ಬಿಜೆಪಿ ನೇತೃತ್ವದ ಎನ್.ಡಿ.ಎ ಮತ್ತೊಮ್ಮೆ ಅಧಿಕಾರಕ್ಕೆ; ಸಮೀಕ್ಷೆಗಳಿಂದ ಬಹಿರಂಗ

Source: sonews | By Staff Correspondent | Published on 19th May 2019, 10:02 PM | National News | Don't Miss |

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು ಕೊನೆಗೊಂಡಿದ್ದು, ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಎನ್ ಡಿಎ ಬಹುಮತ ಗಳಿಸಲಿದೆ ಎಂದು ಹೇಳಿದೆ.

ವಿವಿಧ ಸಮೀಕ್ಷೆಗಳ ವಿವರ ಈ ಕೆಳಗಿದೆ

272 ಮ್ಯಾಜಿಕ್ ನಂಬರ್

ಸಿವೋಟರ್ ಸಮೀಕ್ಷೆ ಪ್ರಕಾರ ಎನ್ ಡಿಎ 287 ಸ್ಥಾನಗಳನ್ನು ಗೆಲ್ಲಲಿದೆ, ಯುಪಿಎ 128  ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು 127 ಸ್ಥಾನಗಳು ಇತರರ ಪಾಲಾಗಲಿದೆ.

ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಎನ್ ಡಿಎ 306 ಸ್ಥಾನಗಳಲ್ಲಿ,  ಯುಪಿಎ 132 ಸ್ಥಾನಗಳಲ್ಲಿ, 104 ಸ್ಥಾನಗಳಲ್ಲಿ ಇತರರು ಗೆಲ್ಲಲಿದ್ದಾರೆ.

ನ್ಯೂಸ್ ನೇಶನ್ ಪ್ರಕಾರ 282-290 ಎನ್ ಡಿಎಗೆ, 118-126 ಯುಪಿಎಗೆ ಮತ್ತು 130-138 ಸ್ಥಾನಗಳು ಇತರರಿಗೆ ಲಭಿಸಲಿದೆ.

ಎಬಿಪಿ ಪ್ರಕಾರ 336 ಸ್ಥಾನಗಳಲ್ಲಿ ಎನ್ ಡಿಎ ಗೆಲ್ಲಲಿದ್ದು, 55 ಯುಪಿಎ ಮತ್ತು 148 ಸ್ಥಾನಗಳು ಇತರರ ಪಾಲಾಗಲಿದೆ.

ಇಂಡಿಯಾ ಟುಡೆ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 21 ಸ್ಥಾನಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಕೇವಲ 3ರಿಂದ 6 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ

ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಕೂಡ ಎನ್ ಡಿಎಗೆ ಬಹುಮತ ಎಂದು ಹೇಳಿದೆ. ಇದರ ಪ್ರಕಾರ ಎನ್ ಡಿಎ 306, ಯುಪಿಎ 132 ಮತ್ತು ಇತರರು 104 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ.

ರಿಪಬ್ಲಿಕ್ ಜನ್ ಕಿ ಬಾತ್ ಪ್ರಕಾರ ಎನ್ ಡಿಎ 295-315, ಯುಪಿಎ 122-125 ಮತ್ತು ಇತರರು 125 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ.

ನ್ಯೂಸ್ ನೇಶನ್ ಸಮೀಕ್ಷೆಯಲ್ಲಿ 280-290 ಸ್ಥಾನಗಳು ಎನ್ ಡಿಎ, 118-126 ಸ್ಥಾನಗಳು ಯುಪಿಎ, 130-138 ಸ್ಥಾನಗಳು ಇತರರ ಪಾಲಾಗಲಿದೆ

ನ್ಯೂಸ್ ಎಕ್ಸ್ –ನೇತಾ ಸಮೀಕ್ಷೆಯಲ್ಲಿ ಮಾತ್ರ ಎನ್ ಡಿಗೆ ಸ್ಥಾನಗಳು ಕಡಿಮೆಯಾಗಿವೆ. ಈ ಸಮೀಕ್ಷೆ ಪ್ರಕಾರ ಎನ್ ಡಿಎ 242 ಸ್ಥಾನಗಳನ್ನು, ಯುಪಿಎ 165 ಸ್ಥಾನಗಳನ್ನು ಮತ್ತು 136 ಸ್ಥಾನಗಳನ್ನು ಇತರರು ಗೆಲ್ಲಲಿದ್ದಾರೆ.

Read These Next

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...

ಶರಾವತಿ ಅಭಯಾರಣ್ಯಕ್ಕೆ ಅರಣ್ಯ ಪ್ರದೇಶ ಸೇರ್ಪಡೆ ವಿರೋಧಿಸಿ ಅ.೧೦ ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ

ಭಟ್ಕಳ: ಶರಾವತಿ ಅಭಯಾರಣ್ಯಕ್ಕೆ ಭಟ್ಕಳ ತಾಲೂಕಿನ ಅರಣ್ಯ ಪ್ರದೇಶವನ್ನು ಸೇರ್ಪಡಿಸಿದ್ದನ್ನು ಖಂಡಿಸಿ ಹಾಗೂ ಸೇರ್ಪಡೆಗೊಂಡ ...