ಮನಸೂರೆಗೊಂಡ ಸುಗ್ಗಿ ಹುಗ್ಗಿ ಕಾರ್ಯಕ್ರಮ

Source: SO News | By Laxmi Tanaya | Published on 13th January 2021, 9:14 PM | State News | Don't Miss |

ಹಾಸನ  : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಕಲೇಶಪುರ ತಾಲ್ಲೂಕಿನ ವನಗೂರು ಕೂಡುರಸ್ತೆಯಲ್ಲಿ ಏರ್ಪಡಿಸಿದ ಸುಗ್ಗಿ ಹುಗ್ಗಿ ಕಾರ್ಯಕ್ರಮ ಜನ ಮನಸೂರೆಗೊಂಡಿತು. 

     ಸಂಕ್ರಾಂತಿ ಹಬ್ಬದ ಸಡಗರದ ಜೊತೆ ಜೊತೆಗೆ ನಡೆದ ಈ  ಸುಗ್ಗಿ ಹುಗ್ಗಿ ಸಾಂಸ್ಕೃತಿಕ  ಜಾನಪದ ಸಂಭ್ರಮ ಸುತ್ತಮುತ್ತಲ ಹಲವು ಊರುಗಳ ಜನರನ್ನು ಆಕರ್ಷಿಸಿತು ಡೊಳ್ಳು ಕುಣಿತ, ಪಟಕುಣಿತ, ಕೋಲಾಟ, ನಗಾರಿ, ಚಿಟ್ಟಿಮೇಳ, ಸೋಮನ ಕುಣಿತ, ಕಿಲು ಕುದುರೆ, ಮಲೆನಾಡು ಸುಗ್ಗಿ ಕುಣಿತ, ಕಂಸಾಳೆ, ಪೂಜಾ ಕುಣಿತ, ನಾಸಿಕ್‍ಡೋಲು, ಚಿಲಿಪಿಲಿ ಗೊಂಬೆ ವೀರಗಾಸೆ ಸೇರಿದಂತೆ ಹತ್ತಾರು ಕಲಾ ತಂಡಗಳು ಗ್ರಾಮದ ಸುತ್ತ ಮೆರವಣಿಗೆ ಸುತ್ತಿ ಹಬ್ಬದ ವಾತಾವರಣ ಸೃಷ್ಟಿ ಮಾಡಿದವು.

     ಮಲೆನಾಡು ಸುಗ್ಗಿ ವಿಶೇಷ ಆಕರ್ಷಣೆಯಾಗಿತ್ತು ವನಗೂರಿನ ಕುಮಾರಲಿಂಗೇಶ್ವರ ಸಾಂಸ್ಕೃತಿಕ ಸಮಿತಿಯ ಸಹಕಾರದಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಗ್ಗಿ ಹುಗ್ಗಿ ಕಾರ್ಯಕ್ರಮದ ಮೆರವಣಿಗೆಯನ್ನು ತಾಲ್ಲೂಕು ಪಂಚಾಯತಿ ಅಧ್ಯಕ್ಷರಾದ ಶ್ವೇತ ಪ್ರಸನ್ನ, ಮಾಜಿ ಶಾಸಕರಾದ ಹೆಚ್.ಎಂ ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆನಂದ್ ಮತ್ತಿತರರು ಉದ್ಘಾಟಿಸಿದರು.

         ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ಉದ್ಯಮಿ ಜಾಗಟೆ ಶಿವಕುಮಾರ್ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಸಂಸ್ಕøತಿ ಮರೆಯಾಗುತ್ತಿದೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಡೆಸುತ್ತಿರುವ ಸುಗ್ಗಿ-ಹುಗ್ಗಿಯಂತಹ ಅನೇಕ ಕಾರ್ಯಕ್ರಮಗಳನ್ನು ಉಳಿಸಿ ಬೆಳೆಸಲು ನೆರವಾಗುತ್ತದೆ ಎಂದರು.

     ಗ್ರಾಮೀಣ ಪ್ರದೇಶದ ಯುವಜನತೆ ಎಲ್ಲಾ ಸವಾಲುಗಳನ್ನು ಎದುರಿಸಿಕೊಂಡು ಅಭಿವೃದ್ಧಿ ಸಾದಿಸುತ್ತಿರುವ ಜೊತೆಗೆ ಅಕ್ಕ ಪಕ್ಕ ಊರಿನ ಪ್ರಗತಿಗೂ ಶ್ರಮಿಸಬೇಕು ಎಂದರು.

     ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ಪ್ರಸನ್ನ ಅವರು ಮಾತನಾಡಿ ಮಲೆನಾಡು ಜನರು ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ ಅವರ ಜೀವನ ಮಟ್ಟ ಸುಧಾರಣೆಗೆ ಹಲವು ಪ್ರಯತ್ನಗಳು ಅಗತ್ಯ ಇದೆ ಎಂದರು.

     ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಕಲೆ ಹಾಗೂ ಕ್ರೀಡೆಗಳು ಸಾಂಸ್ಕøತಿಕ ಒಗ್ಗೂಡುವಿಕೆಗೆ ಸಹಕಾರಿಯಾಗಿದ್ದು, ನಿರಂತರವಾಗಿ ಇಂತಹ ಚಟುವಟಿಕೆಗಳನ್ನು ನಡೆಸುತ್ತಿರುವ ಯುವ ಸಂಘಗಳು ಅಭಿನಂದನಾರ್ಹ ಎಂದರು. 

    ಕುಮಾರಲಿಂಗೇಶ್ವರ, ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿ ಹಾಗೂ ಕುಮಾರಲೀಂಗೆಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಮಾಗೇರಿ ರಾಜು ಗೌಡ ಅವರು ಮಾತನಾಡಿ ಯುವ ಶಕ್ತಿಯ ಪ್ರಾಮುಖ್ಯತೆ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು.

    ಸಕಲೇಶಪುರ ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜೈಮಾರುತಿ ಅವರು ಸಹ ಜನಪದ ಸಂಸ್ಕøತಿ ಹಾಗೂ ಕೃಷಿಕ ನಡುವಿನ ಸಂಬಂಧಗಳ ಬಗ್ಗೆ ಬಣ್ಣಿಸಿದರು.

       ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ|| ಸುದರ್ಶನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

    ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ವನಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆನಂದ್, ಯಶಳೂರು ಆರಕ್ಷಕ ಉಪ ನಿರೀಕ್ಷಕರು, ಉದ್ಯಮಿಗಳಾದ ಎಂ.ಎಸ್ ಉಮೇಶ್, ಸಮಾಜ ಸೇವಕರಾದ ಜಾಗಟೆ ಪ್ರವೀಣ್, ಎಂ.ಎಸ್ ಮನ್ಮಥ ಮಯನೂರು ಕಲಾವಿದ ಬಿ.ಟಿ ಮಾನವ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಅಂತರ ಜಿಲ್ಲಾ ಕಬಡ್ಡಿ ಮತ್ತು ಥ್ರೋಬಾಲ್ ಪಂದ್ಯಾವಳಿಗಳು ನಡೆಸಲಾಯಿತು. 

     ಇದೇ ವೇಳೆ ದೇವಾನಂದ ವರಪ್ರಸಾದ್ ಮತ್ತು ತಂಡ ಬನುಮ ಗುರುದತ್ತ್ ಮತ್ತು ತಂಡ, ಕುಮಾರ ಕಟ್ಟೆ ಬೆಳಗುಲಿ ಮತ್ತು ತಂಡದವರಿಗೆ ತತ್ವಪದ ಸುಗಮ ಸಂಗೀತ, ಜಾನಪದ ಸಂಗೀತ, ಹಾಗೂ ವೈಷ್ಣವಿ ಜಯರಾಂ ಮತ್ತು ತಂಡದವರಿಂದ ನೃತ್ಯ ರೂಪಕ ಗಮನ ಸೆಳೆದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...