಕಚ್ಚಾ ವಸ್ತುಗಳ ಖರೀದಿ: ಜಿಲ್ಲೆಯಲ್ಲಿರುವ ಏಕೈಕ ಸರ್ಜಿಕಲ್ ಫ್ಯಾಕ್ಟರಿ ಇದಾಗಿದ್ದು, ಪಿಪಿಇ ಕಿಟ್ ತಯಾರಿಕೆಗೆ ಬೇಕಾದ ಎಲ್ಲಾ ಕಚ್ಛಾ ವಸ್ತುಗಳನ್ನು ಹೊರರಾಜ್ಯವಾದ ಗುಜರಾತ್, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಆಂಧಪ್ರದೇಶ, ದೆಹಲಿ, ಕೇರಳ, ಪುಣೆ ಹಾಗೂ ರಾಜ್ಯದ ಬೆಂಗಳೂರಿನಿಂದಲೂ ತರಿಸಿಕೊಳ್ಳಲಾಗುತ್ತಿದೆ.
ಈ ಮೊದಲೇ ಕಚ್ಛಾ ಸಾಮಗ್ರಿಯನ್ನು ಫ್ಯಾಕ್ಟರಿಯಲ್ಲಿ ಸಂಗ್ರಹಿಸಲಾಗಿದ್ದು, ಹೀಗಾಗಿ ಈ ತುರ್ತು ಸಂದರ್ಭದಲ್ಲಿ ಕೊರತೆ ಎದುರಾಗಿಲ್ಲ. ಇದರ ಜೊತೆಗೆ ಜಿಲ್ಲಾಧಿಕಾರಿ ಸಹಕಾರದಿಂದ ನಿರಂತರವಾಗಿ ಉತ್ಪಾದನೆ ಮಾಡಿ ರಾಜ್ಯ ಮೂಲೆ ಮೂಲೆಗೆ ಈ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ.

ಕಿಟ್ ಹಾಗೂ ಮಾಸ್ಕ್ ತಯಾರಿಕೆ ಹೆಚ್ಚಿಸಲು ಅಗತ್ಯ ಕಚ್ಚಾ ವಸ್ತುಗಳನ್ನು ಹೆಲಿಕ್ಯಾಪ್ಟರ್‍ನಿಂದ ಅನೂಕೂಲವಾಗುವ ಸ್ಥಳಕ್ಕೆ ಪೂರೈಕೆ ನೀಡಲಿದ್ದು, ಪಿಪಿಇ ಕಿಟ್ ಹಾಗೂ ಮಾಸ್ಕ್ ತಯಾರಿಕೆಗೆ ಎಲ್ಲಾ ಸಹಕಾರ ನೀಡುವುದಾಗಿ ಪ್ರಧಾನಮಂತ್ರಿ ಕಛೇರಿಯಿಂದ ದೂರವಾಣಿ ಕರೆ ಬಂದಿದೆ. ಇದು ಸಹ ಇನ್ನಷ್ಟು ಪ್ರೋತ್ಸಾಹಕ್ಕೆ ಕಾರಣವಾಗಿದೆ.  – ಶರತಕುಮಾರ್ ಶೆಟ್ಟಿ, ಫ್ಯಾಕ್ಟರಿಯ ವ್ಯವಸ್ಥಾಪಕ ನಿರ್ದೇಶಕ

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...