ಪೊಲೀಸರು ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು: ನ್ಯಾ. ವಿಜಯ ಕುಮಾರ್

Source: SO News | By Laxmi Tanaya | Published on 1st September 2024, 9:45 PM | Coastal News | Don't Miss |

ಕಾರವಾರ : ಪೊಲೀಸರು ತಮ್ಮ ಹತ್ತಿರ ಬರುವ ಮಕ್ಕಳ ಸಮಸ್ಯೆಗಳನ್ನು ವಿವರವಾಗಿ ಆಲಿಸಿ, ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಬೇಕು. ಮಕ್ಕಳ ರಕ್ಷಣೆಯಲ್ಲಿ  ಪೊಲೀಸ್ ಇಲಾಖೆಯ  ಪಾತ್ರ ಬಹಳ ಪ್ರಾಮುಖ್ಯವಾಗಿದ್ದು, ಪೊಲೀಸರು ಮಕ್ಕಳ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ  ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶ ಡಿ.ಎಸ್ ವಿಜಯಕುಮಾರ  ಹೇಳಿದರು.

ಜಿಲ್ಲಾ ಪೊಲೀಸ್ ಅಧಿಕ್ಷಕರ ಸಭಾಭವನದಲ್ಲಿ  ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಮಕ್ಕಳ ಪೊಲೀಸ್‌ ಘಟಕ, ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮತ್ತು ವಿಶೇಷ  ಬಾಲಾಪರಾಧಿ ಪೊಲೀಸ್ ಘಟಕಕ್ಕೆ ಸಂವೇಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಪ್ರತಿಯೊಬ್ಬರೂ ಎಲ್ಲ ಮಕ್ಕಳನ್ನು ತಮ್ಮ ಸ್ವಂತ  ಮಕ್ಕಳಂತೆ ಕಾಳಜಿ ಮತ್ತು  ರಕ್ಷಣೆ ವಹಿಸಬೇಕು. ಮಕ್ಕಳ ಮೇಲೆ ಶಾಲೆಗಳಲ್ಲಿ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳ  ನಡವಳಿಕೆ ಮತ್ತು ಅವರ ವರ್ತನೆಯ ಬಗ್ಗೆ ಪೊಲೀಸ್ ಸಿಬ್ಬಂದಿಯವರು ಗಮನಹರಿಸಬೇಕು ಎಂದರು.

ಶಿಶು ಮಂದಿರ, ಬಾಲ ಮಂದಿರಗಳಲ್ಲಿ ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಪ್ರಕರಣಗಳು  ಕಂಡು ಬರುತ್ತಿದ್ದು,  ಅಲ್ಲಿಯೂ ಕೂಡ ಮಕ್ಕಳ‌ ರಕ್ಷಣೆಗೆ ಮಕ್ಕಳ ರಕ್ಷಣಾ ಘಟಕದಿಂದ ಸೂಕ್ತ ಮುನ್ನೆಚ್ಚರಿಕೆ ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಗಣೇಶ ಪಡಿಯಾರ. ಯು. ಮಾತನಾಡಿ, ಪೊಲೀಸ್ ಅಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಗೆ ಸಂಬಂಧಿಸಿದಂತೆ ಬಾಲಾಪರಾಧಿ ಕಾಯ್ದೆಯ ಅವಲೋಕನ ಬಗ್ಗೆ ಉಪನ್ಯಾಸ ನೀಡಿ, ಮಕ್ಕಳನ್ನು  ಮಕ್ಕಳಂತೆ ನೋಡುವ ಅಲೋಚನೆ ನಮ್ಮಲ್ಲಿ ಬೆಳಸಿಕೊಳ್ಳಬೇಕು ಮಕ್ಕಳ ಆರೈಕೆ , ರಕ್ಷಣೆ ನಮ್ಮಲ್ಲರ ಜವಾಬ್ದಾರಿ ಎಂದರು.

ಬಾಲಾಪರಾಧಿ ಮಕ್ಕಳಿಗೆ ಆರೈಕೆಯ ಜೊತೆಗೆ  ಅವರಿಗೆ ಮೂಲಸೌಕರ್ಯ ಮತ್ತು  ಪುನರ್ವಸತಿ ಸೌಕರ್ಯ , ಶಿಕ್ಷಣ , ವೃತಿ ಪರ ತರಬೇತಿ, ಸಮಲೋಚನೆಗೆ ಅವಕಾಶ  ನೀಡಿ, ಮಕ್ಕಳ ಹಕ್ಕುಗಳ ಮೂಲ ಭೂತ ಸೌಕರ್ಯಗಳನ್ನು  ಕಲ್ಪಿಸಬೇಕು. ಅಪರಾಧಕ್ಕೆ ಒಳಗಾದ ಮಗುವಿಗೆ  ಸಮಲೋಚನೆ ನಡೆಸುವ ಸಂದರ್ಭದಲ್ಲಿ , ಅವರಿಗೆ ಪ್ರತಿನಿಧಿಸುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ   ಧನುರಾಜ ಎಸ್,  ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಬಾಲ ಕಾರ್ಮಿಕ ಕಾಯ್ದೆಗಳು ಅಡಿಯಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕಿ ಶುಭಾ ಗಾಂವಕರ (POCSO) ಪೋಕ್ಸೋ ಕಾಯ್ದೆಯ ನಿಬಂಧನೆಗಳು ಮತ್ತು ಕಾರ್ಯ ವಿಧಾನ ಹಾಗೂ ಅವುಗಳ ಅನುಷ್ಠಾನದಲ್ಲಿ ಪೋಲಿಸ್ ಅಧಿಕಾರಿಗಳ ಪಾತ್ರ ದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು  ಉಪಸ್ಥಿತರಿದ್ದರು.y

Read These Next

ಭಟ್ಕಳ ಬಂದ್: ಮುಸ್ಲಿಂ ಸಮುದಾಯದ ವ್ಯಾಪಾರ-ವ್ಯವಹಾರ ಸ್ಥಬ್ಧ- ಮುರುಢೇಶ್ವರದಲ್ಲೂ ಬಂದ್ ಗೆ ಬೆಂಬಲ

ಭಟ್ಕಳ: ಪ್ರವಾದಿ ಮುಹಮ್ಮದ್ (ಸ) ವಿರುದ್ದ ನಿಂದನಾತ್ಮಕ ಹೇಳಿಕೆ ನೀಡುತ್ತಿರುವ ಉತ್ತರ ಪ್ರದೇಶದ ಯತಿ ನರಸಿಂಗಾನಂದ ಸ್ವಾಮಿಜಿ ...

ಭಟ್ಕಳ: ಪ್ರವಾದಿ ನಿಂದಕ ಯತಿ ನರಸಿಂಗನಂದಾ ಸ್ವಾಮಿಯನ್ನು ದೇಶದ್ರೋಹ ಪ್ರಕರಣದಡಿ ಬಂಧಿಸುವಂತೆ ತಂಝೀಮ್ ಆಗ್ರಹ

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅತ್ಯಂತ ಅಸಭ್ಯವಾಗಿ ನಿಂದಿಸಿದ ಮನುಷ್ಯ ವಿರೋಧಿ ಯತಿ ನರಸಿಂಹನಂದಾ ಸರಸ್ವತಿ ...

ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂಧಿ

ಭಟ್ಕಳ: ರಜೆ ದಿನಗಳನ್ನು ಕಳೆಯಲುದು ಬೆಂಗಳೂರಿನಿಂದ ಮರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ 19 ವರ್ಷದ ಪುನೀತ್ ಎಂಬ ಯುವಕ ಸಮುದ್ರದಲ್ಲಿ ...