ಮಳೆಗಾಲ ಮುಂಜಾಗ್ರತಾ ಕ್ರಮದ ಪೂರ್ವಭಾವಿ ಸಭೆ

Source: so news | By MV Bhatkal | Published on 10th May 2019, 12:21 AM | Coastal News |

ಮುಂಡಗೋಡ : ಮಳೆಗಾಲದ ಮುಂಜಾಗ್ರತವಾಗಿ  ಕೈಗೊಳ್ಳಬೇಕಾದ ಕ್ರಮದ ಕುರಿತು ತಹಶೀಲ್ದಾರ ಶಂಕರ ಗೌಡಿ ಅಧ್ಯಕ್ಷತೆಯಲ್ಲಿನ ಪೂರ್ವಭಾವಿ ಸಭೆ ಮಿನಿ ವಿಧಾನ ಸಭೆಯ ಸಭಾಂಗಣದಲ್ಲಿ ನಡೆಯಿತ

ಪಟ್ಟಣದ ಹೆಗಡೆ ಆಸ್ಪತ್ರೆ ಹತ್ತಿರ ಮಳೆಗಾಲದಲ್ಲಿ  ನೀರು  ರಸ್ತೆಗೆ ಬರುತ್ತಿದೆ ಅದನ್ನು ಸರಿಪಡಿಸಬೇಕು ಹಾಗೆ ಪಟ್ಟಣದಲ್ಲಿ ಇತರಡೆ ಬರುತ್ತಿದ್ದರೆ ಎಲ್ಲವನ್ನು ಸರಿಪಡಿಸಬೇಕು ಎಂದು ಪ.ಪಂ ಮುಖ್ಯಾಧಿಕಾರಿಗಳಿಗೆ ತಿಳಿಸಲಾಯಿತು. ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಆಯಾ ಗ್ರಾ.ಪಂ.ನ  ಅಭಿವೃದ್ಧಿ ಅಧಿಕಾರಿಗಳು ನೋಡಿಕೊಳ್ಳಬೇಕು. ಸರಿಯಾಗಿ ಕೆಲಸ ನಿರ್ವಹಿಸಿದ್ದಾರೆಯೇ ಇಲ್ಲವೆ ಎಂಬ ಬಗ್ಗೆ ತಾ.ಪಂ. ಇಒ ಮೇಲುಸ್ತುವಾರಿ ವಹಿಸುವಂತೆ ತಿಳಿಸಲಾಯಿತು. 

ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯಿತಿ ರಾಜ್ ಇಂಜಿನಿಯರಿಂಗ್‍ಗಳಿಗೆ ಸಂಬಂಧಪಟ್ಟ ರಸ್ತೆಗಳ, ಸೇತುವೆಗಳ ಹಾಗೂ ಚರಂಡಿಗಳ ದುರಸ್ತಿಯನ್ನು ಮಳೆಗಾಲ ಆರಂಭವಾಗುವ ಮೊದಲೇ ಸರಿಪಡಿಸುವಂತೆ, ಮಳೆ ಬಿದ್ದ ಸಂದರ್ಭದಲ್ಲಿ ರಸ್ತೆಗಳಿಗೆ ಹಾನಿಯಾದರೆ ಹಾಗೂ ರಸ್ತೆಗಳ ಮೇಲೆ ಮರಗಳು ಬಿದ್ದರೆ ಬೇಗನೆ ಸ್ಪಂದಿಸಲು ತಿಳಿಸಲಾಯಿತು. ಅರಣ್ಯ ಇಲಾಖೆಯವರು ಮಳೆಗಾಲದ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿರುವ ಬೀಳುವ ಹಂತದಲ್ಲಿರುವ ಮರಗಳನ್ನು ಈಗಲೇ ತೆರವುಗೊಳಿಸಬೇಕು ಹಾಗೂ ಮರಗಳನ್ನು ತೆರವುಗೊಳಿಸಲು ಲೈಫ್ ಜಾಕೆಟ್ ಹಾಗೂ ಬೋಟುಗಳನ್ನು ಸಿದ್ಧವಾಗಿಡುವಂತೆ ತಿಳಿಸಲಾಯಿತು.

ಮಳೆಗಾಲದ ವೇಳೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸಾಂಕ್ರಾಮಿಕ ರೋಗಗಳು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕ ಸೂಚನೆಯನ್ನು ನೀಡಬೇಕು ಹಾಗೂ ಔಷಧಿಗಳ ದಾಸ್ತಾನು ಇಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಯಿತು. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳು ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಹಾಗೂ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಒದಗಿಸಬೇಕು. ಮಳೆಯಿಂದ ಬೆಳೆ ಹಾನಿಯಾದ ಬಗ್ಗೆ ಬೇಗ ವರದಿ ನೀಡಲು ತಿಳಿಸಲಾಯಿತು.

ಮಳೆ ಗಾಳಿಯಿಂದ ವಿದ್ಯುತ್ ಸರಬರಾಜಿಗೆ ತೊಂದರೆಯಾದರೆ ಬೇಗನೆ ಸ್ವಂದಿಸಲು ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ಇಂಜಿನಿಯರ್‍ಗೆ ತಹಸೀಲ್ದಾರ ಸೂಚಿಸಿದರು.

 ತಾ.ಪಂ. ಇಒ ಪ್ರವೀಣ ಕಟ್ಟಿ, ಪಿಡ್ಬ್ಲೂಡಿ ಅಧಿಕಾರಿ ದಯಾನಂದ, ರೆವಿನ್ಯೂ ಇನ್ಸಪೆಕ್ಟರ ಸಂಜು, ಕೃಷಿ ಅಧಿಕಾರಿ ಎಮ್. ಎಸ್. ಕುಲಕರ್ಣಿ, ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸಾಳುಂಕೆ, ಪ.ಪಂ. ಮುಖ್ಯಾಧಿಕಾರಿ ಎಮ್. ಬಿ.ಬೃಂಗಿಮಠ ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Read These Next