ಸೆರೆಮನೆ ವಾಸಿಗಳ ಯೋಗ ಕ್ಷೇಮ ವಿಚಾರಣೆ

Source: so news | By MV Bhatkal | Published on 14th March 2019, 12:08 AM | State News | Don't Miss |

ಹಾಸನ: ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಇಂದು ಜಿಲ್ಲಾ ಬಂದಿಖಾನೆಗೆ ಭೇಟಿ ನೀಡಿ ಸೆರೆಮನೆ ವಾಸಿಗಳ ಯೋಗ ಕ್ಷೇಮ ವಿಚಾರಿಸಿ ಜೀವನ ಸುಧಾರಣೆಗೆ ಉಪಯುಕ್ತ ಬುದ್ದಿಮಾತುಗಳನ್ನು ಹೇಳಿದರು.
ಸಂದರ್ಶಕರ ಮಂಡಳಿ ಸಭೆಯ ಸಲುವಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ|| ಬಸವರಾಜ್ ಹಾಗೂ ಅಧಿಕಾರಿಗಳ ತಂಡದೊಂದಿಗೆ ಜಿಲ್ಲಾ ಬಂಧಿಖಾನೆಗೆ ಭೇಟಿ ನೀಡಿದ ಅವರು ಪ್ರತಿಯೊಬ್ಬರು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಬಂಧಿಖಾನೆಯಲ್ಲಿ ವಿಚಾರಣಾದೀನ ಖೈದಿಗಳಲ್ಲಿ ಬಹುತೇಕರು ಯುವಕರಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಅಪರಾಧ ಪ್ರವೃತ್ತಿ ಸದಾ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಲ್ಲರೂ ಮನ ಪರಿವರ್ತನೆ ಹೊಂದಿ ಸಮಾಜದ ಆಸ್ತಿಗಳಾಗಿ ಬಾಳಿ ಎಂದು ಹೇಳಿದರು.
ಬಂದಿಖಾನೆ ಜೀವನ ಪರಿವರ್ತನೆಯ ಕೇಂದ್ರಗಳಾಗಿದ್ದು ಇಲ್ಲಿ ಆತ್ಮವಲೋಕನ ಮಾಡಿಕೊಂಡು ಒಳ್ಳೆ ಬದುಕು ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾಧಿಕಾರಿಯವರು ಯುವಕರೊಂದಿಗೆ ಮಾತುಕತೆ ನಡೆಸಿದ ಸಂದರ್ಭ ಹಲವರು ಅರ್ಧದಲ್ಲಿ ಶಾಲೆ ಕಾಲೇಜು ಬಿಟ್ಟಿರುವುದು ಹಾಗೂ ಓದಿನಲ್ಲಿ ಆಸಕ್ತಿ ಇರುವುದನ್ನು ಗಮನಿಸಿದರು. ಇವರ ಅನುಕೂಲಕ್ಕಾಗಿ ಜಿಲ್ಲಾ ಬಂಧಿ ಖಾನೆಯಲ್ಲಿ ಮುಂದಿನ ವರ್ಷದಿಂದ ದೂರಶಿಕ್ಷಣ ವ್ಯವಸ್ಥೆಯ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಬಂಧಿಖಾನೆ ಅಧಿಕಾರಿ ಓಬಳೇಶ್ ಗಟ್ಟಿಯವರಿಗೆ ಸೂಚನೆ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ|| ಬಸವರಾಜ್ ಅವರು ಬಂದಿ ಖಾನೆಯಲ್ಲಿರು ವಿಚಾರಣಾಧೀನ ಖೈದಿಗಳಿಗೆ ಸ್ವಂತ ವಕೀಲರು ಇಲ್ಲದಿದ್ದಲ್ಲಿ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ಸೇವೆ ಒದಗಿಸಿ ಕೂಡಲಾಗುವುದು ಎಂದರು.
ಜಿಲ್ಲಾ ಬಂಧಿ ಖಾನೆಗೆ ಜಿಲ್ಲಾಧಿಕಾರಿಯವರು ಬಂದು ಮೂಲಭೂತ ಸೌಕರ್ಯ ಪರಿಶೀಲಿಸುತ್ತಿರುವುದು ಅಭಿನಂದನಾರ್ಹ ಇಂತಹ ನೆಡೆಯಿದ ಬಂಧಿಖಾನೆಗಳ ಸುಧರಣೆಗೆ ನೆರವಾಗಲಿದೆ ಎಂದು ಜಿಲ್ಲಾ ಬಂಧಿಖಾನೆ ಅಧೀಕ್ಷಕರ ಸೇವೆಯನ್ನು ಅವರು ಶ್ಲಾಘಿಸಿದರು.
ಇದೇ ವೇಳೆ ಜಿಲ್ಲಾಧಿüಕಾರಿಯವರು ಸೆರೆಮನೆ ವಾಸಿಗಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ|| ಶಂಕರ್ ಅವರು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದರು.
ನಂತರ ನಡೆದ ಸಂದರ್ಶಕರ ಮಂಡಳಿ ಸಭೆಯಲ್ಲಿ ಬಂದಿಖಾನೆ ಅಧೀಕ್ಷಕರು ಬಂದಿಖಾನೆಯಲ್ಲಿ ಅಗಬೇಕಿರುವ ಕಾರ್ಯಗಳ ಬಗ್ಗೆ ಮನವಿ ಮಾಡಿದರು. ಸೆರೆಮನೆ ವಾಸಿಗಳಿಂದ ವಾಣಿಜ್ಯ ಉದ್ದೇಶಕ್ಕೆ ನರ್ಸರಿ ಅಭಿವೃದ್ಧಿ/ಸ್ಥಳೀಯ ಬಳಕೆಗೆ ಫೆನಾಯಿಲ್ ತಯಾರಿಕೆಗೆ ಅನುಮತಿ ನೀಡುವಂತೆ ಕೋರಿದರು.
ಇ ಕೋರ್ಟ್ ವ್ಯವಸ್ಥೆ ಹಾಗೂ ವಿಡಿಯೋ ಕಾನ್ಪರನ್ಸ್ ಮೂಲಕ ಪ್ರಕರಣಗಳ ಇತ್ಯರ್ಥದಿಂದಾಗುತ್ತಿರುವ ಅನುಕೂಲಗಳಿಗಾಗಿ ನ್ಯಾಯಾಲಯ ವ್ಯವಸ್ಥೆ ಹಾಗೂ ನ್ಯಾಯಮೂರ್ತಿಗಳಾದ ಓಬಳೇಶ್ ಗಟ್ಟಿಯವರು ಕೃತಜ್ಞತೆ ಸರ್ಮಪಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ||. ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸತೀಶ್, ಡಿ.ಡಿ.ಪಿ.ಐ ಮಂಜುನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಎನ್.ಎನ್. ಹೆಗ್ಡೆ ಮತ್ತಿತರರು ಹಾಜರಿದ್ದರು.

 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...