ಆಚಾರ್ಯ ಪುರುಷ ಪ್ರವಾದಿ ಮುಹಮ್ಮದ್(ಸ) - ಗಣಪತಿ.ಎಸ್.ಹೆಗಡೆ

Source: sonews | By Staff Correspondent | Published on 11th November 2019, 12:11 AM | Coastal News | Special Report | Islam | Don't Miss |

ಇಂದು ಜಗತ್ತಿನಲ್ಲಿ ಬೋಧಕರು ಸಿಗಬಹುದು ಆದರೆ ಆಚಾರ್ಯರು ಸಿಗುವುದು ಕಷ್ಟ. ಬೋಧಕರೆಂದರೆ ಕೇವಲ ತಪ್ಪು ಒಪ್ಪುಗಳನ್ನು ಹೇಳುವವರು ಮತ್ತು ಜ್ಞಾನ ಒದಗಿಸುವವರು. ಅದು ಕೇವಲ ಇನ್ನೊಬ್ಬರಿಗೆ ಉಪದೇಶ ಮಾಡಲಷ್ಟೇ ಸೀಮಿತವಾಗಿರಬಹುದು. ಆದರೆ ಆಚಾರ್ಯರು ಎಂದರೆ ಸ್ವತಃ ಆಚರಿಸುವವರು. ಬೋಧನೆಯ ಜೊತೆಗೆ ಸ್ವತಃ ಆ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದನ್ನೇ ಜೀವನ ಕ್ರಮವನ್ನಾಗಿ ಮಾಡಿಕೊಳ್ಳುವವರು. ಹಾಗೇ ನೋಡಿದಾಗ ಪ್ರವಾದಿ ಮುಹಮ್ಮದರನ್ನು(ಸ) ಬೋಧಕರಿಗಿಂತ ಇನ್ನೊಂದು ಹಂತ ಮೇಲಕ್ಕೆ ಹೋಗಿ ಆಚಾರ್ಯರು ಎಂದು ಕರೆಯುವುದು ಯೋಗ್ಯವೆನಿಸುತ್ತದೆ. ಕಾರಣ ಅವರ ಜೀವನ ಕ್ರಮವೇ ಇನ್ನೊಬ್ಬರಿಗೆ ಅನುಕರಿಸಲು ಯೋಗ್ಯವಾದದ್ದು. 

ಪ್ರವಾದಿ ಮುಹಮ್ಮದರು ಒಬ್ಬ ತಂದೆಯಾಗಿ, ಒಬ್ಬ ಪತಿಯಾಗಿ, ಒಬ್ಬ ವರ್ತಕರಾಗಿ, ಒಬ್ಬ ಯಜಮಾನನಾಗಿ ಹೇಗೆ ಸಮಾಜದಲ್ಲಿ ಆಚಾರ್ಯರಾಗಿ ಕಾಣಿಸಿಕೊಂಡರು, ಸಮಾಜದಲ್ಲಿ ಸಮಾನತೆ ತರಲು ಹೇಗೆ ಶ್ರಮಿಸಿದರು ? ಎನ್ನುವ ಬಹು ಮುಖ್ಯವಾದ ಅಂಶಗಳನ್ನು ನಾವು ಅವಲೋಕಿಸಬೇಕಿದೆ.
        
            ಸಮಾನತೆಯೆನುವುದು ಭಿಕ್ಷೆಯು ಅಲ್ಲ
            ಕಣ್ಣಲಿ ತೋರುವ ಕನಿಕರವಲ್ಲ
            ಆರ್ತನಾದವನ ಹೃದಯದಿ ಇಟ್ಟು    
            ಕಂಬನಿ ಒರೆಸುವ ಕಾಯಕ ನೋಡು

ಪ್ರವಾದಿ ಮುಹಮ್ಮದ್(ಸ)ರು ಆದರ್ಶ ವರ್ತಕರು- ವರ್ತಕರೆಂದರೆ ನಮಗನಿಸುವುದು ಸುಳ್ಳು ಹೇಳುವವರು, ಸುಳ್ಳು ಹೇಳದೇ ವ್ಯಾಪಾರ ಮಾಡುವುದು ಯಾವುದೇ ದಿನಗಳಲ್ಲೂ ಬಲು ಕಷ್ಟ. ಈ ವ್ಯಾಪಾರದಲ್ಲಿಯೂ ಮುಹಮ್ಮದರು ಎಷ್ಟೊಂದು ಪ್ರಾಮಾಣಿಕತೆ ಮೆರೆದರು! ಅಲ್ಲಿಯೂ ಸಮಾನತೆಯ ಅಂಶವನ್ನು ಮುಹಮ್ಮದ್(ಸ) ಅವರ ಜೀವನದಲ್ಲಿ ಹುಡುಕಬಹುದು. ಮಕ್ಕಾದ ಉಕಾಝ್ ಸಂತೆಯಲ್ಲಿ ಸುಂದರ ತರುಣನಾದ ಮುಹಮ್ಮದ್ ವ್ಯಾಪಾರದಲ್ಲಿ ನಿರತನಾಗಿ ತನ್ನ ಅಂಗಡಿಯ ಮುಂದೆ ನಿಂತು ಸಾಮಗ್ರಿ ಕೊಳ್ಳುವವರಿಗೆ ವಸ್ತುಗಳ ಗುಣದೋಷಗಳನ್ನು ಹೇಳಿ ಅತೀ ಕಡಿಮೆ ಲಾಭವನ್ನು ಪಡೆದು ವ್ಯಾಪಾರ ಮಾಡುತ್ತಿರುವುದು ಉಳಿದವರಿಗೆ ಆದರ್ಶಪ್ರಾಯವಾಗಿತ್ತು ಅವರೆಂದೂ ಅತಿಯಾದ ಲಾಭದ ಹಿಂದೆ ಬೀಳಲಿಲ್ಲ. ಅದೇ ಸಮಯದಲ್ಲಿ ಉಕಾಝ್ ಸುತ್ತಲೂ ಬಡ್ಡಿಯನ್ನೇ ದಂದೆ ಮಾಡಿಕೊಂಡು ಎಷ್ಟೋ ಸಿರಿವಂತರು ವಾಸಿಸುತ್ತಿದ್ದರು. ಈ ವ್ಯಾಪಾರಿಗಳು ಆ ಬಡ್ಡಿಕೋರರಿಂದ ಹಣ ತಂದು ವ್ಯಾಪಾರ ಮಾಡಿ ಬಡ ಗ್ರಾಹಕರ ಹಣವನ್ನು ಪೀಕುತ್ತಿದ್ದರು. ಏಕಕಾಲದಲ್ಲಿ ಬಡ್ಡಿಕೋರರು ಮತ್ತು ವ್ಯಾಪಾರಿಗಳು ಶ್ರೀಮಂತರಾಗುತ್ತಿದ್ದಾರೆಂದರೆ ಒಂದೆಡೆ ಈ  ಗ್ರಾಹಕ ಬಡವನಾಗುತ್ತಿದ್ದಾನೆ ಎಂದೇ ಅರ್ಥ. ಅದಕ್ಕಾಗಿ ಕನಿಷ್ಟ ಲಾಭಗಳಿಕೆಯಿಂದ ಈ ಮುಹಮ್ಮದರು ಜನ ಮೆಚ್ಚುಗೆಯ ವರ್ತಕರಾಗಿ ರೂಪುಗೊಂಡರು. ಗ್ರಾಹಕರು ಕಷ್ಟಪಟ್ಟು ಗಳಿಸಿದ  ಹಣವು ಅವರ ಹತ್ತಿರ ಉಳಿದುಕೊಳ್ಳಬೇಕು. ಇದು ಗ್ರಾಹಕರನ್ನು ಬಡತನಕ್ಕೆ ನೂಕಬಾರದು ಎನ್ನುವುದು ಅವರ ಧ್ಯೇಯವಾಗಿತ್ತು . ಇದು ಆರ್ಥಿಕ ಸಮಾನತೆಗೆ ಎಡೆ ಮಾಡಿಕೊಡುವ ಅಂಶವಾಗಿತ್ತು. 


ಮಹಿಳೆಯರ ಬಗ್ಗೆ ಗೌರವ- ಪ್ರವಾದಿ ಮುಹಮ್ಮದರು ಸುರದ್ರೂಪಿ ಯುವಕರಾಗಿದ್ದರು. ಅವರು ವರಿಸಿದ್ದು ತನಗಿಂತ ಹದಿನೈದು ವರ್ಷ ಹಿರಿಯಳಾದ ಖದೀಜಾ ಎನ್ನುವ ವಿಧವೆಯನ್ನು. ಮೆಕ್ಕಾದಲ್ಲಿ ವಿಧವೆಯಯರ ಬಾಳು ನರಕ ಸದೃಶವಾಗುತ್ತಿದ್ದ ಆ ಕಾಲದಲ್ಲಿ ಮಹಿಳಾ ಸಮಾನತೆಗಾಗಿ ಒಬ್ಬ ವಿಧವೆಯನ್ನು ವರಿಸುವುದೆಂದರೆ ಚಿಕ್ಕ ವಿಷಯವಲ್ಲ. ಒಬ್ಬ ಮಹಿಳೆಯ ಮೇಲಿನ ಗೌರವ ಅದರಲ್ಲೂ ವಿಧವೆಯರನ್ನು ಸಮಾಜ ಪ್ರತ್ಯೇಕವಾಗಿ ಕಾಣದೇ ಅವರಿಗೂ ಗೌರವ ಕೊಟ್ಟು ಸಮಾಜದಲ್ಲಿ ಸಮಾನತೆಯಿಂದ ಬಾಳಲು ಅವಕಾಶ ಮಾಡಿಕೊಡಿ ಎನ್ನುವುದನ್ನು ಸ್ವತಃ ಆಚರಿಸಿ ತೋರಿದ ಮಹಾ ಆಚಾರ್ಯರಾಗಿ ಜನತೆಗೆ ಕಾಣಿಸಿಕೊಂಡರು. ಅಷ್ಟೇ ಅಲ್ಲದೇ  ಒಬ್ಬ ಪುರುಷನಾದವನು ತನ್ನ ತಾಯಿ, ಪತ್ನಿ ಮತ್ತು ಮಗಳಿಗೆ ಅವರ ಹಕ್ಕು , ಗೌರವ ಮತ್ತು ಸ್ಥಾನಮಾನಗಳಲ್ಲಿ ಒಂದು ಚೂರೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದರು. ತಾವೂ ಸಹ ತಮ್ಮ ಪ್ರತೀ ವ್ಯವಹಾರದಲ್ಲಿ ಮಡದಿಯಾದ ಖದೀಜಾರವರ ಸಲಹೆ ಪಡೆಯುತ್ತಿದ್ದರು. ಅಂದು ಹೆಣ್ಣನ್ನು ಜೀವಂತವಾಗಿ ಹೂಳುತ್ತಿದ್ದ ಕೆಟ್ಟ ಸಂಪ್ರದಾಯ ಆ ಪ್ರದೇಶದಲ್ಲಿ ನಡೆಯುತ್ತಿತ್ತು. ಅದರ ವಿರುದ್ಧ ಸಮರವನ್ನೇ ಸಾರಿದರು. ಅನೇಕ ಸಂಪ್ರದಾಯವಾದಿಗಳ ವಿರೋಧವನ್ನು ಕಟ್ಟಿಕೊಂಡರು. ಯಾವ  ವ್ಯಕ್ತಿಯು ಹೆಣ್ಣನ್ನು ರಕ್ಷಿಸಿ, ಗೌರವ ನೀಡುತ್ತಾನೋ ಆತನು ನನ್ನ ಜೊತೆ ಸ್ವರ್ಗ ಸೇರುವನು ಎಂದು ಹೇಳಿದರು.
           
ಶುಶ್ರೂಕಿಯಂತೆ ಸೇವೆಗೈದವರು- ದವಾಖಾನೆಗಳಲ್ಲಿ ಸೇsÀವೆ ಸಲ್ಲಿಸುವ ಶುಶ್ರೂಷಕಿಯರಿಗೆ ಬಡವ-ಬಲ್ಲಿದ, ಮೇಲು-ಕೀಳು ಎನ್ನುವ ಬೇಧವಿರುವುದಿಲ್ಲ.. ಪ್ರವಾದಿ ಮುಹಮ್ಮದರೂ(ಸ) ಸಹ ಶುಶ್ರೂಕಿಯಂತೆಯೇ ಆಗಿದ್ದರು. ಒಮ್ಮೆ ಯಹೂದಿಯ ಪ್ರಯಾಣಿಕನೊಬ್ಬ ಪ್ರವಾದಿ ಮುಹಮ್ಮದ್‍ರ(ಸ) ಮನೆಯಲ್ಲಿ ರಾತ್ರಿ ತಂಗಲು ಬಂದಾಗ ಬೆಳಗಾಗುವಷ್ಟರಲ್ಲೇ ಹಾಸಿಗೆಯಲ್ಲೇ ಮಲ ವಿಸರ್ಜನೆ ಮಾಡಿಬಿಟ್ಟಿದ್ದ. ನಾಚಿಕೆಯಿಂದ ಬೆಳಗಾಗುವದರೊಳಗೆ ಮನೆಯಿಂದ ಹೊರಟು ಹೋಗಿದ್ದ. ಆದರೆ ತಾನು ತಂದ ಚೀಲವನ್ನು ಮರೆತು ಬಿಟ್ಟು ಹೋಗಿದ್ದರಿಂದ ಪುನಃ ಪ್ರವಾದಿ ಮುಹಮ್ಮದ್‍ರ(ಸ) ಮನೆಗೆ ತೆಗೆದುಕೊಂಡು ಹೋಗಲು ಬಂದಾಗ ಮುಹಮ್ಮದ್‍ರು ತಮ್ಮ ಪವಿತ್ರವಾದ ಕೈಗಳಿಂದ ಹಾಸಿಗೆಯನ್ನು ತೊಳೆದು ಸ್ವಚ್ಛಗೊಳಿಸುತ್ತಿದ್ದರು. ಇದು ಮುಹಮ್ಮದ್‍ರವರ ಸೇವಾ ಮನೋಭಾವ ಮತ್ತು ಎಲ್ಲಾ ವ್ಯಕ್ತಿಗಳನ್ನು ಸಮಾನವಾಗಿ ನೋಡುವ ಗುಣ ಇದರಿಂದ ತಿಳಿಯುತ್ತದೆ.
           

 ಪ್ರವಾದಿ ಮುಹಮ್ಮದ್ ದೇವರ ಧೂತರು
     ಸದ್ವರ್ತನೆಯಲಿ ಆಚಾರ್ಯ ಶ್ರೇಷ್ಠರು
     ಸಮತೆಯಿಂದಲೆ ಜನರನು ಕಂಡು
     ಬದುಕಿದ್ದರವರು ಪ್ರೀತಿಯನೆ ಉಂಡು

ಪರಧರ್ಮದ ಕುರಿತು ಗೌರವ- ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತಿದ್ದರು. ಒಮ್ಮೆ ನಝ್ರಾನಿನನ ಕ್ರೈಸ್ತ ನಿಯೋಗ ಬಂದಾಗ ಪ್ರಾರ್ಥನೆ ಸಲ್ಲಿಸಲು ಮಸೀದಿಯಲ್ಲಿಯೇ ಸ್ಥಳಾವಕಾಶ ಮಾಡಿಕೊಟ್ಟರು. ಅಷ್ಟೇ ಅಲ್ಲದೇ ಯಾವುದೇ ಧರ್ಮದ ವ್ಯಕ್ತಿ ಮರಣ ಹೊಂದಿದರೂ ಶವ ಯಾತ್ರೆಯ ಸಂದರ್ಭದಲ್ಲಿ ಎದ್ದು ನಿಂತು ಗೌರವ ತೋರಿಸುತ್ತಿದ್ದರು.

ವರ್ಣಬೇಧ ನೀತಿಯ ವಿರೋಧಿಯಾಗಿದ್ದರು.-ಸಮಾನತೆಯ ಬೆಳಕನ್ನು ಹಂಚುವ ಪ್ರವಾದಿ ಮುಹಮ್ಮದ್ದರು: ಕಾರ್ಮಿಕರ ಬೆವರು ಆರುವ ಮುನ್ನ ಅವರ ಶ್ರಮದ ಪ್ರತಿಫಲವನ್ನು ನೀಡಿ ಎಂದು ಹೇಳುತ್ತಿದ್ದರು. ಒಂದು ಸಂದರ್ಭದಲ್ಲಿ ಶ್ರಮಿಕನ ಕೈಗಳನ್ನು ಚುಂಬಿಸಿ ಕರಿ ಗುಲಾಮನನ್ನು ತನ್ನ ಹೆಗಲ ಮೇಲೆ ಹೊತ್ತು ನ್ಯಾಯ ನೀಡಿದ ಸಂದರ್ಭವಂತೂ ಅತೀ ರೋಮಾಂಚನವನ್ನುಂಟುಮಾಡುತ್ತದೆ, ತಮ್ಮ ಅನುಯಾಯಿಯಾಗಿದ್ದ ಬಿಳುಪು ಬಣ್ಣದ ಸಲ್ಮಾನ್-ಉಲ್- ಫಾರಿಸ್ ಮತ್ತು ಕಪ್ಪು ಬಣ್ಣದ ಬಿಲಾಲ್‍ರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿ ವರ್ಣ ಬೇಧ ಮಾಡಬಾರದೆಂದು ವಿಶ್ವಕ್ಕೆ ತತ್ವವನ್ನಾಚರಿಸಿದ ಮಹಾನ್ ಶಕ್ತಿಯಾಗಿದ್ದರು. 

ನ್ಯಾಯ ಮತ್ತು ಸತ್ಯ ನಿಷ್ಠೆಯ ಪರಿಪಾಲಕರು- ತಪ್ಪು ಮಾಡುವುದು ಮಾನವ ಸಹಜಗುಣ. ಕೆಲವೊಮ್ಮೆ ತಿಳಿಯದೇ ಮಾಡುವ ತಪ್ಪಿಗೆ ಕ್ಷಮೆ ಇರುತ್ತದೆ. ಆದರೆ ತಿಳಿದೂ ತಪ್ಪು ಮಾಡುವವವರಿಗೆ ಕ್ಷಮೆ ಇಲ್ಲ. ಅಂತಹ ತಪ್ಪಿತಸ್ತರು ಬಡವರೇ ಇರಲಿ, ಶ್ರೀಮಂತರೇ ಇರಲಿ ಯಾವುದೇ ಜಾತಿ ಜನಾಂಗವಿರಲಿ ತಪ್ಪು ಮಾಡಿದವರು ಸಮಾನವಾದ ಶಿಕ್ಷೆ ಅನುಭವಿಸಲೇ ಬೇಕು ಎನ್ನುವುದನ್ನು ಸಾರಿ ಹೇಳಿದರು. ಒಂದು ವೇಳೆ ನನ್ನ ಮಗಳಾದ ಫಾತಿಮಾ ತಪ್ಪು ಮಾಡಿದರೂ ಅವಳು ತನ್ನÀ ಕೈಯನ್ನು ಕಡಿಸಿಕೊಳ್ಳುವ ಶಿಕ್ಷೆಗೆ ಅರ್ಹಳು ಎನ್ನುತ್ತಿದ್ದರು.


History of the Islamic People’ ಎನ್ನುವ ಗ್ರಂಥದಲ್ಲಿ ಡಾ. ಗುಸ್ತವ್ ವೈಲ್ ಹೀಗೆ ಹೇಳುತ್ತಾರೆ.’ ಮುಹಮ್ಮದರು ಜನರಿಗೆ ಪ್ರಕಾಶಿಸುವ ಉದಾಹರಣೆಯಾಗಿದ್ದರು. ಅವರ ಗುಣ ನಡತೆ ಪವಿತ್ರವಾದದ್ದು ಕಳಂಕರಹಿತವಾಗಿತ್ತು. ಅವರ ಮನೆ, ವಸ್ತ್ರ, ಆಹಾರ ಇತ್ಯಾದಿ ಸರಳತೆಯ ವೈಶಿಷ್ಟ್ಯದಿಂದ ಕೂಡಿತ್ತು. ಅವರು ಎಷ್ಟೊಂದು ನಿರಾಡಂಬರರಾಗಿದ್ದರೆಂದರೆ ಅವರು ತಮ್ಮ ಸಂಗಾತಿಗಳಿಂದ ಸನ್ಮಾನವನ್ನೂ sಸ್ವೀಕರಿಸುತ್ತಿರಲಿಲ್ಲ. ತಮ್ಮ ಕೆಲಸಕ್ಕೆ ಗುಲಾಮರನ್ನಿಟ್ಟುಕೊಂಡಿರಲಿಲ್ಲ. ಅವರನ್ನು ಯಾರೇ ಬೇಕಾದರೂ ಯಾವುದೇ ಸಂದರ್ಭದಲ್ಲೂ ಸಂದರ್ಶಿಸಬಹುದಿತ್ತು’ ಎನ್ನುತ್ತಾರೆ. ಮಹಾತ್ಮಾ ಗಾಂಧೀಜಿ ಮತ್ತು ಅನ್ನಿಬೆಸೆಂಟ್‍ರವರು ಇವರಿಂದ ಬಹಳಷ್ಟು ಪ್ರಭಾವಿತರಾಗಿದ್ದಾರೆ. ಮಹಾತ್ಮಾ ಗಾಂಧೀಜಿಯವರು ತಮ್ಮ ‘ಯಂಗ್ ಇಂಡಿಯಾ’ದಲ್ಲಿ ‘ಮಿಲಿಯಗಟ್ಟಲೆ ಮಾನವ ಹೃದಯದಲ್ಲಿ ಅಚ್ಚೊತ್ತಿರುವ ಓರ್ವ ಉತ್ಕøಷ್ಟ ವ್ಯಕ್ತಿಯ ಜೀವನ ವಿಧಾನವನ್ನು ನಾನು ಅರಿಯಲು ಇಚ್ಛಿಸುತ್ತೇನೆ. ಅವರ ಸಂದೇಶದಲ್ಲಿ ಖಡ್ಗವು ಯಾವ ಸ್ಥಾನವನ್ನೂಗಳಿಸಿಲ್ಲವೆಂಬುದು ನನ್ನಲ್ಲಿ ಇನ್ನೂ ಹೆಚ್ಚಿನ ನಂಬಿಕೆಯನ್ನು ಉಂಟುಮಾಡಿತು.’ ಎಂದು ಹೇಳುತ್ತಾರೆ. ಇಷ್ಟೇ ಸಾಕಲ್ಲವೇ ಮುಹಮ್ಮದರು ಎಷ್ಟೊಂದು ಪ್ರಭಾವೀ ವ್ಯಕ್ತಿ, ಎಷ್ಟೊಂದು ಸರಳ ವ್ಯಕ್ತಿ ಆಗಿದ್ದರು ಎಂದು ಹೇಳಲಿಕ್ಕೆ. ಒಟ್ಟಿನಲ್ಲಿ ಅವರ ಜೀವನ ಕ್ರಮವೇ ಒಂದು ತಪಸ್ಸು, ಅನುಕರಣ ಯೋಗ್ಯ, ಮಾನವತೆಯ ಸಾಕಾರ ಮೂರ್ತಿ. ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ.
    
ಪರಿತ್ರಾಣಾಯ ಸಾಧೂನಾಂ, ವಿನಾಶಾಯ ಚ ದುಷ್ಕøತಾಂ||
            ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| 

     ಪ್ರವಾದಿ ಮುಹಮ್ಮದ್ ದೇವರ ಧೂತರು
     ಸದ್ವರ್ತನೆಯಲಿ ಆಚಾರ್ಯ ಶ್ರೇಷ್ಠರು
     ಸಮತೆಯಿಂದಲೆ ಜನರನು ಕಂಡು
     ಬದುಕಿದ್ದರವರು ಪ್ರೀತಿಯನೆ ಉಂಡು


                                                                                  ಗಣಪತಿ.ಎಸ್.ಹೆಗಡೆ,

ಸಹ ಶಿಕ್ಷಕರು ಸ.ಹಿ.ಪ್ರಾ ಶಾಲೆ ಗುಂಡಿಬೈಲ್ ನಂ 1 ತಾ- ಹೊನ್ನಾವರ (ಉ.ಕ) ಮೊ.ನಂ- 8762150519   
 

 

Read These Next

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಸಿದ್ದಾಪುರದಲ್ಲಿ 203.2 ಮಿ.ಮೀ ಮಳೆ 

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 43.6 ಮಿ.ಮೀ, ಭಟ್ಕಳ 12.0 ಮಿ.ಮೀ, ...

ಪ.ವರ್ಗದ ಫಲಾನುಭವಿಗಳಿಂದ ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನ      

ಕಾರವಾರ: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಠ ವರ್ಗದ ಫಲಾನುಭವಿಗಳು ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಆಸಕ್ತಿ ...

ಭಟ್ಕಳದ ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ತಾಪಮಾನ ತಪಾಸಣೆ ಮತ್ತು  ಆಮ್ಲಜನಕ ಸ್ಯಾಚುರೇಶನ್ ಕ್ಯಾಂಪ್

ಭಟ್ಕಳ: ವೆಲ್ಫೇರ್ ಆಸ್ಪತ್ರೆಯು  ಇಂಡಿಯನ್ ನವಾತ್ ಫೋರಂ ನ ಸಹಯೋಗದೊಂದಿಗೆ ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ತಾಪಮಾನ ತಪಾಸಣೆ ಮತ್ತು ...

ಭಟ್ಕಳ: ವುಮೆನ್ಸ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿತ ಆರೈಕೆ; ೬೪ ಮಂದಿ ಸೋಂಕಿತರ ಸ್ಥಳಾಂತರ

ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಕೊರೋನಾ ಸೋಂಕಿತರ ಆರೈಕೆಯಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು ಹೆಬಳೆ ...

ಮೊದಲ ಯಶಸ್ವಿ ಚಾರ್ಟೆಡ್ ವಿಮಾನ ಹಾರಾಟದ ನಂತರ ಜೂ.23ಕ್ಕೆ  ದುಬೈಯಿಂದ ಮಂಗಳೂರಿಗೆ ಮೊತ್ತೊಂದು ವಿಮಾನ ಹಾರಾಟಕ್ಕೆ ಸಿದ್ಧ

ಭಟ್ಕಳ: ಭಟ್ಕಳದ ಉದ್ಯಮಿ ಹಾಗೂ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನಿರಿಯವರು ದುಬೈಯಲ್ಲಿ ಸಿಲುಕಿಕೊಂಡಿದ್ದ 184 ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಜಿಲ್ಲಾಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಫಲಿತಾಂಶ; ಹೊನ್ನಾವರದ ಜಿ.ಎಸ್.ಹೆಗಡೆ ಪ್ರಥಮ

ಭಟ್ಕಳ: ‘ಪ್ರವಾದಿ ಮುಹಮ್ಮದ್(ಸ) ಎಲ್ಲರಿಗಾಗಿ’ ಸೀರತ್ ಅಭಿಯಾನದ ಅಂಗವಾಗಿ ‘ಪ್ರವಾದಿ ಮುಹಮ್ಮದ್(ಸ) ಮತ್ತು ಸಮಾನತೆ’ ಎಂಬ ವಿಷಯದಲ್ಲಿ ...

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಭಟ್ಕಳ; ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಕೋವಿಡ್-19 ‘ಮರಳಿ ಸೃಷ್ಟಿಕರ್ತನ ಕಡೆಗೆ ಆಬಿಯಾನ’ಕ್ಕೆ ಚಾಲನೆ

ಭಟ್ಕಳ: ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮಾನವನನ್ನು ಎಚ್ಚರಿಸುತ್ತಿದ್ದು, ಮನುಷ್ಯರನ್ನು ಸರಿದಾರಿಗೆ ತರಲು ದೈವಿಕ ...

ಭಟ್ಕಳ: 60 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಬಿಸ್ಕತ್ ವಶ; ಪೊಲೀಸರ ಬಲೆಗೆ ಬಿದ್ದ ಶೈಲೇಶ್ ಮತ್ತು ವಿಫುಲ್

ಭಟ್ಕಳ: ಇಲ್ಲಿನ ಹೂವಿನ ಚೌಕ್ ಕ್ರಾಸ್ ಬಳಿ 60 ಲಕ್ಷ ಮೌಲ್ಯದ 1.5ಕೆಜಿ ಬಂಗಾರದ ನಮೂನೆಯ ಬಿಸ್ಕಿಟ್ ಮತ್ತು ಎಂಟು ಚಿನ್ನದ ಗಟ್ಟಿಗಳನ್ನು ...