ರಾಜಕೀಯ ಗುರಾಣಿಗಳು ಮತ್ತು ಸಾಹಿತ್ಯ ಸಮ್ಮೇಳನ

Source: sonews | By Staff Correspondent | Published on 13th January 2019, 3:50 PM | National News | Don't Miss |

ಎದುರಾಳಿಗಳನ್ನು ಒಂದು ಸೂಕ್ತ ವಿಮರ್ಶೆಗಳ ಮೂಲಕ ಎದುರಾಗದಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದನೆಯ ಮೇಲೆ ಮಿತಿಗಳನ್ನು ಹೇರುತ್ತದೆ.

ಮಹಾರಾಷ್ಟ್ರದ ಯಾವತ್ಮಲ್ನಲ್ಲಿ ಜನವರಿ ೧೧ ಕ್ಕೆ ನಡೆದ ೯೨ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲು ನಯನತಾರಾ ಸೆಹಗಲ್ ಅವರಿಗೆ ಕೊಟ್ಟಿದ್ದ ಆಹ್ವಾನವನ್ನು ಆಯೋಜಕರು ಹಿಂತೆದುಕೊಂಡಿದ್ದು ಸಾಹಿತ್ಯ ಗಣ್ಯರನ್ನೂ ಒಳಗೊಂಡಂತೆ ಹಲವರ ಖಂಡನೆಗೆ ಮತ್ತು ವಿಸ್ತೃತವಾದ ಟೀಕಾಪ್ರಹಾರಗಳಿಗೆ ಗುರಿಯಾಗಿದೆ. ಆಯೋಜಕರ ಕ್ರಮವು ಕೇವಲ ನಯನಾತಾರ ಸೆಹಗಲ್ ಅವರಿಗೆ ಮಾತ್ರವಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದಂಥ ಪ್ರಜಾತಾಂತ್ರಿಕ ಮೌಲ್ಯಗಳ ಹಿತಾಸಕ್ತಿಯನ್ನು ಹೊಂದಿರುವ ಪ್ರತಿಯೊಬ್ಬರನ್ನೂ ಆಳವಾಗಿ ವಿಚಲಿತಗೊಳಿಸಿದೆಯಲ್ಲದೆ ಮೂರು ಮುಖ್ಯ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಮೊದಲನೆಯದಾಗಿ ಕೊಟ್ಟ ಆಹ್ವಾನವನ್ನು ಹಿಂತೆದುಕೊಂಡಿದ್ದರಿಂದ ಸಂಸ್ಥೆಯ ಆತ್ಮ ಘನತೆಗೆ ಪೆಟ್ಟು ತಗುಲಿದೆ. ಆದರೆ ಇದರಿಂದ ನಷ್ಟವಾಗಿರುವುದು ಯಾರಿಗೆ? ಆಹ್ವಾನಿತರಿಗೋ? ಅತಿಥೇಯರಿಗೋ? ಎರಡನೆಯದಾಗಿ ರೀತಿಯ ತದ್ವಿರುದ್ಧವಾದ ನಿಲುವುಗಳಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣರಾದವರ ನೈತಿಕ ಸ್ಥಾಯಿಯ ಮೇಲೆ ಇಂಥಾ ತೀರ್ಮಾನಗಳು ಯಾವ ಪ್ರಭಾವವನ್ನು ಬೀರುತ್ತವೆ? ಅಂತಿಮವಾಗಿ ಇಂಥಾ ತೀರ್ಮಾನಗಳು ಅಭಿವ್ಯಕ್ತಿ ಸ್ವಾತಂತ್ರ್ಯದಂಥ ಪ್ರಜಾತಾಂತ್ರಿಕ ಮೌಲ್ಯಗಳ ರಕ್ಷಣೆಗೆ ಹೋರಾಡುತ್ತಿರುವವರ ಆತ್ಮ ಗೌರವದ ಸಾರವನ್ನು ಕಡಿಮೆ ಮಾಡಬಲ್ಲದೇ?

ನಡೆಯಿಂದಾಗಿ ಸಮ್ಮೇಳನವನ್ನು ಆಯೋಜಿಸಿದ್ದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಳದ ಕಾರ್ಯದರ್ಶಿಯು ರಾಜೀನಾಮೆ ಕೊಟ್ಟಿರುವುದು ಒಂದೋ ಅವರನ್ನು ಅಪಮಾನಿಸಲಾಗಿದೆಯೆಂಬುದನ್ನು ಅಥವಾ ಅವರ ಆತ್ಮ ಗೌರವಕ್ಕೆ ಕುಂದಾಗಿದೆಯೆಂಬುದನ್ನು ಸಾಬೀತು ಮಾಡುತ್ತದೆ. ಹೀಗಾಗಿ ಕೇಳಬೇಕಾಗಿರುವ ಪ್ರಶ್ನೆಯೇನೆಂದರೆ: ಹೀಗೆ ತಮ್ಮನ್ನು ತಾವೇ ಅಪಮಾನಗೊಳಿಸಿಕೊಳ್ಳುವ ಕಾರ್ಯಕ್ರಮದಲ್ಲಿ ರಾಜೀನಾಮೆ ಕೊಟ್ಟ ಕಾರ್ಯದರ್ಶಿಯವರನ್ನೂ ಒಳಗೊಂಡಂತೆ ಯಾರಾದರೂ ಏಕೆ ಭಾಗವಹಿಸಬೇಕು? ಅದಕ್ಕಿಂತೆ ಮುಖ್ಯವಾದ ಪ್ರಶ್ನೆಯೇನೆಂದರೆ ಆಡಳಿತರೂಢ ರಾಜಕೀಯ ಶಕ್ತಿಗಳು ಯಾರನ್ನಾದರೂ ಇಂಥಾ ಅಪಮಾನಕ್ಕೆ ಏಕೆ ದೂಡಬೇಕು? ಸಮ್ಮೇಳನದ ಸಂಘಟನಾ ಸಮಿತಿಯ ಕೆಲವು ಸದಸ್ಯರು ಇಂಥಾ ಸಂದರ್ಭಗಳು ಉದ್ಭವಿಸಿದಾಗ ಸಾರ್ವಜನಿಕರ ಆಕ್ರೋಶ ಆಳುವ ಸರ್ಕಾರದ ವಿರುದ್ಧ ತಿರುಗದಂತೆ ತಮ್ಮ ಮೇಲೆ ವರ್ಗಾಯಿಸಿಕೊಂಡು ಆಳುವವರ ಗುರಾಣಿಗಳಾಗಿ ವರ್ತಿಸುತ್ತಾರೆ ಮತ್ತದು ಅಂಥವರ ಮುಂದಿನ ವೃತ್ತಿಪರ ಮತ್ತು ರಾಜಕೀಯ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ಚಿಮ್ಮುಹಲಗೆಯೂ ವರ್ತಿಸುತ್ತದೆ. ಪ್ರಾಯಶಃ ಇದು ಕೊನೆಯ ಪ್ರಶ್ನೆಗೆ ಉತ್ತರವೂ ಹೌದು. ಇಂಥಾ ಆಶೋತ್ತರಗಳ ಸಲುವಾಗಿಯೇ ಸೆಹಗಲ್ ಅವರಿಗೆ ಕೊಟ್ಟ ಆಹ್ವಾನವನ್ನು ಏಕಪಕ್ಷೀಯವಾಗಿ ಹಿಂತೆಗೆದುಕೊಂಡಿದ್ದರಿಂದ ಉದ್ಭವಿಸಿದ ವಿಸ್ತೃತವಾದ ವಿಮರ್ಶೆಗಳನ್ನು ತಮ್ಮ ಮೇಲೆ ಹಾಕಿಕೊಂಡು ಬಿಕ್ಕಟ್ಟು ಶಮನ ಮಾಡಲು ಕೆಲವು ಸದಸ್ಯರು ಮುಂದಾದರು. ಇದರ ಜೊತೆಗೆ ಆಳುವವರಿಂದ ಉಂಟಾದ ಒತ್ತಡವನ್ನು ಸಹ ಸಂಘಟಕರು ನಿವಾರಿಸಿಕೊಂಡರು.

ಸಮ್ಮೇಳನ ಸಂಘಟನಾ ಸಮಿತಿಯ ತೀರ್ಮಾನಗಳಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಮಂತ್ರಿಗಳು ಅಂತರವನ್ನು ಕಾಯ್ದುಕೊಂಡರು. ಉದ್ಘಾಟನಾ ಭಾಷಣವನ್ನು ರದ್ದುಮಾಡಿದ ತೀರ್ಮಾನದಲ್ಲಿ ಸರ್ಕಾರದ ನೇರಪಾತ್ರವು ಇಲ್ಲದಿರಬಹುದು. ಅದೇನೇ ಇದ್ದರೂ ಅಂಥಾ ತೀರ್ಮಾನದ ಪರಿಣಾಮದಿಂದ ಮಾತ್ರ  ಆಡಳಿತರೂಢ ಸರ್ಕಾರಕ್ಕೇ ಲಾಭವಾಗಿದೆಯೆಂಬುದನ್ನು ತಳ್ಳಿಹಾಕುವಂತಿಲ್ಲ.

ಸಮ್ಮೇಳನದ ಸಂಘಟಕರನ್ನು ಅವಮಾನಕಾರಿ ಪರಿಸ್ಥಿತಿಗೆ ದೂಡಿದ ಹೊಣೆಗಾರಿಕೆಯಿಂದ ಮಾತ್ರ ರಾಜ್ಯ ಸರ್ಕಾರವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಮರಾಠಿ ಸಾಹಿತ್ಯಿಕ ಸಮುದಾಯದ ಗಣ್ಯಾತಿಗಣ್ಯ ಸದಸ್ಯರು ಮಾಡುತ್ತಿದ್ದ ತೀವ್ರವಾದ ಮತ್ತು ಪ್ರಬಲವಾದ ಟೀಕಾಪ್ರಹಾರಗಳಿಂದ ತಪ್ಪಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರದ ಮೈತ್ರಿಕೂಟದ ಹಲವಾರು ಸದಸ್ಯರು ಗುರಾಣಿಗಳ ಹಿಂದೆ ಅವಿತುಕೊಂಡರು. ಮೌಲ್ಯರಹಿತ ಗುರಾಣಿ ಗಳ ರಾಜಕೀಯ ಉತ್ಪಾದನೆಯು  ಪ್ರಜಾತಾಂತ್ರಿಕ ಮೌಲ್ಯಗಳ ಬಗ್ಗೆ ಸರ್ಕಾರ ಮತ್ತು ಪಕ್ಷಗಳ ವೇದಿಕೆಯಲ್ಲಿ ಚರ್ಚೆ ಮಾಡಲು ಬೇಕಾದ ಅವಕಾಶವನ್ನು ಸೃಷ್ಟಿಸಿಕೊಳ್ಳಲು ಬೇಕಾದ ನೈತಿಕ ಇಚ್ಚ್ಚಾಶಕ್ತಿ ರಾಜಕಾರಣಿಗಳಲ್ಲಿ ಇಲ್ಲದಿರುವುದರ ಪರಿಣಾಮವೇ ಆಗಿದೆ.

ನಯನತಾರ ಸೆಹಗಲ್ ಅವರ ಭಾಷಣವು ಸತ್ಯವನ್ನು ಅಧಿಕಾರಸ್ಥರ ಮುಖಕ್ಕೆ ಹಿಡಿಯುವ ಕ್ರಿಯೆಯೇ ಆಗಿರುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಮತ್ತು ಕೇಂದ್ರ ಹಾಗೂ ರಾಜ್ಯದಲ್ಲಿರುವ ಅಧಿಕಾರರೂಢರು ಅಧಿಕಾರದ ಬಗೆಗಿನ ನೈಷ್ಠಿಕ ವಿಮರ್ಶೆಗಳನ್ನು ಕೇಳಿಸಿಕೊಳ್ಳುವ ಸಾiರ್ಥ್ಯ ಮತ್ತು ಇಚ್ಚೆಯನ್ನು ತೋರಲಿಲ್ಲ. ಇದಕ್ಕೆ ಪ್ರತಿಯಾಗಿ  ೧೯೭೫ರಲ್ಲಿ ಕರಾಡ್ನಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ  ದುರ್ಗಾ ಭಾಗವತ್ ಅವರು ವೇದಿಕೆಯ ಮೇಲೆ ಕೇಂದ್ರ ಮಂತ್ರಿ ವೈ.ಬಿ. ಚವ್ಹಾಣ್ ಅವರ ಉಪಸ್ಥಿತರಿದ್ದರೂ ತುರ್ತುಸ್ಥಿತಿ ಹೇರಿಕೆಯನ್ನು ಖಂಡಿಸಿದ್ದನ್ನು ನೆನಪಿಸಿಕೊಳ್ಳಬೇಕು. ಆಳುವವರ್ಗವು ಸಮ್ಮೇಳನದಿಂದ ದೂರ ಉಳಿದದ್ದನ್ನು ಜನರನ್ನು ಕಳವಳಕ್ಕೀಡು ಮಾಡಿರುವ ಸಂಗತಿಗಳ ಬಗ್ಗೆ ಚರ್ಚಿಸಲು ಸರ್ಕಾರಕ್ಕಿರುವ ಅನಾದರವೆಂದೇ ಅರ್ಥಮಾಡಿಕೊಳ್ಳಬೇಕುಉದಾಹರಣೆಗೆ ವರ್ಗದ ಜನರ ಗಮನವೆಲ್ಲಾ ಅಧಿಕಾರವನ್ನು ಪಡೆದುಕೊಳ್ಳುವ ವ್ಯೂಹತಂತ್ರಗಳ ಸುತ್ತ ಕೇಂದ್ರೀಕರಣಗೊಂಡಿರುತ್ತದೆ. ಆದರೆ ಸಾರ್ವಜನಿಕ ಸಂವಾದಗಳಲ್ಲಿ ಸಹಜ ಮೌಲ್ಯಗಳಾದ ಸಮಾನತೆ, ನ್ಯಾಯ ಮತ್ತು ಆತ್ಮಘನತೆಗಳನ್ನು ಅಂತರ್ಗತ ಭಾಗವಾಗಿ ಮಾಡುವ ಬಗ್ಗೆ ಅವರು ಪ್ರಯತ್ನಗಳನ್ನು ಹಾಕುವುದು ಅಪರೂಪ. ತಮಗಿರುವ ಸಂದೇಹಗಳನ್ನು ಮತ್ತು ಇತರರಿಗಿರುವ ಸಂದೇಹಗಳನ್ನು ನಿವಾರಿಸುವಲ್ಲಿ ಇಂಥಾ ಚರ್ಚೆಗಳು ಅತಿ ಮುಖ್ಯ. ಬಹಿರಂಗ ಚರ್ಚೆಗೆ ಸಿದ್ಧವಿಲ್ಲದಿದ್ದಲ್ಲಿ ಒಳಗಿನ ಚರ್ಚೆಗಾದರೂ ಸಿದ್ಧವಿರಬೇಕು. ಆದರೆ ಮಾನವೀಯ ಮೌಲ್ಯಗಳ ಬಗ್ಗೆಯಾಗಲೀ ಅಥವಾ ಸಾರ್ವತ್ರಿಕ ನಿಯಮಗಳ ಬಗ್ಗೆಯಾಗಲೀ ಆಳುವ ಪಕ್ಷವು ಸರ್ಕಾರದ ವೇದಿಕೆಗಳಲ್ಲಾಗಲೀ ಅಥವಾ ಪಕ್ಷದ ವೇದಿಕೆಗಳಲ್ಲಾಗಲೀ ಚರ್ಚೆಯನ್ನು ಮಾಡುತ್ತಾರೋ ಅಥವಾ ಅಲ್ಲಿಯೂ ಕೇವಲ ಅಧಿಕಾರವನ್ನು ಹಿಡಿದುಕೊಳ್ಳುವ ತಂತ್ರೋಪಾಯಗಳ ಬಗ್ಗೆ ಮಾತ್ರ ಚರ್ಚಿಸುತ್ತಾರೋ ಎಂಬುದು ನಮಗೆ ತಿಳಿದಿಲ್ಲ. ಸರ್ಕಾರದ ವೇದಿಕೆಗಳಲ್ಲಿ ಮತ್ತು ಪಕ್ಷದ ವೇದಿಕೆಗಳಲ್ಲಿ ಯಾವುದೇ ವಿಷಯದ ಬಗೆಗಿನ ಗಂಭೀರವಾದ ಚರ್ಚೆಗಳನ್ನು ಸತತವಾಗಿ ಮುಂದೂಡಲಾಗುತ್ತದೆ. ಹೀಗೆ ಯಾವುದೇ ವೇದಿಕೆಗಳಲ್ಲಿ ಯಾವುದೇ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆಗಳೇ ಆಗದೇ ಇದ್ದಾಗ ತಮ್ಮ ನಿಲುವುಗಳ ಬಗೆಗಿನ ಯಾವುದೇ ಪ್ರತಿರೋಧವನ್ನು ಸೈದ್ಧಾಂತಿಕ ಪೂರ್ವಗ್ರಹಗಳಿಂದ ಮಾತ್ರ ಎದುರಾಗಲು ಸಾಧ್ಯ. ಕಾರಣಕ್ಕಾಗಿಯೇ ೧೯೩೬ರಲ್ಲಿ ಲಾಹೋರಿನಲ್ಲಿ ಜಾತ್ಪಾತ್ ತೋಡಕ್ ಮಂಡಲ್ ತಮ್ಮ ಸಮ್ಮೇಳನದ ಉದ್ಘಾಟನಾ ಭಾಷಣ ಮಾಡಲು ಡಾ. ಬಿ. ಆರ್ ಅಂಬೇಡ್ಕರ್ಗೆ ಕೊಟ್ಟ ಆಹ್ವಾನವನ್ನು ಹಿಂತೆಗೆದುಕೊಂಡಿತ್ತು. ಅದೇ ರೀತಿ ಈಗ ೨೦೧೯ರಲ್ಲಿ ಸೆಹಗಲ್ ಅವರಿಗೆ ಕೊಟ್ಟ ಆಹ್ವಾನವನ್ನು ಹಿಂತೆಗೆದುಕೊಳ್ಳಲಾಗಿದೆ.

ಮರಾಠಿ ಸಾಹಿತ್ಯದ ಗಣ್ಯಾತಿಗಣ್ಯರಿಂದ ಸೆಹಗಲ್ ಅವರಿಗೆ ಧೃಡವಾದ ಬೆಂಬಲಗಳು ವ್ಯಕ್ತವಾಗುತ್ತಿರುವುದು ಮತ್ತು ಸೆಹಗಲ್ ಬದಲಿಗೆ ಮರಾಠಿ ಸಾಹಿತ್ಯದ ಬೇರೆ ಗಣ್ಯರನ್ನು ಆಹ್ವಾನಿಸುವುದಾಗಿ ಸಮ್ಮೇಳನದ ಆಯೋಜಕರು ಇಟ್ಟ ಪ್ರಸ್ತಾಪಗಳನ್ನು ಅವರು ಖಡಾಖಂಡಿತವಾಗಿ ನಿರಾಕರಿಸುತ್ತಿರುವುದು ಪ್ರಜಾತಾಂತ್ರಿಕ ಮೌಲ್ಯಗಳ ದಣಿವರಿಯದ ಹೋರಾಟಗಾರ್ತಿಯಾಗಿರುವ ಸೆಹಗಲ್ ಅವರ ಬಗ್ಗೆ ಹೆಚ್ಚಾಗುತ್ತಿರುವ ಗೌರವದ ಪ್ರತೀಕವಾಗಿದೆ. ಹಾಗೂ ಅದೇ ಸಮಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿಗಳಲ್ಲಿ ಕುಸಿಯುತ್ತಲೇ ಇರುವ ನೈತಿಕ ಸ್ಥಾಯಿಯ ದ್ಯೋತಕವೂ ಆಗಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...