ಬಂಟ್ವಾಳ ಸ್ಟುಡಿಯೋ ನುಗ್ಗಿ ಹಲ್ಲೆ. ಪೊಲೀಸರಿಂದ ಮೂವರ ಬಂಧನ. ಇನ್ನೋರ್ವನಿಗಾಗಿ ತಲಾಷ್.

Source: SO News | By Laxmi Tanaya | Published on 29th October 2020, 9:57 AM | Coastal News |

ಬಂಟ್ವಾಳ : ಸ್ಡುಡಿಯೋಕ್ಕೆ ಬಂದ ನಾಲ್ವರು ಮಾಲೀಕನ ಮೇಲೆ ತೀವೃ ಹಲ್ಲೆ ನಡರಸಿದ ಘಟನೆ  ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಫರಂಗಿಪೇಟೆಯಲ್ಲಿ ನಡೆದಿದೆ.

  ತೃಷಾ ಪೋಟೊ ಸ್ಟುಡಿಯೋದ ದಿನೇಶ್ ತೀವೃ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಲ್ವರು  ಯುವಕರು ಪೋಟೊ ತೆಗೆಸುವಂತೆ ಬಂದು ,ಇತ್ತೀಚಗೆ ಕುಂಪನಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿನೇಶ್ ರವರು ಹೆಣ್ಣು ಮಗುವಿನ ಕಡೆಯವರಿಗೆ ಬೆಂಬಲ ನೀಡಿದ್ದ ದ್ವೇಷದಿಂದ ಹಲ್ಲೆಗೆ ಮುಂದಾಗಿದ್ದರು. 

ಕೊಲ್ಲುವ ಉದ್ದೇಶದಿಂದ  ಕತ್ತಿಯಿಂದ ತಲೆಗೆ,ಬಲ ಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಹಲ್ಲೆ ನಡೆಸಿ ತೀವ್ರ ಗಾಯವಾಗಿದೆ. ಆ ವೇಳೆಯಲ್ಲಿ ಅಲ್ಲಿದ್ದ ಶೇಖರ ಪೂಜಾರಿ ಎಂಬುವವರು  ಹಲ್ಲೆಯಾಗುವುದನ್ನು ತಪ್ಪಿಸಲು ಅಲ್ಲೇ ಇದ್ದ ಚೇರ್ ನಿಂದ ಜೋರಾಗಿ ಇಬ್ಬರು ಆರೋಪಿಗಳಿಗೆ ಹೊಡೆದಿದ್ದು ಅವರ ಕೈಗೆ ಗಾಯವಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
  ಅಮ್ಮೆಮ್ಮಾರು ನಿವಾಸಿ ಮಹಮ್ಮದ್  ಅರ್ಷದ್(19), ಅಬ್ದುಲ್ ರೆಹಮಾನ್(22) ಮತ್ತು ಮಹಮ್ಮದ್ ಸೈಪುದ್ದೀನ್(22) ಎಂಬುವವರನ್ನ ಬಂಧಿಸಲಾಗಿದೆ.

ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರಸನ್ನ  ಹಾಗೂ ಸಿಬ್ಬಂದಿರವರು ದಸ್ತಗಿರಿ ಮಾಡಿದ್ದು, ಮತ್ತೊಬ್ಬ ಆರೋಪಿ ಸವಾದ್  ಬಂಧನಕ್ಕಾಗಿ ತನಿಖೆ ಮುಂದುವರೆದಿದೆ.

Read These Next

ರೂಪಾಯಿ 50 ಸಾವಿರ ಮೌಲ್ಯದ ವಿಮೆ. ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ನೋಂದಣಿಗೆ ನವೆಂಬರ್ 29 ಕೊನೆಯ ದಿನ.

ಕಾರವಾರ : ಉಡುಪಿಯ‌ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ ಜಿ. ಶಂಕರ್ ರವರು ಮಣಿಪಾಲ ಸಿಗ್ನಾ ಹೆಲ್ತ್ ಗ್ರೂಪ್ ...