ಡಾ.ಯೂಸೂಫ್ ಕುಂಬ್ಳೆಯವರಿಂದ ಭಟ್ಕಳದಲ್ಲಿ ಪ್ರಾಥಮಿಕ ಕೋವಿಡ್ ಸೆಂಟರ್ ಉದ್ಘಾಟನೆ

Source: sonews | By Staff Correspondent | Published on 4th August 2020, 7:10 PM | Coastal News | Don't Miss |

ಕೋವಿಡ್ ಸೋಂಕಿತರ ಪ್ರಾಥಮಿಕ ಚಿಕಿತ್ಸೆ ಈಗ ಭಟ್ಕಳದಲ್ಲಿ ಲಭ್ಯ

ಭಟ್ಕಳ: ಇಂಡಿಯನ್ ನವಾಯತ್ ಫೋರಂ, ಮಜ್ಲಿಸೆ-ಇಸ್ಲಾಹ್-ವ-ತಂಝೀಮ್ ಹಾಗೂ ರಾಬಿತಾ ಸೂಸೈಟಿ ಆಶ್ರಯದಲ್ಲಿ ಮಂಗಳವಾರ ಇಲ್ಲಿನ ಝೈನ್ ಲಾಡ್ಜ್ ನಲ್ಲಿ ಪ್ರಾಥಮಿಕ ಕೋವಿಡ್ ಸೆಂಟರನ್ನು ಮಂಗಳುರು ಇಂಡಿಯಾನ ಆಸ್ಪತ್ರೆಯ ನಿರ್ದೇಶಕ ಡಾ.ಯೂಸೂಫ್ ಕುಂಬ್ಳೆಯವರು ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು, ಕೋವಿಡ್ ಗುಣಮುಖವಾಗುವ ರೋಗವಾಗಿದ್ದು ಇದರಿಂದಾಗಿ ಯಾರೂ ಕೂಡ ಭಯಪಡಬೇಕಾಗಿಲ್ಲ. ರೋಗಲಕ್ಷಣಗಳು ಕಂಡುಬಂದ ಕೂಡಲೇ ಪರಿಕ್ಷೆಗೊಳಗಾಗುವುದರಿಂದ ಇದನ್ನು ತ್ವರಿತಗತಿಯಲ್ಲಿ ಗುಣಪಡಿಸಬಹುದಾಗಿದೆ ಎಂದರು. ಕೊನೆಯ ಹಂತದಲ್ಲಿ ಯಾವುದೇ ರೋಗವಾದರೂ ಚಿಕತ್ಸೆ ಕಷ್ಟವಾಗಿದ್ದು ಕೊನೆಯ ಹಂತದ ವರೆಗೆ ಕಾಯದೆ ರೋಗಲಕ್ಷಣ ಕಂಡು ಬಂದಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ ಅವರು ಈಗ ಭಟ್ಕಳದಲ್ಲಿ ಪ್ರಾಥಮಿಕ ಕೋವಿಡ್ ಸೆಂಟರ್ ಆಗಿರುವುದರಿಂದಾಗಿ ಅಮ್ಲಜನಕದ ತೊಂದರೆಯನ್ನು ಎದುರಿಸುವವರಿಗೆ ಇಲ್ಲಿಯೆ ಆಮ್ಲಜನಕ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು ಇಂಡಿಯಾನ ಆಸ್ಪತ್ರೆಯು ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದು ಎಂದರು. 

ಮರ್ಕಝಿ ಖಲೀಫಾ ಜಮಾಅತುಲ್ ಮುಸ್ಲಿಮೀನ್ ಇದರ ಪ್ರಧಾನ ಕಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ಮಾತನಾಡಿ, ಎಲ್ಲ ಜೀವಿಗಳ ಅವಶ್ಯಕತೆಗಳನ್ನು ಪೂರೈಸುವುದು ಮನುಷ್ಯರ ಧರ್ಮವಾಗಬೇಕು, ಮಾನವರ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ ಜಮಾಅತುಲ್ ಮುಸ್ಲಿಮೀನ್ ಉಪ ಕಾಝಿ ಮೌಲಾನ ಅಬ್ದುಲ್ ರಬ್ ನದ್ವಿ, ಸಹಾಯಕ ಆಯುಕ್ತ ಭರತ್ ಎಸ್, ಎ.ಎಸ್.ಪಿ ನಿಖಿಲ್ ಬಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಇನಾಯತುಲ್ಲಾ ಶಾಬಂದ್ರಿ, ಕೋವಿಡ್ ಸೆಂಟರ್ ಸಂಚಾಲಕರಾದ ಅರ್ಷದ್ ಮೊಹತೆಶಮ್, ಅತಿಕುರ್ರಹ್ಮಾನ್ ಮುನಿರಿ, ಗುಫ್ರಾನ್ ಲಂಕಾ ಮತ್ತಿತರರು ಉಪಸ್ಥಿತರಿದ್ದರು. 

ಪ್ರಾಥಮಿಕ ಕೋವಿಡ್ ಕೇಂದ್ರವು 28 ಹಾಸಿಗೆಗಳನ್ನು ಹೊಂದಿದ್ದು ಕೋವಿಡ್ ಸೋಂಕಿತರಿಗೆ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಲು 3 ನುರಿತ ವೈದ್ಯರು ಹಾಗೂ 8 ನರ್ಸ್‍ಗಳು ದಿನದ 24 ಗಂಟೆಯೂ ಸೇವೆಯಲ್ಲಿರುತ್ತಾರೆ ಎಂದು ಇಂಡಿಯನ್ ನವಾತ್ ಫೋರಂ ನ ಗುಫ್ರಾನ್ ಲಂಕಾ ಮಾಧ್ಯಮಗಳಿಗೆ ಮಾಹಿತಿ ನೀಡಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...