ಅಹಮದಾಬಾದ್: ಪಟೇಲ್ ಸ್ಟೇಡಿಯಂಗೆ ಮೋದಿ ಹೆಸರು ವಿಶದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಮರು ನಾಮಕರಣ

Source: VB | By S O News | Published on 25th February 2021, 2:28 PM | National News |

ಅಹಮದಾಬಾದ್: ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಅಹಮಬಾದ್‌ನ ಮೊಟೆರಾದ ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂಗೆ ಬುಧವಾರ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತಿತರರು ಉಪಸ್ಥಿತರಿದ್ದರು.

ಭಾರತ ಹಾಗೂ ಇಂಗ್ಲೆಂಡ್ ನಡುವೆ ತೃತೀಯ ಅಹೋರಾತ್ರಿ ಟೆಸ್ಟ್ ಪಂದ್ಯ ಬುಧವಾರ ನಡೆಯುವುದಕ್ಕೆ ಕೆಲವೇ ತಾಸುಗಳ ಮೊದಲು ಉದ್ಘಾಟನೆಯನ್ನು ನೆರವೇರಿಸಲಾಯಿತು. ಇದೇ ವೇಳೆ ರಾಷ್ಟ್ರಪತಿ ಅವರು ಸರ್ದಾರ್ ವಲ್ಲಭಬಾಯ್ ಪಟೇಲ್ ಕ್ರೀಡಾ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ಸ್ಟೇಡಿಯಂ ಸರ್ದಾರ್ ವಲ್ಲಭಬಾಯ್ ಪಟೇಲ್ ಕ್ರೀಡಾ ಎನ್ ಕೇವ್ (ಸಂಕೀರ್ಣ)ನ ಭಾಗವಾಗಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್ ಕ್ರೀಡಾ ಎನ್‌ಕ್ಷೇವ್ 200 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ಬೃಹತ್ ಕ್ರೀಡಾ ಈಜುಕೊಳ, ಅಥ್ಲೆಟಿಕ್ಸ್ ಟ್ಯಾಕ ಫೀಲ್ಡ್/ ಫುಟ್ಬಾಲ್ ಸ್ಟೇಡಿಯಂ, ಫೀಲ್ಡ್ ಹಾಕಿ ಹಾಗೂ ಟೆನ್ನಿಸ್ ಸ್ಟೇಡಿಯಂ, ಒಳಾಂಗಣ ಕ್ರೀಡಾಂಗಣ, ಹೊರಾಂಗಣ ಬೈಸಿಕಲ್ ರೇಸ್ ಫೀಲ್ಡ್, ಸ್ಕೇಟಿಂಗ್ ಪ್ರದೇಶವನ್ನು ಕೂಡಾ ಒಳಗೊಳ್ಳಲಿದೆ. ಮೊಟೆರಾದ ಪುನರ್‌ನಿರ್ಮಿತ ಕ್ರಿಕೆಟ್ ಸ್ಟೇಡಿಯಂ ಅನ್ನು ಗುಜರಾತ್ ನ ಕ್ರಿಕೆಟ್ ಅಸೋಸಿಯೇಶನ್ (ಜಿಸಿಎ) ನಿರ್ಮಿಸಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಪ್ರಾಜೆಕ್ಟ್ ಎಂದು ಬಣ್ಣಿಸಲಾಗಿತ್ತು. ಮೋದಿಯವರು ಗುಜರಾತ್ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. 2014ರಲ್ಲಿ ಹಳೆಯ ಸ್ಟೇಡಿಯಂ ಅನ್ನು ಸಂಪೂರ್ಣವಾಗಿ ಕೆಡವಿ, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅನ್ನು ನಿರ್ಮಿಸಲಾಗಿತ್ತು.

ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಸರನ್ನು ಹೊಂದಿದ್ದ ಹಳೆಯ ಸ್ಟೇಡಿಯಂ 49 ಸಾವಿರ ಆಸನ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಎಂದು ಹೆಸರಿಸಲಾದ ನೂತನ ಕ್ರಿಕೆಟ್ ಕ್ರೀಡಾಂಗಣವು 63 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, 1.10 ಲಕ್ಷ ಆಸನ ಸಾಮರ್ಥ್ಯವನ್ನು ಹೊಂದಿದೆ. ಕಳೆದ ವರ್ಷದ ಫೆಬ್ರವರಿ 24ರಂದು ಭಾರತ ಪ್ರವಾಸಕ್ಕೆ ಆಗಮಿಸಿದ್ದ ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೂತನ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿಯವರು 'ನಮಸ್ತೆ ಟ್ರಂಪ್' ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿಶ್ವದಾದ್ಯಂತ ಗಮನಸೆಳೆದಿತ್ತು.

'ಪರಿಸರ ಸ್ನೇಹಿ ಸ್ಟೇಡಿಯಂ': ಮರುನಾಮಕರಣಗೊಂಡ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಈ ಕ್ರೀಡಾಂಗಣದ ಪರಿಕಲ್ಪನೆಗೆ ಚಾಲನೆ ನೀಡಿದ್ದರು. ಆಗ ಅವರು ಗುಜರಾತ್ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷರೂ ಆಗಿದ್ದರು. ಎಂದು ಹೇಳಿದರು. ಪರಿಸರ ಸ್ನೇಹಿ ಅಭಿವೃದ್ದಿಗೆ ಈ ಕ್ರಿಕೆಟ್ ಸ್ಟೇಡಿಯಂ ಉದಾಹರಣೆಯಾಗಿದೆ ಎಂದವರು ಶ್ಲಾಘಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, 1.10 ಲಕ್ಷ ಮಂದಿ ಪ್ರೇಕ್ಷಕರು ಈ ಸ್ಟೇಡಿಯಂನಲ್ಲಿ ಆಸೀನರಾಗಿ ಕ್ರಿಕೆಟ್ ವೀಕ್ಷಿಸಬಹುದಾಗಿದೆ. ವಿಶ್ವದ ಅತಿ ದೊಡ್ಡ ಕ್ರೀಡಾ ಸ್ಟೇಡಿಯಂ ಇದಾಗಿದೆ ಎಂದು ಹೇಳಿದರು.

ಮೊಟೆರಾ ಸ್ಟೇಡಿಯಂಗೆ ಮಾತ್ರ ಮರುನಾಮಕರಣ, ಕ್ರೀಡಾ ಸಂಕೀರ್ಣಕಲ್ಲ: ಕೇಂದ್ರ ಸ್ಪಷ್ಟನೆಮೊಟೆರಾದನವೀಕೃತ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಪ್ರಧಾನಿ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ವಿವಾದ ಉಂಟಾಗಿರುವಂತೆಯೇ ಕೇಂದ್ರ ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹೆಸರು ಬದಲಾವಣೆಯು ಕೇವಲ ಮೊಟೆರಾದ ಕ್ರಿಕೆಟ್ ಕ್ರೀಡಾಂಗಣಕ್ಕೆ ಮಾತ್ರವೇ ಸೀಮಿತವಾಗಿದೆ ಮತ್ತು ಇಡೀ ಕ್ರೀಡಾ ಸಂಕೀರ್ಣಕ್ಕೆ ಸರ್ದಾರ್ ವಲ್ಲಭ ಬಾಯ್ಪಟೇಲ್ ಅವರ ಹೆಸರನ್ನೇ ಮುಂದುವರಿಸಲಾಗಿದೆಯೆಂದು ತಿಳಿಸಿದೆ.

ನರೇಂದ್ರ ಮೋದಿ ಸೇಡಿಯಂನಲ್ಲಿ 'ಅದಾನಿ ಪೆವಿಲಿಯನ್', ರಿಲಯನ್ಸ ಎಂಡ್' !: ಗುಜರಾತ್‌ನ ಅಹಮದಾಬಾದ್‌ನಲ್ಲಿನ ಸರ್ದಾರ್  ಪಟೇಲ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಹೆಸರಿಡಲಾಗಿದೆ. ಕೊನೆಯ ಕ್ಷಣದವರೆಗೂ ಈ ಕುರಿತಾದಂತೆ ಯಾವುದೇ ಮಾಹಿತಿಯೂ ಹೊರ ಬಿದ್ದಿರಲಿಲ್ಲ. ಇದೀಗ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 'ಅದಾನಿ ಪೆವಿಲಿಯನ್' ಮತ್ತು “ರಿಲಯನ್ಸ್ ಎಂಡ್' ಇರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಹುಲ್ ಗಾಂಧಿ ಪಾರ್ಲಿಮೆಂಟ್‌ನಲ್ಲಿ ಹೇಳಿದ್ದ 'ಹಮ್ ದೋ ಹಮಾರೆ ದೂ' ಎಂಬ ಹೇಳಿಕೆಯು ಇಲ್ಲಿ ಅನ್ವರ್ಥವಾಗಿದೆ ಎಂದು ಬಳಕೆದಾರರೋರ್ವರು ಟ್ವಿಟ್ಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ. ಎಲ್ಲವೂ ಆಯಿತು, ಇನ್ನು ಗುಜರಾತ್ ಅನ್ನು ಮೋದಿಸ್ತಾನ್ ಎಂದೂ ರಾಜ್ ಕೋಟ್ ಅನ್ನು ರಿಲಯನ್ಸ್ ಕೋಟ್ ಎಂದು ಮರುನಾಮಕರಣ ಮಾಡಲಿಕ್ಕಿದೆಯೇ?, ಇಬ್ಬರು ಬಂಡವಾಳಶಾಹಿಗಳ ಹೆಸರಿರುವ ಸ್ಟೇಡಿಯಂಗೆ ಮೋದಿ ಹೆಸರಿಟ್ಟದ್ದು ಒಳ್ಳೆಯದಾಯಿತು, ಇಲ್ಲವಾದಲ್ಲಿ ಸರ್ದಾರ್ ಪಟೇಲರಿಗೆ ಅವಮಾನವಾಗುತ್ತಿತ್ತು ಎಂದು ಬಳಕೆದಾರರು ಟೈಟಿಸಿದ್ದಾರೆ.

1933ರಲ್ಲಿ ಸ್ವತ್ಥಾರ್ಟ್‌ನಲ್ಲಿದ್ದ ಸ್ಟೇಡಿಯಂಗೆ ಹಿಟ್ಲರ್ ತನ್ನದೇ ಹೆಸರಿಟ್ಟಿದ್ದ. ಆದರೆ ಮಹಾಯುದ್ಧದ ಬಳಿಕ ಆ ಹೆಸರನ್ನು ಬದಲಾಯಿಸಲಾಯಿತು. ನರೇಂದ್ರ ಮೋದಿ ಸರ್ದಾರ್ ಪಟೇಲ್‌ರನ್ನು ಅವಮಾನಿಸಿದ್ದಾರೆ ಎಂದು ಬಳಕೆದಾರರೋರ್ವರು ದ್ವೀಟಿಸಿದ್ದಾರೆ. ಸರ್ದಾರ್ ಪಟೇಲರು ಆರೆಸ್ಸೆಸ್ ಅನ್ನು ನಿಷೇಧಿಸಿದ್ದರಿಂದ ಅವರ ಮೇಲೆ ಈ ರೀತಿಯಾಗಿ ಸೇಡು ತೀರಿಸುತ್ತಿದ್ದಾರೆ. ಎಲ್ಲವನ್ನೂ ಬದಲಾಯಿಸಿ ಮುಗಿಯಿತು. ಇನ್ನು ಸರ್ದಾರ್ ಪಟೇಲರ ಪ್ರತಿಮೆಗೆ ಮೋದಿಯ ಮುಖವನ್ನಿಡುವುದೊಂದೇ ಬಾಕಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...