ಭಟ್ಕಳ ಖಲೀಫಾ ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ ಮಹಮದ್ ಮೀರಾ ಸಿದ್ದಿಕ್ ಇನ್ನಿಲ್ಲ.

Source: SO News | By Laxmi Tanaya | Published on 14th May 2021, 6:13 PM | Coastal News | Don't Miss |

ಭಟ್ಕಳ :  ಭಟ್ಕಳದ ಮರ್ಕಜಿ ಖಲೀಫಾ ಜಮಾತುಲ್  ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಮೀರಾ ಸಿದ್ದಿಕ್ ಗುರುವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅವರಿಗೆ 75  ವರ್ಷ ವಯಸ್ಸಾಗಿತ್ತು. ಮೀರಾ ಸಿದ್ದಿಕ್ ದಿವಂಗತ ಅಬುಲ್ ಹಸನ್ (ವಡಾಪಾ) ಅವರ ಮಗ ಮತ್ತು ಮುಸ್ಲಿಂ ಸಮುದಾಯದ ಮುಖಂಡ ಇಸ್ಮಾಯಿಲ್ ಹಸನ್ ಸಿದ್ದೀಕ್ (ಐಎಸ್ ಸಿದ್ದೀಕ್) ಅವರ ಮೊಮ್ಮಗನಾಗಿದ್ದರು.

1945 ರಲ್ಲಿ ಜನಿಸಿದ್ದ ಮೀರಾ ಅವರ ಆರಂಭಿಕ ಶಿಕ್ಷಣವು ಭಟ್ಕಳದಲ್ಲಿ ಮುಗಿಸಿದ್ದರು.  ನಂತರ ಅವರು ಕಲ್ಕತ್ತಾದಲ್ಲಿ ಮೆಟ್ರಿಕ್ಯುಲೇಷನ್‌ನಲ್ಲಿ ಉತ್ತೀರ್ಣರಾಗಿದ್ದರು. ಕಲ್ಕತ್ತಾದಲ್ಲಿ  ತಂದೆಯ ಬಟ್ಟೆ ಅಂಗಡಿ ಮಾಡ್ರನ್  ಸ್ಟೋರ್  ಪ್ರಸಿದ್ಧವಾಗಿತ್ತು.
 
ಮೀರಾ ಸಿದ್ದಿಕ್ ಅವರು ಮರ್ಕಝಿ ಖಲೀಫಾ ಜಮಾತುಲ್ -ಮುಸ್ಲೀಮೀನ್, ಮಜಲಿಸೆ ಇಸ್ಲಾಹ್ ವ ತಂಝೀಮ್, ಅಂಜುಮಾನ್-ಹಮಿ ಮುಸ್ಲಿಮೀನ್, ಭಟ್ಕಳದ  ಜಾಮಿಯಾ ಇಸ್ಲಾಮಿಯಾ  ಮತ್ತು ಭಟ್ಕಳ ಮುಸ್ಲಿಂ ಜಮಾತ-ದುಬೈನ ನಿರ್ದೇಶಕ ಮಂಡಳಿಯ ಸದಸ್ಯರು ಮತ್ತು ಜಾಮಿಯಾದ ಕಾರ್ಯನಿರತ ಸದಸ್ಯರಾಗಿದ್ದರು. ಮರ್ಕಝಿ ಖಲೀಫಾ ಜಮಾತುಲ್ -ಮುಸ್ಲೀಮೀನ್ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪ್ರಸ್ತುತ ಅವಧಿಗೆ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.

ಅವರು ತಮ್ಮ ಜೀವನದ ಬಹುಪಾಲು ದಿನಗಳನ್ನ  ಗಲ್ಫ್ ದೇಶವಾದ ಯುಎಇಯಲ್ಲಿ ವ್ಯವಹಾರದಲ್ಲಿ‌ ಕಳೆದಿದ್ದರು.

ಭಟ್ಕಳ ಮುಸ್ಲಿಂ ಗಲ್ಫ್ ಕೌನ್ಸಿಲ್  ಮಂಡಳಿ ಸ್ಥಾಪನೆ ಮತ್ತು ಭಟ್ಕಳದಲ್ಲಿ ರಾಬಿತಾ ಸೊಸೈಟಿ   ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಗಲ್ಫ್ ನಿಂದ  ಭಟ್ಕಳಗೆ ಹಿಂದಿರುಗುವವರೆಗೂ ರಾಬಿತಾ ಆಫೀಸ್ ಗೆ ಸಂಪರ್ಕದಲ್ಲಿದ್ದ ಕೊನೆಯ ವ್ಯಕ್ತಿ ಮಿರಾ ಎಂದರೆ ತಪ್ಪಿಲ್ಲ. ಸ್ಥಳೀಯವಾಗಿ ಅಭಿವೃದ್ಧಿಕಾರ್ಯಗಳಲ್ಲಿ ಅವರು ತಮ್ಮನ್ನ ತೊಡಗಿಸಿಕೊಂಡಿದ್ದರು.  

ಅವರ ಅಂತ್ಯಕ್ರಿಯೆಯ ಪ್ರಾರ್ಥನೆಗಳು  ಮೇ 14 ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಖಲೀಫಾ ಜಾಮಿಯಾ  ಮಸೀದಿಯಲ್ಲಿ ನೆರವೇರಿತು.

ಮೃತರು  ಪತ್ನಿ, ಆರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಅವರ ಭಟ್ಕಳಕ್ಕೆ ತುಂಬಲಾರದ ನಷ್ಟವಾಗಿದ್ದು,   ಭಟ್ಕಳದ ವಿವಿಧ  ಸಂಸ್ಥೆಗಳ ಮುಖಂಡರು  ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...