ಹೆಬಳೆ ವಿಪತ್ತು ನಿರ್ವಹಣಾ ಘಟಕ ಹಾಗೂ ಶಾಲಾ ಶಿಕ್ಷಕರ ಸಹಾಯದೊಂದಿಗೆ ಗಿಡ ನಾಟಿ ಕಾರ್ಯಕ್ರಮ

Source: so news | By MV Bhatkal | Published on 17th June 2021, 8:32 PM | Coastal News | Don't Miss |

ಭಟ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ತಮ್ಮ ಜೀವದ ಹಂಗು ತೊರೆದು ಕೋವಿಡ್ ನಿರ್ಮೂಲನ ಕಾರ್ಯದಲ್ಲಿ ಬಹುದೊಡ್ಡ ಪಾತ್ರವನ್ನು ನಿಭಾಯಿಸಿದೆ. ಸಮಾಜಕ್ಕೆ ಎಲ್ಲರಿಗಿಂತ ಹೆಚ್ಚು ನಿಮ್ಮ ಅಗತ್ಯವಿದೆ ಎಂದು ಭಟ್ಕಳ ಕ್ಷೇತ್ರದ ಯೋಜನಾಧಿಕಾರಿ ಚಂದ್ರಹಾಸ.ಬಿ ಹೇಳಿದರು.
ಅವರು ತಾಲೂಕಿನ ಗಾಂಧಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಹೆಬಳೆ ವಲಯದ ವಿಪತ್ತು ನಿರ್ವಹಣಾ ತಂಡ, ಶಾಲಾ ಶಿಕ್ಷಕರ ಸಹಾಯದೊಂದಿಗೆ ಗಿಡ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿದ ಆಮ್ಲಜನಕ ಮತ್ತು ಅಂಬುಲೆನ್ಸ್ ಸೇವೆ ಕುರಿತು ಮಾಹಿತಿ ನೀಡಿದರು.
ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಭವಾನಿಶಂಕರ ನಾಯ್ಕ ಮಾತನಾಡಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಗಿಡ ನೆಡುವುದು ಮಾತ್ರವಲ್ಲದೆ ನೆಟ್ಟ ಗಿಡಗಳ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಶಾಲೆಯ ಮುಖ್ಯಾಧ್ಯಾಪಕರಾದ ವೆಂಕಟೇಶ ನಾಯ್ಕ ಮಾತನಾಡಿದರು. ಶಾಲಾ ಆವರಣದಲ್ಲಿ ಜಂಬೆ, ನೇರಳೆ, ನುಗ್ಗೆ ಸೇರಿ ಗಿಡಗಳನ್ನು ನೆಟ್ಟು ಉಳಿದ ಗಿಡಗಳನ್ನು ಹತ್ತಿರದಲ್ಲಿರುವ ಸ್ಮಶಾನದಲ್ಲಿ ನೆಡಲಾಯಿತು.
ಈ ಸಂದರ್ಭದಲ್ಲಿ ಹೆಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಪ್ಪು ಮಾದೇವ ಗೊಂಡ, ಸದಸ್ಯರಾದ ಪಾರ್ವತಿ ನಾಯ್ಕ, ಹೆಬಳೆ ವಲಯದ ಮೇಲ್ವಿಚಾರಕರಾದ ಜೈರಾಮ್ ದೇವಾಡಿಗ, ಶಾಲೆಯ ಸಹಶಿಕ್ಷಕಿ ಹೇಮಾವತಿ, ಹಳೇವಿದ್ಯಾರ್ಥಿಯಾದ ಮನೋಹರ ಮತ್ತು ಸ್ವಯಂ ಸೇವಕರಾದ ರಮೇಶ ನಾಯ್ಕ, ಮಾರುತಿ ನಾಯ್ಕ, ಸುಬ್ರಮಣ್ಯ ನಾಯ್ಕ, ಲಕ್ಷ್ಮಣ ಕರ್ಕಿ ಮನೆ, ನಾಗೇಶ ನಾಯ್ಕ, ಭಾಸ್ಕರ ಮೊಗೇರ, ಮಂಜು ನಾಯ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೆರ್ತಾರ ವಿಭಾಗದ ಸೇವಾಪ್ರತಿನಿಧಿ ಮುಕ್ತಾ ಶೆಟ್ಟಿ ಸ್ವಾಗತಿಸಿದರೆ ಸಂಯೋಜಕಿ ಪುಷ್ಪಾ ನಾಯ್ಕ ವರದಿ ವಾಚಿಸಿ ವಂದಿಸಿದರು

Read These Next

ಕಾರವಾರ: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಧನಂಜಯ ಹೆಗಡೆ ಅವರಿಗೆ ಬೀಳ್ಕೊಡುಗೆ

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಧನಂಜಯ ಹೆಗಡೆ ಅವರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸನ್ಮಾನಿಸಿ ಬೀಳ್ಕೊಡುಗೆ ...

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಶೀಘ್ರವೇ ಪರಿಹಾರ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

ಮಂಡ್ಯ : ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ಬಂದಾಗ ಅವರ ಸಮಸ್ಯೆಗಳಿಗೆ ...