ಪ್ರಗತಿ ಪರಿಶೀಲಿನ ಸಭೆ: ಅನುದಾನ ಬಳಕೆ ಮಾಡುವಂತೆ ಉಪ ಮುಖ್ಯಮಂತ್ರಿಗಳಿಂದ ಸೂಚನೆ

Source: so news | Published on 23rd January 2020, 1:12 AM | State News | Don't Miss |

 

ಮೈಸೂರು:ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿ, ಕಾರ್ಯಪ್ರಗತಿಯ ಬಗ್ಗೆ ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲಾಖೆಗಳಿಗೆ ಸರ್ಕಾರದಿಂದ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡಿ. ಇಲ್ಲವಾದರೆ ಅನುದಾನವನ್ನು ಸರ್ಕಾರಕ್ಕೆ ವಾಪಸ್ ಮಾಡಿ ಬೇರೆ ಇಲಾಖೆಗಳಿಗೆ ಹಂಚುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲಿನ ಬಾಡಿಗೆ ವಿದ್ಯಾರ್ಥಿನಿಲಯಗಳ ಕುರಿತು ಅಧಿಕಾರಿಗಳ ಬಳಿ ಮಾಹಿತಿ ಪಡೆದು, ಆದಷ್ಟೂ ಸರ್ಕಾರಿ ಜಾಗಗಳಲ್ಲಿ ಹಾಸ್ಟೆಲ್ ನಿರ್ಮಿಸಲು ಕ್ರಮ ವಹಿಸಿ. ವಿದ್ಯಾರ್ಥಿಗಳಿಗೆ ಅನುಗುಣವಾಗಿ ಕೊಠಡಿಗಳು ಸಾಲದಿದ್ದರೆ, ಇರುವ ಹಾಸ್ಟೆಲ್‍ಗಳ ಮೇಲೆಯೇ ಮತ್ತೊಂದು ಅಂತಸ್ತು ನಿರ್ಮಿಸಬೇಕು ಎಂದು ತಿಳಿಸಿದರು.
ಅಂತರ್ಜಾತಿ ವಿವಾಹ ಪೆÇ್ರೀತ್ಸಾಹ ಧನಕ್ಕೆ ಸ್ಥಳದಲ್ಲೇ ಕ್ರಮ: ಕಳೆದ 2019ರ ಸಾಲಿನಲ್ಲಿ ನಡೆದ ಅಂತರ್ಜಾತಿ ವಿವಾಹಗಳು ಹಾಗೂ ಸಾಮೂಹಿಕ ಸರಳ ವಿವಾಹಗಳಿಗೆ ಸುಮಾರು 6 ಕೋಟಿ 10 ಲಕ್ಷ ರೂ. ಪೆÇ್ರೀತ್ಸಾಹ ಧನ ಪಾವತಿ ಬಾಕಿ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ಸಂಬಂಧ ಉಪಮುಖ್ಯಮಂತ್ರಿಗಳು ಸ್ಥಳದಲ್ಲೇ ಕ್ರಮ ಕೈಗೊಂಡು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗೆ ಕರೆಮಾಡಿ ಈ ಕೂಡಲೆ ಹಣ ಬಿಡುಗಡೆಯಾಗಬೇಕು ಎಂದು ಹೇಳಿದರು.
ಮೂಲನಿವಾಸಿ ಜೇನುಕುರುಬರಿಗೆ ಸಿಸಿಡಿ ಯೋಜನೆಯಡಿ ಜಿಲ್ಲೆಯ ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಸೇರಿ ಒಟ್ಟು 1842 ಮನೆಗಳಿಗೆ ಬೇಡಿಕೆ ಇದ್ದು, ಆದರೆ ಸರ್ಕಾರದಿಂದ ಮಂಜೂರಾಗಿರುವುದು 103 ಮನೆಗಳು ಮಾತ್ರ. ಒಂದು ಮನೆಗೆ ಅಂದಾಜು 3.5 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಗೋವಿಂದ ಕಾರಜೋಳ ಅವರು, ಯಾವುದೇ ಕಾರಣಕ್ಕೂ ತಡ ಮಾಡದೆ ಅವರಿಗೆ ಮನೆಗಳನ್ನು ಕಟ್ಟಿಸಿಕೊಡಲು ಮುಂದಾಗಿ. ಜೊತೆಗೆ ಕೌಶಲಾಭಿವೃದ್ಧಿ, ಉದ್ಯೋಗ ತರಬೇತಿಯನ್ನು ನೀಡಿ ಅವರನ್ನು ಸಬಲರನ್ನಾಗಿಸಬೇಕು ಎಂದರು.
ಹೆದ್ದಾರಿ ಸ್ಥಿತಿಗತಿ ಬಗ್ಗೆ ವರದಿ ನೀಡಲು ಸೂಚನೆ: ಕೆಎಸ್‍ಎಚ್‍ಐಪಿ ಎಕ್ಸ್‍ಟರ್ನಲ್ ಏಡೆಡ್ ಪ್ರಾಜೆಕ್ಟ್ಸ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ಹೆದ್ದಾರಿಗಳ ಸ್ಥಿತಿಗತಿಯ ಬಗೆಗಿನ ವರದಿಯನ್ನು ಶೀಘ್ರದಲ್ಲಿಯೇ ನೀಡಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಸಿ.ಬಿ.ರಿಷ್ಯಂತ್, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಎನ್.ಮುನಿರಾಜು, ಸಹಾಯಕ ನಿರ್ದೇಶಕರಾದ ಎಂ.ಕೆ.ಮೇಘಾ, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಡಾ.ಎಸ್.ಪ್ರೇಮ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Read These Next

2020 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ವಿದ್ಯಾರ್ಥಿಗಳು “Online” ಮೂಲಕ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು (ಮೂಲ ದಾಖಲೆಗಳ ಜೊತೆಯಲ್ಲಿ) ಪರಿಶೀಲನೆಗಾಗಿ ತಾವು ಅಧ್ಯಯನ ...

ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಅರ್ಜಿ ಆಹ್ವಾನ                                                         

ಬೆಂಗಳೂರು: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ (ಡಿ.ಸಿ.ಎಂ) ಬೆಂಗಳೂರು ನಗರ/ ಗ್ರಾಮಾಂತರ, ತುಮಕೂರು, ...