ತಾಲೂಕಾ ಮಟ್ಟದ ಕಲಾಶ್ರೀ ಶಿಬಿರದ ಕಾರ್ಯಕ್ರಮ

Source: sonews | By Staff Correspondent | Published on 11th October 2019, 6:11 PM | Coastal News |

ಕಾರವಾರ: ತಾಲೂಕಾ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರ, ಇವರ ಸಂಯುಕ್ತಾಶ್ರಯದಲ್ಲಿ ಕಲಾಶ್ರೀ ಪ್ರಶಸ್ತಿ ಶಿಬಿರ  ಶುಕ್ರವಾರ ಸ್ತ್ರೀ ಶಕ್ತಿ ಸಭಾಭವನದಲ್ಲಿ ನಡೆಯಿತು. 

ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ  ಟಿ.ಗೋವಿಂದಯ್ಯ ಹಿರಿಯ ಸಿವಿಲ ನ್ಯಾಯಾಧೀಶರು ಹಾಗೂ ಸಧ್ಯಸ ಕಾರ್ಯದಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ- ಕಾರವಾರ,  ರಾಜೇಂದ್ರ ಬೇಕಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಭಾರತಿ ಕಾಮತ ಸಂಪನ್ಮೂ ವ್ಯಕ್ತಿ ಕಾರವಾರ ಶಿಕ್ಷಣ ಇಲಾಖೆ,  ರಾಜೇಶ್ವರಿ ನಾಯ್ಕ, ಲೀಲಾ ನಾಯ್ಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಸಧ್ಯಸ ಕಾರ್ಯಾದರ್ಶಿ ತಾಲೂಕಾ ಬಾಲಭವನ ಸೊಸೈಟಿ ಕಾರವಾರ ಇವರು  ಮುಖ್ಯ ಅತಿಥಿಗಳಾಗಿ ಭಾಗವಹಿಸುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. 

ರಾಜ್ಯ ಮಟ್ಟದ ಆಯ್ಕೆಯನ್ನು ಸೃಜನಾತ್ಮಕತೆಗೆ ಹೆಚ್ಚು ಒತ್ತು ನೀಡುವುದರೊಂದಿಗೆ ಕೆಳಕಂಡ ನಾಲ್ಕು ಕ್ಷೇತ್ರದಲ್ಲಿ ತಾಲ್ಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು
   
ಸೃಜನಾತ್ಮಕ ಕಲೆ : ಚಿತ್ರಕಲೆ,ಕರಕುಶಲ,ಜೇಡಿಮಣ್ಣಿನ ಕಲೆ,(ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು)
ಸೃಜನಾತ್ಮಕ ಬರವಣಿಗೆ : ಕಥೆ,ಕವನ,ಪ್ರಬಂದ ಬರೆಯುವುದು ....( ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು)

ಸೃಜನಾತ್ಮಕ ಪ್ರದರ್ಶನ ಕಲೆ : ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯಸಂಗೀತ, ಯಕ್ಷಗಾನ , ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಭಿನಯ, ಯೋಗನೃತ್ಯ, ಮ್ಯಾಜಿಕ್ ಇತ್ಯಾದಿ ಯಾವುದಾದರೊಂದು ಕಲೆಯನ್ನು ಮಾತ್ರ ಪ್ರದರ್ಶಿಸಲು ಅವಕಾಶವಿರುತ್ತದೆ.
ವಿಜ್ಞಾನದಲ್ಲಿ ನೂತನ ಆವಿಷ್ಕಾರ : ವಿಜ್ಞಾನಕ್ಕೆ ಸಂಬಂದಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರ ಇನ್ನಿತರ ಪ್ರಶ್ನೆಗಳಿಗೆ ಉತ್ತರ.

ಈ ಸ್ಪದ್ಧೆಯಲ್ಲಿ ಕಾರವಾರ ತಾಲೂಕಿನ ಎಲ್ಲಾ ಶಾಲಾ ಮಕ್ಕಳು ಈ ಸ್ಪದ್ರ್ಧೆಯಲ್ಲಿ ಭಾಗವಹಿಸಿ ಅದರಲ್ಲಿ 8 ಸ್ಪದ್ರ್ಧಾಳುಗಳನ್ನು ನಿರ್ಣಾಯಕರು ಈ ಕೇಳಗಿನಂತೆ ಆಯ್ಕೆ ಮಾಡಿದರು.

ಸೃಜನಾತ್ಮಕ ಕಲೆ: 
ಪ್ರಥಮ :- ಮಂಜಿಸ್ಟಾ ಖಾಲವಾಡೇಕರ
ದ್ವಿತೀಯ :- ಕೆ.ಚರ್ಚಿಲ್ 
ಸೃಜನಾತ್ಮಕ ಬರವಣಿಗೆ : 
ಪ್ರಥಮ:- ರಕ್ಷೀತಾ ನಾಯ್ಕ
ದ್ವಿತೀಯ:- ಅನನ್ಯಾ ಬಾಡಕರ
ಸೃಜನಾತ್ಮಕ ಪ್ರದರ್ಶನ ಕಲೆ: 
ಪ್ರಥಮ:- ಶ್ರದ್ಧಾ ನಾಯ್ಕ
ದ್ವಿತೀಯ:- ಆರ್ಯಶ್ರೀ ದುರ್ಗೇಕರ
ವಿಜ್ಞಾನದಲ್ಲಿ ನೂತನ ಆವಿಷ್ಕಾರ : 
ಪ್ರಥಮ:- ವೈಷ್ಣವಿ ಗಾವಂಕರ 
ದ್ವಿತೀಯ:- ಶ್ರೇಯಸ್ ಕುರಡೇಕರ

ಭಾಗವಹಿಸಿದ ಎಲ್ಲಾ ಸ್ಪದ್ರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಯಿತು ಮತ್ತು ತಿಂಡಿ-ತಿನಿಸು ಹಾಗೂ ಊಟದ ವ್ಯವಸ್ಧೆ ಮಾಡಲಾಗಿತ್ತು. ಈ ಕಾರ್ಯಕ್ರಮ ತುಂಬಾ ಅಚ್ಚು ಕಟ್ಟಾಗಿ ನೇರೆದಿದ್ದು ಈ ಕಾಂರ್ಯಕ್ರಮದಲ್ಲಿ ನೇರದಂತಹ ಎಲ್ಲಾ ಸಭಿಕರಿಗೂ ಮನಕೆ ಮಧುವನ್ನು ನೀಡಿತು ಮತ್ತು ಎಲ್ಲೂರು ಪುಟಾಣಿ ಕಲಾವಿದರಿಗೆ ಪ್ರೋತ್ಸಹಿಸಿದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...