ಸಂತ ಫ್ರಾನ್ಸಿಸ್ ಸ್ಮರಣಾರ್ಥ ಮುಂಡಳ್ಳಿ ಚರ್ಚನಿಂದ ಭಟ್ಕಳ ಬಂದರ್ ದೀಪಸ್ತಂಭದವರೆಗೆ ಕ್ರೈಸ್ತರ ಮೆರವಣಿಗೆ

Source: S O News | By I.G. Bhatkali | Published on 7th December 2021, 8:53 PM | Coastal News | Don't Miss |

ಭಟ್ಕಳ: ಕ್ರಿ.ಶ.1552ರಲ್ಲಿ ಇಹಲೋಕ ತ್ಯಜಿಸಿದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಮೃತ ದೇಹವನ್ನು ಭಟ್ಕಳ ಬಂದರಿನಲ್ಲಿ ಕೆಲ ಕಾಲ ಇರಿಸಿ ನಂತರ ಗೋವಾಗೆ ಸಾಗಿಸಿರುವ ಸ್ಮರಣಾರ್ಥವಾಗಿ, ಪ್ರತಿವರ್ಷದಂತೆ ಡಿಸೆಂಬರ್ ತಿಂಗಳ ಮೊದಲ ರವಿವಾರ ಇಲ್ಲಿನ ಮುಂಡಳ್ಳಿ ಭಾಗದ ಕ್ರೈಸ್ತ ಧರ್ಮೀಯರು ಬಂದರ್ ದೀಪಸ್ತಂಭದವರೆಗೆ ಮೆರವಣಿಗೆಯಲ್ಲಿ ಸಾಗಿ ಅಲ್ಲಿರುವ ಸಂತ ಕ್ಸೇವಿಯರ್ ಶಿಲುಬೆಯ ಮುಂದೆ ಪ್ರಾರ್ಥನೆ ಸಲ್ಲಿಸಿದರು.

ಕ್ರೈಸ್ತ ಶಿಲುಬೆಯೊಂದಿಗೆ ಬೈಬಲ್ ಪಠಿಸುತ್ತ ಕ್ರಿಸ್ತನ ಅನುಯಾಯಿಗಳು ಹೆಜ್ಜೆ ಹಾಕಿದರು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಾದ್ಯಘೋಷಗಳು ಮೆರವಣಿಗೆಗೆ ಮೆರುಗನ್ನು ನೀಡಿದವು. ಮೆರವಣಿಗೆಯಲ್ಲಿ ಪಾಲ್ಗೊಂಡ ಮುಂಡಳ್ಳಿ ಚರ್ಚಿನ ಫಾದರ್ ಪ್ರೇಮ್ ಡಿಸೋಜಾ, ಮರಣ ಹೊಂದಿದ ಸಂತ ಫ್ರಾನ್ಸಿಸ್ ದೇಹವನ್ನು ದೋಣಿಯಲ್ಲಿ ಗೋವಾ ಬೋಮ್ ಜೀಸಸ್ ಚರ್ಚಗೆ ಕೊಂಡೊಯ್ಯಲಾಗಿತ್ತು, ಈ ಸಂದರ್ಭದಲ್ಲಿ ಕೆಲ ಕಾಲ ಭಟ್ಕಳ ಬಂದರಿನಲ್ಲಿ ದೀಪಸ್ತಂಭದ ಸಮೀಪ ಇರಿಸಲಾಗಿತ್ತು, ಅದನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ವರ್ಷ ಡಿಸೆಂಬರ್ ಮೊದಲ ರವಿವಾರ ಈ ಮೆರವಣಿಗೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು. ಭಟ್ಕಳ ಬಂದರಿನಲ್ಲಿ ಕಾರವಾರದಿಂದ ಬಂದಿದ್ದ ಫಾದರ್ ಸಾಲ್ವಡರ್, ಸಂತ ಫ್ರಾನ್ಸಿಸ್ ಬಗ್ಗೆ ಪ್ರವಚನ ನೀಡಿದರು. ಪ್ರಾರ್ಥನೆಯ ನಂತರ ಎಲ್ಲರಿಗೂ ಲಘು ಉಪಹಾರ, ಪಾನೀಯ ವಿತರಿಸಲಾಯಿತು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...