ಕಾರವಾರ: ಸೆ. 27ಕ್ಕೆ ಅಂಚೆ ಅದಾಲತ್

Source: S O News service | By I.G. Bhatkali | Published on 19th September 2021, 8:42 PM | Coastal News |

ಕಾರವಾರ:  ಕಾರವಾರ ಅಂಚೆ ವಿಭಾಗದ 2021 ನೇ ಸಾಲಿನ 3ನೇ ತ್ರೈಮಾಸಿಕ ಅಂಚೆ ಅದಾಲತ್ ಸೆ. 27 ರಂದು ಕಾರವಾರ ವಿಭಾಗದ ಅಂಚೆ  ಅಧೀಕ್ಷಕರ ಕಛೇರಿಯಲ್ಲಿ ಬೆಳಗ್ಗೆ 11 ಕ್ಕೆ  ಜರುಗಲಿದೆ. 

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿರುವ ಅಂಚೆ ಸೇವೆಗಳಿಗೆ ಸಂಬಂಧಪಟ್ಟ ಸಲಹೆ, ಸೂಚನೆ ಮತ್ತು ದೂರುಗಳನ್ನು ಅಂಚೆ ಅದಾಲತ್ ನಲ್ಲಿ ವಿಚಾರಣೆಗೆ ಎಂದು ಮೇಲ್ಬರಹ ಬರೆದು ಯಾವುದೇ ಅಂಚೆ ಕಚೇರಿಯಲ್ಲಿ ರವಾನೆಗಾಗಿ ಸಲ್ಲಿಸಬಹುದು. ಇಂತಹ ಲಕೋಟೆಗೆ ಅಂಚೆ ವೆಚ್ಚ ಭರಿಸುವ ಅಗತ್ಯವಿರುವುದಿಲ್ಲ. ದೂರು ಮತ್ತು ಸಲಹೆ ಸೂಚನೆಗಳನ್ನು ಅಂಚೆ ಅಧಿಕ್ಷಕರು, ಕಾರವಾರ ವಿಭಾಗ, ಕಾರವಾರ ಇವರ ಕಾರ್ಯಲಯಕ್ಕೆ ಸೆ. 24 ರೊಳಗೆ ತಲುಪೀಸಬೇಕು.

ಅಂಚೆ ಅದಾಲತ್ ನಲ್ಲಿ  ಅಂಚೆ ಕಚೇರಿಗಳಿಂದ ಈಗ ಕೊಡುತ್ತಿರುವ ಸೇವೆಗಳಲ್ಲಿರುವ ಕೊರತೆಗಳನ್ನು ಮತ್ತು ಅವುಗಳನ್ನು ಸುಧಾರಿಸುವ ಸಲಹೆ ಸೂಚನೆಗಳನ್ನμÉ್ಟೀ ಚರ್ಚಿಸಲಾಗುವುದು. ಇಲಾಖೆಯ ಕಾರ್ಯನೀತಿ ಧೋರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಈ ವಿಭಾಗೀಯ ಅಂಚೆ ಅದಾಲತ್ ನಲ್ಲಿ ಚರ್ಚಿಸಲಾಗುವುದಿಲ್ಲ. ಇಂತಹ ಕಾರ್ಯನೀತಿ ಧೋರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಬೇರೆ ಯಾವುದೇ ಸಮಯದಲ್ಲಿ ಬರೆದು ತಿಳಿಸಿದ್ದಲ್ಲಿ, ಸಂಬಂಧ ಪಟ್ಟಿ ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದು ಕಾರವಾದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ : ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ

ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಜಿಲ್ಲೆಯಾದ್ಯಂತ ...

ಕಾರವಾರ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನವ ಸಂಪನ್ಮೂಲ ಪಡೆಯಲು ಅಲ್ಪಾವಧಿ ಟೆಂಡರ

ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2021-22 ನೇ ಸಾಲಿನ ಕ್ರಿಯಾ ಯೋಜನೆ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಆರು ತಿಂಗಳ ಅವಧಿಗೆ ...

ದಸರಾ ರಜೆಗೆ ಮುರುಡೇಶ್ವರವನ್ನು ತುಂಬಿಕೊಂಡ ಪ್ರವಾಸಿಗರು; ಕಡಲತಡಿಯಲ್ಲಿ ಜನವೋ ಜನ; ವಾಹನ ದಟ್ಟಣೆ ನಿಭಾಯಿಸಲು ಪೊಲೀಸ್ ಸಾಹಸ

ಸರಣಿ ರಜೆಯಿಂದಾಗಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಪ್ರವಾಸಿಗರಿಂದ ತುಂಬಿ ಹೋಗಿದೆ. ಕಡಲ ತಡಿಯಲ್ಲಿ ಕಣ್ಣು ...