ರಮಝಾನ್ ಮಾಸದಲ್ಲಿ ಮುಸ್ಲಿಮ್ ಓಲೈಕೆಯ ಇಫ್ತಾರ್ (ಅ)ರಾಜಕೀಯ

Source: S O News service | By Staff Correspondent | Published on 27th June 2016, 10:43 PM | Special Report | Islam | Don't Miss |

by M.R.Manvi
ಮೋಸ, ವಂಚನೆ, ಕಪಟ, ದಗಲಬಾಜಿ, ಅರಾಜಕತೆ ಗೆ ಮತ್ತೊಂದು ಅರ್ಥವೇ ರಾಜಕೀಯ. ಇದು ಎಲ್ಲಿ ಬೇಕಾದರೂ ಸುಲಭವಾಗಿ ನುಸುಳುವಂತಹದ್ದು. ಮನೆ, ಕಚೇರಿ, ಠಾಣೆ, ಮಂದಿರ, ಮಸೀದಿ, ಚರ್ಚು, ಗುರುದ್ವಾರ ಇದಕ್ಕೆ ಇಂತಹದ್ದೇ ಎನ್ನುವ ಒಂದು ನಿದಿರ್ಷ್ಠ ಸ್ಥಳವಿಲ್ಲ. ಎಲ್ಲಿಬೇಕಲ್ಲಿ ಲೀಲಾಜಾಲವಾಗಿ ತನ್ನ ವರ್ಚಸ್ಸನ್ನು ಕುದುರಿಸಿಕೊಳ್ಳುವ ಶಕ್ತಿ ಈ ರಾಜಕೀಯಕ್ಕೆ ಇದೆ. ಇದು ತನ್ನ ಬೇಳೆ ಬೇಯಿಸಿಕೊಳ್ಳಲು ಏನುಬೇಕಾದರೂ ಮಾಡಬಲ್ಲದು. ಕತ್ತೆಯ ಕಾಲು ಹಿಡಿದರೂ ಪರವಾಗಿಲ್ಲ. ಸಮಯ ಬಂದಾಗ ಅದು ತನ್ನೆಲ್ಲ ಮೇರೆಗಳನ್ನು ಮೀರಿ ಬದುಕಿಕೊಳ್ಳುವ ಕರಾಮತ್ತು ಹೊಂದಿದೆ. 
ಸಾಮಾನ್ಯವಾಗಿ ರಾಜಕೀಯ ಮಂದಿ ತಮ್ಮ ಕೈಯಿಂದ ಒಂದು ಚಿಕ್ಕ ಅವಕಾಶವನ್ನು ಹೋಗಲು ಬಿಡಲ್ಲ. ಮದುವೆ ಸಮಾರಂಭವಾಗಲಿ, ಹುಟ್ಟು, ಸಾವು, ಯಾವುದೇ ಸಂದರ್ಭವಿರಲಿ ತಮ್ಮ ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ಅದನ್ನು ಬಳಸಿಕೊಳ್ಳುವುದುಂಟು. ಇದಕ್ಕಾಗಿ ಜಾತಿ, ಧರ್ಮ, ಪಕ್ಷ, ಭಾಷೆ ಇದಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಿಕ್ಕ ಸಂದರ್ಭವನ್ನು ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಇದನ್ನು ನಾವು ದಿನ ದಿನ್ಯತ ವಿದ್ಯಾಮಾನಗಳಲ್ಲಿ ಕಾಣಬಹುದು ಕೂಡ. 
ಸಂದರ್ಭ ಮತ್ತು ಅವಕಾಶಕ್ಕಾಗಿ ಕಾಯುತ್ತಿರುವ ರಾಜಕೀಯ ಪಕ್ಷದ ಧುರಿಣರು  ರಮಝಾನ್ ಮಾಸದ ಸಂದರ್ಭದಲ್ಲಿ ಇಫ್ತಾರ್ ಕೂಟಗಳನ್ನು ಏರ್ಪಡಿಸುವುದರ ಮೂಲಕ ನಾವು ನಿಮ್ಮ ಜತೆಗಿದ್ದೇವೆ ಎಂದು ಮುಸ್ಲಿಮ್ ಸಮುದಾಯವನ್ನು ನಂಬಿಸುವ, ಅವರನ್ನು ಮೂರ್ಖರನ್ನಾಗಿಸುವ ಕಾರ್ಯತಂತ್ರವನ್ನು ರೂಪಿಸಿಕೊಂಡಿದ್ದು. 
ಇಂದು ದೇಶದಾದ್ಯಂತ ಭರ್ಜರಿಯಾಗಿ ಇಫ್ತಾರ್ ಕೂಟಗಳು ಆಯೋಜನೆಗೊಳ್ಳುತ್ತಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆ ಕಟ್ಟಾ ಮುಸ್ಲಿಮ್ ವಿರೋಧಿಯಾಗಿರುವ ಸಂಘಪರಿವಾರದ ರಾಜಕೀಯ ಪಕ್ಷ ಬಿಜೆಪಿ ಮತ್ತು ಸ್ವತಃ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕೂಡ ಹಿಂದೆ ಬಿದ್ದಿಲ್ಲ ಎನ್ನಬಹುದು. 
ರಮಝಾನ್ ಮಾಸವು ವಿಶ್ವದ ಮುಸ್ಲಿಮರಿಗಾಗಿ ಪವಿತ್ರವೂ ಅತ್ಯಂತ ಮಹತ್ವವುಳ್ಳದ್ದು ಎನ್ನುವುದರಲ್ಲಿ ಎರಡುಮಾತಿಲ್ಲ. ರಮಝಾನ ಮಾಸಪೂರ್ತಿ ದಾನಧರ್ಮ, ಪುಣ್ಯಕಾರ್ಯಗಳಲ್ಲಿ ನಿರತ ಅದೆಷ್ಟೋ ಮಂದಿ ತಮ್ಮಲ್ಲಿರುವ ಸರ್ವಸ್ವವನ್ನು ದೇವನ ಸನ್ನಿಧಿಗೆ ಅರ್ಪಿಸಲು ಸಿದ್ದರಿರುತ್ತಾರೆ.  ದಿನಪೂರ್ತಿ ಉಪವಾಸ ಆಚರಿಸಿ ಸೂರ್ಯಸ್ಥಗೊಳ್ಳುತ್ತಲೆ ಉಪವಾಸ ಬಿಡುವ ಕ್ರಮಕ್ಕೆ ಇಸ್ಲಾಮಿ ಪರಿಭಾಷೆಯಲ್ಲಿ ‘ಇಫ್ತಾರ್’ ಎನ್ನಲಾಗುತ್ತದೆ, ಅಲ್ಲಲ್ಲಿ ಕೆಲ ಮುಸ್ಲಿಮ್ ಸಂಘಟನೆಗಳನ್ನು ಮಸೀದಿ ಜಮಾ‌ಅತ್ ಗಳು ಇದನ್ನು ಹಿಂದು ಮುಸ್ಲಿಂ ರ ಸೌಹಾರ್ಧದ ಸಂಕೇತವನ್ನಾಗಿ ಬಳಸಿಕೊಂಡು ಎಲ್ಲ ಧರ್ಮ, ಜಾತಿ, ಸಮುದಾಯವನ್ನು ಒಂದು ವೇದಿಕೆಗೆ ತರವ ಪ್ರಯತ್ನವಾಗಿ ‘ಇಫ್ತಾರ್ ಸೌಹಾರ್ಧ ಕೂಟ’ ವನ್ನು ಆಯೋಜಿಸಿ ಉಪವಾಸದ ಮಹತ್ವ, ಅದು ಹೇಗೆ ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುತ್ತದೆ, ಉಪವಾಸದಿಂದಾಗಿ ಯಾವೆಲ್ಲ ಮಾನವೀಯ ಗುಣಗಳು ಮೈಗೂಡಿಸಿಕೊಳ್ಳಬಹುದು ಎಂಬುದರ ಕುರಿತಂತೆ ಉಪನ್ಯಾಸ ನೀಡಲಾಗುತ್ತದೆ. ಹಾಗೆಯೆ ಎಲ್ಲ ಧರ್ಮದವರನ್ನು ಒಟ್ಟು ಸೇರಿಸಿ ಮನುಜಕುಲ ಒಂದೇ ಎಂಬ ಸಂದೇಶವನ್ನು ನೀಡಲಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ಪರಸ್ಪರ ಶಾಂತಿ, ಸೌಹಾರ್ಧ, ಸಾಮರಸ್ಯ, ಬ್ರಾತೃತ್ವ ಉಂಟಾಗಿ ಸಮಾಜದ ಅಭಿವೃದ್ಧಿಯಾಗುವ ನಿರೀಕ್ಷೆಯೊಂದಿಗೆ ಆಯೋಜಿಸಲಾಗುತ್ತದೆ. 
ಮುಸ್ಲಿಮರ ಮತವನ್ನು ನಗದೀಕರಣಗೊಳಿಸಿಕೊಳ್ಳುವಲ್ಲಿ ಒಂದಿಂಚು ಅವಕಾಶಗಳನ್ನು ಬಿಡದ ರಾಜಕೀಯ ಪಕ್ಷದ ನೇತಾರರು ರಮಝಾನ್ ತಿಂಗಳನ್ನು ಅತ್ಯಂತ ಚಾಣಾಕ್ಷತನದಿಂದ ಉಪಯೋಗಿಸಿಕೊಳ್ಳುತ್ತಾರೆ. ಕಾಂಗ್ರೇಸ್, ಬಿಜೆಪಿಗಳಂತಹ ರಾಷ್ಟ್ರೀಯ ಪಕ್ಷಗಳ ಇಫ್ತಾರ್ ರಾಜಕಾರಣ ಒಂದೆಡೆಯಾದರೆ ಪ್ರಾದೇಶಿಕ ಹಾಗೂ ಪುಡಿ ರಾಜಕಾರಣಿಗಳು ಇಫ್ತಾರ್ ರಾಜಕಾರಣ ಮತ್ತೊಂದೆಡೆ. ಇಫ್ತಾರ್ ಕೂಟದ ಹೆಸರಲ್ಲಿ ರಾಜಕೀಯ ಪಕ್ಷದ ನೇತಾರರು ನಡೆಸುವ ಇಫ್ತಾರ್ ಕೂಟಗಳು ಭರ್ಜರಿ ಮಾಂಸದೂಟದ ಔತಣಕೂಟಗಳಾಗಿ ಮಾರ್ಪಟ್ಟಿರುತ್ತವೆ. ಇದರಲ್ಲಿ ಬಡಪಾಯಿ ಉಪವಾಸಿಗನ ಶೂನ್ಯ ಎಂದೇ ಹೇಳಬಹುದು. ಕಂಠಪೂರ್ತಿ ಕುಡಿದು ಭೋರಿ ಭೋಜನ ಮಾಡಲು ಬರುವವರೇ ಅಧಿಕ. ತಿಂಗಳಪೂರ್ತಿ ಕೆಲ ಮಂದಿ ಇಂತಹ ಬಿಟ್ಟಿ ಊಟಕ್ಕಾಗಿಯೆ ಕಾಯ್ದು ಕುಳಿತಿರುತ್ತಾರೆ. ಕಾರ್ಯಕರ್ತರ ದಂಡು, ನೇತಾರರ ಅಭಿಮಾನಿಗಳ ಬಳಗ, ಮರುದಿನ ಪತ್ರಿಕೆಗಳಲ್ಲಿ ‘ಟೋಪಿಹಾಕಿಕೊಂಡು ರಾರಾಜಿಸುತ್ತಿರುವ ನೇತಾರರ ಫೋಟೊ. ಇಷ್ಟಾದರೆ ಸಾಕು ಇಫ್ತಾರ್ ಕೂಟ ಮುಗಿದಂತೆಯೆ. ಕೆಲವು ನೇತಾರರ ಮೊಸಳೆ ಕಣ್ಣೀರು, ಮುಸ್ಲಿಮ್ ಓಲೈಕೆಯ ಭಾಷಣಗಳು ಹೀಗೆ ಈ ಇಫ್ತಾರ್ ಕೂಟ ಎನ್ನುವುದು ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡು ರಾಜಕಾರಣಿಗಳ ಮತ ಓಲೈಕೆಯ ದಾಳವಾಗಿ ಪರಿವರ್ತನೆಯಾಗುತ್ತಿದೆ. 
ಮುಸ್ಲಿಮರ ತಲೆಯುಡುಗೆ ‘ಟೋಪಿ’ ದ್ವಂದಾರ್ಥದಲ್ಲಿ ಬಳಕೆಯಾಗುತ್ತಿದ್ದು ಮುಸ್ಲಿಮರನ್ನು ಓಲೈಸಲು ಇವರು ತಲೆಗೆ ಟೋಪಿ ಹಾಕಿಕೊಳ್ಳುತ್ತಾರೆ. ಆದರೆ ನಿಜಾರ್ಥದಲ್ಲಿ ಮುಸ್ಲಿಮರನ್ನು ಮರಳು ಮಾಡಿ ಅವರಿಗೆ ಟೋಪಿಹಾಕುತ್ತಿರುವುರುದು ಮಾತ್ರ ದುರಂತವಾಗಿದೆ. 
ಹಲಾಲ್ ಗಳಿಕೆಯಿಂದ ಗಳಿಸಿದ ಹಣದಿಂದ ಅಲ್ಲಾಹನನ್ನು ಸಂತೃಪ್ತಗೊಳಿಸಲು ದಿನಪೂರ್ತಿ ಉಪವಾಸ ಆಚರಿಸಿ ಯಾರೋ ರಾಜಕೀಯ ನೇತಾರರ ಹರಾಮ್ ಹಣದಿಂದ ಆಯೋಜಿಸಿದ್ದ ಇಫ್ತಾರ್ ಪಾರ್ಟಿಗಳಲ್ಲಿ ಭಾಗವಹಿಸಿ ಉಪವಾಸ ತ್ಯಜಿಸಿ(ಇಫ್ತಾರ್)ದರೆ ಅಲ್ಲಾಹನ ಸಂತೃಪ್ತಿಯಾದರೂ ಹೇಗೆ ಸಿಗಬಹುದು. ಆದ್ದರಿಂದ ಮುಸ್ಲಿಮ್ ಸಮುದಾಯ ರಾಜಕಾರಣಿಗಳ ಇಫ್ತಾರ್ ರಾಜಕೀಯಕ್ಕೆ ಬಲೆ ಬೀಳದೆ ಇಫ್ತಾರ್ ನ ನೈಜ ಉದ್ದೇಶವನ್ನು ಅವರಿಗೆ ತಿಳಿ ಹೇಳಬೇಕಾದುದು ಮುಸ್ಲಿಮ್ ಸಮುದಾಯದ ಕರ್ತವ್ಯವಾಗಿದೆ.                                                                                                                    

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ  ಮತ್ತು ಸಹಾನುಭೂತಿ

ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ...

ಭಟ್ಕಳ: ಕುರಾನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

ಭಟ್ಕಳ: ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...