ಮುರ್ಡೇಶ್ವರದ ಆರ್.ಎನ್.ಎಸ್.ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

Source: sonews | By Staff Correspondent | Published on 18th January 2019, 5:17 PM | Coastal News | Don't Miss |

ಭಟ್ಕಳ: ಗ್ರೀಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ (ಟ್ಯಾಲಿ ಸಾಪ್ಟವೇರ್ ಗ್ರೂಪ್) ಬೆಂಗಳೂರು ಕಂಪನಿಯಲ್ಲಿ ಕೆಲಸ ನಿರ್ವಹಿಸಲು 100 ಜನ ಪದವೀದರ ಲೆಕ್ಕ ನಿರ್ವಾಹಕ ಖಾಯಂ ಹುದ್ದೆಗಾಗಿ ಬಿ.ಎ. ಬಿ.ಕಾಂ. ಬಿ.ಎಸ್ಸಿ. ಬಿ.ಬಿ.ಎಂ. ಬಿ.ಬಿ.ಎ. ಎಂ.ಕಾಮ್ ಎಂ.ಬಿ.ಎ. (ಪೈನಾನ್ಸ್) ನಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ 2017 ಮತ್ತು 2018ರ ಬ್ಯಾಚ್‍ನಲ್ಲಿ ಪಾಸಾದ ಉತ್ತಮ ಇಂಗ್ಲೀಷ್ ಹಾಗೂ ಹಿಂದಿ (ಸಂವಹನ ಕೌಶಲ್ಯ) ಮಾತನಾಡಬಲ್ಲ ಬೆಂಗಳೂರಿನಲ್ಲಿ ಕೆಲಸ ಮಾಡಲು ಇಚ್ಛಿಸುವ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳನ್ನು ಲೆಕ್ಕ ನಿರ್ವಾಹಕ (ಅಕೌಂಟ್ ಪ್ರೊಷಸ್ ಎಕ್ಸಿಕ್ಯೂಟಿವ್) ಹುದ್ದೆಗೆ ಪೂಲ್ ಕ್ಯಾಂಪಸ್ ಸಂದರ್ಶನ ಮೂಲಕ ಜ.19 ಶನಿವಾರ ಬೆಳಿಗ್ಗೆ 9.30 ಗಂಟೆಯಿಂದ ಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜು, ಮುಡೇಶ್ವರದಲ್ಲಿ ಬರವಣಿಗೆ ಪರೀಕ್ಷೆ ಮತ್ತು ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವದು. 

ಆಯ್ಕೆಯಾದ  ಅಭ್ಯರ್ಥಿಗಳಿಗೆ ಪ್ರಾರಂಭದಲ್ಲಿ 45 ದಿವಸ ಕಂಪನಿ ವತಿಯಿಂದ ಉಚಿತ ಟ್ಯಾಲಿ ತರಬೇತಿ ನೀಡಿ, ತರಬೇತಿ ನಂತರ ಪ್ರಮಾಣ ಪತ್ರ ಹಾಗೂ ಪ್ರತಿ ತಿಂಗಳ ಸಂಬಳ ರೂ.13,500/- ಗಳನ್ನು ನೀಡಲಾಗುವುದು. ಒಂದು ವರ್ಷದ ನಂತರ ಉತ್ತಮ ಅಭ್ಯರ್ಥಿಗಳಿಗೆ ದುಬೈನಲ್ಲಿ ಅಲ್ಪಾವಧಿ, ದೀರ್ಘಾವಧಿ ಕಾಲ ವಿದೇಶದಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ದೊರೆಯಲಿದೆ. ಸಂದರ್ಶನಕ್ಕೆ ಆಗಮಿಸುವ ಅರ್ಹ ಅಭ್ಯರ್ಥಿಗಳು ಬಯೋಡೇಟಾ, ಎರಡು ಪಾಸ್ ಪೋರ್ಟ ಸೈಜ್ ಫೋಟೋ, ಅಂಕಪಟ್ಟಿಗಳ ನಕಲುಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಉದ್ಯೋಗಾಧಿಕಾರಿ ಹಾಗೂ ಪಾಲಿಟೆಕ್ನಿಕ್ ಉಪಪ್ರಾಚಾರ್ಯ ಕೆ. ಮರಿಸ್ವಾಮಿ (9448235284)ಪ್ರಕಟಣೆ ಮೂಲಕ ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಆರ್.ಎನ್.ಎಸ್. ಪ್ರಥಮ ದರ್ಜೇ ಕಾಲೇಜಿನ ಪ್ರಾಚಾರ್ಯರಾದ ಮಾಧವ ಪಿ. (9481758637) ಮತ್ತು ಗಣೇಶ್ ಮೊಗೇರ್ (9880162168) ನಿರ್ದೇಶಕರು ಪ್ರೊಪೆಶನಲ್ ಎಚ್.ಆರ್.ಸರ್ವಿಸಸ್ ಬೆಂಗಳೂರು ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ.       
                                                          
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...