ಭಾರತೀಯ ವಿದ್ಯಾರ್ಥಿಗಳ ತೆರವಿಗೆ ತೊಡಕು ಶೆಲ್ ದಾಳಿ, ಸಾರಿಗೆ ಕೊರತೆ ಸ್ಥಳಾಂತರ ಕಾರ್ಯಾಚರಣೆಗೆ ಅಡ್ಡಿ; ಎಂ ಇ ಎ

Source: Vb | By I.G. Bhatkali | Published on 7th March 2022, 2:49 PM | State News | National News | Global News |

ಹೊಸದಿಲ್ಲಿ: ಮುಂದುವರಿದ ಶೆಲ್ ದಾಳಿ ಹಾಗೂ ಸಾರಿಗೆ ಸೌಲಭ್ಯದ ಕೊರತೆ ಉಕ್ರೇನ್‌ನ ಸುಮಿ ವಲಯದಿಂದ ಭಾರತೀಯ ವಿದ್ಯಾರ್ಥಿಗಳನ್ನು ತೆರವು ಗೊಳಿಸಲು ತೀವ್ರ ಅಡ್ಡಿ ಉಂಟು ಮಾಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.

ಯುದ್ಧಗ್ರಸ್ತ ಉಕ್ರೇನ್ ನಿಂದ ಇದುವರೆಗೆ 63 ವಿಮಾನಗಳಲ್ಲಿ 13,300 ಭಾರತೀಯರನ್ನು ಭಾರತಕ್ಕೆ ಹಿಂದೆ ಕರೆ ತರಲಾಗಿದೆ ಎಂದು ಅದು ತಿಳಿಸಿದೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ವಾಪಸ್ ಕರೆ ತರಲು ಮುಂದಿನ 24 ಗಂಟೆಗಳಲ್ಲಿ 13 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಈಗ ಮುಖ್ಯವಾಗಿ ಸುಮಿಯಿ೦ದ ಭಾರತೀಯ ವಿದ್ಯಾರ್ಥಿಗಳನ್ನು ತೆರವುಗೊಳಿಸಲು ಗಮನ ಕೇಂದ್ರೀಕರಿಸಲಾಗಿದೆ. ಇದಕ್ಕೆ ಹಲವು ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಅದು ಹೇಳಿದೆ.

ಉಕ್ರೇನ್ಸುಮಿಯಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಕುರಿತು ನಾವು ತೀವ್ರ ಆತಂಕಗೊಂಡಿದ್ದೇವೆ. ನಮ್ಮ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ರೂಪಿಸಲು ಕೂಡಲೇ ಕದನ ವಿರಾಮ ಘೋಷಿಸುವಂತೆ ನಾವು ಹಲವು ವಿಧಾನದಲ್ಲಿ ರಶ್ಯ ಹಾಗೂ ಉಕ್ರೇನ್ ಸರಕಾರವನ್ನು ಒತ್ತಾಯಿಸಿದ್ದೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಿ ಅವರು ಈ ಹಿಂದೆ ಟ್ವಿಟ್ ಮಾಡಿದ್ದರು.

ಭಾರತೀಯರಿಗೆ ನೆರವಾಗದ “ಮಾನವೀಯ ಕಾರಿಡಾರ್

ರಶ್ಯ ಶನಿವಾರ ಎರಡು ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ. ಅಲ್ಲದೆ, ಮರಿವುಪೋಲ್ ಹಾಗೂ ವೋನಾಖಾ ನಗರದಿಂದ ನಾಗರಿಕರು ತೆರಳಲು ಮಾನವೀಯ ಕಾರಿಡಾರ್' ಆರಂಭಿಸಲಾಗಿದೆ ಎಂದು ಹೇಳಿದೆ. ಆದರೆ, ಪೂರ್ವ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಈ 'ಮಾನವೀಯ ಕಾರಿಡಾರ್' ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ.

ರಸ್ಯ ಕದನ ವಿರಾಮ ಉಲ್ಲಂಘಿಸಿದೆ ಹಾಗೂ ಶೆಲ್ ದಾಳಿ ಮುಂದುವರಿಸಿದೆ. ಆದುದರಿಂದ ನಾಗರಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲು 'ಮಾನವೀಯ ಕಾರಿಡರ್' ಆರಂಭಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಹೇಳಿದೆ.

ಕೆಲವು ಭಾರತೀಯರು ಮಾತ್ರ ಉಕ್ರೇನ್‌ನ ಪಶ್ಚಿಮ ಗಡಿಗೆ ತೆರಳಲು ಸಾಧ್ಯವಾಗಿದೆ. ರಶ್ಯದೊಂದಿಗಿನ ಪೂರ್ವ ಗಡಿಗೆ ತೆರಳಲು ಸಾಧ್ಯವಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಿ ತಿಳಿಸಿದ್ದಾರೆ.

ಕರ್ನಾಟಕದ 448 ವಿದ್ಯಾರ್ಥಿಗಳ ಆಗಮನ

ಯುದ್ಧ ಪೀಡಿತ ಉಕ್ರೇನ್ ದೇಶದಿಂದ ಇದುವರೆಗೂ ಕರ್ನಾಟಕ ರಾಜ್ಯಕ್ಕೆ 448 ವಿದ್ಯಾರ್ಥಿಗಳು ಆಗಮಿಸಿದ್ದಾರೆ ಎಂದು ರಾಜ್ಯ ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿದ್ದಾರೆ. ಸರಕಾರದ

ರವಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ 47 ಬ್ಯಾಚ್‌ಗಳಲ್ಲಿ ಕರ್ನಾಟಕಕ್ಕೆ 448 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ಪೈಕಿ 40 ಬ್ಯಾಚ್ ಹೊಸದಿಲ್ಲಿ, 7 ಬ್ಯಾಚ್ ಮುಂಬೈನಿಂದ ಬಂದಿದ್ದಾರೆ ಎಂದರು.

ಸದ್ಯ ಸಹಾಯವಾಣಿ ಚಾಲ್ತಿಯಲ್ಲಿದೆ ಎಂದ ಅವರು, ಕಳೆದ 24 ಗಂಟೆಗಳಲ್ಲಿ 12 ವಿಮಾನಗಳು ಬಂದಿದ್ದು, ಇದರಲ್ಲಿ 76 ಜನ ಕನ್ನಡಿಗರು ಇಂದು ಹೊಸದಿಲ್ಲಿಗೆ ಬಂದಿದ್ದಾರೆ. ಸೋಮವಾರ ಮತ್ತೆ ವಿಮಾನಗಳು ಬರುತ್ತಿದ್ದು, ಅದರಲ್ಲಿ ಎಷ್ಟು ಮಂದಿ ಆಗಮಿಸಲಿದ್ದಾರೆ ಎಂದು ಮಾಹಿತಿ ಗೊತ್ತಾಗಲಿದೆ ಎಂದು ಹೇಳಿದರು.

 

ಈ ನಡುವೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಪಿಸೋಚಿನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಭಾರತ ಸರಕಾರ ನಿಯೋಜಿಸಿದ 3 ಬಸ್ಗಳು ಈಗಾಗಲೇ ಅಲ್ಲಿಗೆ ತಲುಪಿವೆ. ಅವು ಶೀಘ್ರದಲ್ಲಿ ಪಶ್ಚಿಮಕ್ಕೆ ಸಾಗಲಿವೆ. ಇನ್ನೂ ಎರಡು ಬಸ್‌ಗಳು ಶೀಘ್ರದಲ್ಲಿ ಕಾರ್ಯಾಚರಣೆಯಲ್ಲಿ ಸೇರಿಕೊಳ್ಳಲಿವೆ. ನಮ್ಮ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದೊಯ್ಯಲಾಗುವುದು ಎಂದು ಅವರು ಟೀಟ್ ಮಾಡಿದ್ದಾರೆ.

ಶನಿವಾರ ಸುಮಿಯಲ್ಲಿರುವ ಸುಮಿ ಸರಕಾರಿ ವಿಶ್ವವಿದ್ಯಾನಿಲಯದಲ್ಲಿ ಸಿಲುಕಿಕೊಂಡಿರುವ 800 ವಿದ್ಯಾರ್ಥಿಗಳ ದೊಡ್ಡ ಗುಂಪೊಂದು ಭಾರತ ಸರಕಾರ ನಮ್ಮನ್ನು ಸುರಕ್ಷಿತವಾಗಿ ತೆರವುಗೊಳಿಸುತ್ತದೆ ಎಂದು ನಾವು ದೀರ್ಘ ಕಾಲ ಕಾಯುವ ಸ್ಥಿತಿಯಲ್ಲಿ ಇರಲಿಲ್ಲ. ಆದುದರಿಂದ ನಾವು ಜೀವವನ್ನು ಅಪಾಯಕ್ಕೆ ಒಡ್ಡಿ ರಶ್ಯದತ್ತ ನಡೆದುಕೊಂಡು ಹೋಗಲಿದ್ದೇವೆ ಎಂದು ತಿಳಿಸಿದೆ. ವೀಡಿಯೊವೊಂದರಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ನಿಂತ ವಿದ್ಯಾರ್ಥಿನಿಯೊಬ್ಬರು, “ನಾವು 66 ಸುಮಿ ಸರಕಾರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಇದು 10ನೇ ದಿನದ ಯುದ್ಧ. ಎರಡು ನಗರಗಳಲ್ಲಿ ಮಾನವೀಯ ಕಾರಿಡಾರ್ ತೆರೆಯಲು ರಸ್ಯ ಕದನ ವಿರಾಮ ಘೋಷಿಸಿದೆ ಎಂಬ ಸುದ್ದಿಯನ್ನು ನಾವು ತಿಳಿದಿದ್ದೇವೆ. ಇಂದು ಬೆಳಗ್ಗಿನಿಂದ ನಾವು ಬಾಂಬ್, ಶೆಲ್ ದಾಳಿ ಹಾಗೂ ವಿಮಾನಗಳ ಹಾರಾಟದ ಶಬ್ದವನ್ನೇ ನಿರಂತರ ಕೇಳುತ್ತಿದ್ದೇವೆ. ನಮಗೆ ಭಯವಾಗುತ್ತಿದೆ. ನಾವು ಸಾಕಷ್ಟು ಕಾದಿದ್ದೇವೆ. ಇನ್ನು ಕಾಯಲು ಸಾಧ್ಯವಿಲ್ಲ.

ನಾವು ಜೀವ ಒತ್ತೆ ಇರಿಸಿ ಗಡಿಯತ್ತ ತೆರಳುತ್ತಿದ್ದೇವೆ. ಒಂದು ವೇಳೆ ನಮಗೆ ಏನಾದರೂ ಆದರೆ, ಸಂಪೂರ್ಣ ಜವಾಬ್ದಾರಿ ಸರಕಾರ ಹಾಗೂ ರಾಯಭಾರ ಕಚೇರಿಯದ್ದು. ಒಂದು ವೇಳೆ ನಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಏನಾದರೂ ಆದರೆ, ಮಿಷನ್ ಗಂಗಾ ಅತಿ ದೊಡ್ಡ ವಿಫಲತೆ ಎಂದು ಹೇಳಬೇಕಾಗುತ್ತದೆ'' ಎಂದು ಹೇಳುವುದು ಕಂಡು ಬಂದಿದೆ.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...