ವಾರ್ತಾಸ್ಪಂದನ ನೇರ ಫೋನ್ ಇನ್ ಕಾರ್ಯಕ್ರಮ

Source: S O News Service | By Office Staff | Published on 18th January 2020, 3:26 PM | Coastal News |

ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕುಂದು-ಕೊರತೆಗಳನ್ನು ಆಲಿಸುವ ನಿಟ್ಟಿನಲ್ಲಿ ವಾರ್ತಾ ಸ್ಪಂದನ ನೇರ ಫೋನ್ ಇನ್ ಹಾಗೂ ಮಾಧ್ಯಮ ಸಂವಾದ ಕಾರ್ಯಕ್ರಮವನ್ನ ಜನವರಿ 22 ರಂದು ಆಯೋಜಿಸಲಾಗಿದೆ.
ವಾರ್ತಾ ಸ್ಪಂದನ ನೇರ ಫೋನ್ ಇನ್ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ಫೋಷಣಾ ಅಭಿಯಾನ, ಮಾತೃವಂದನ, ಮಾತೃಪೂರ್ಣ, ಮಕ್ಕಳ ರಕ್ಷಣಾ ಘಟಕ, ಬಾಲಮಂದಿರ, ಸ್ವೀಕಾರ, ಸಾಂತ್ವಾನ, ಸ್ವಾಧಾರಾ ಕೇಂದ್ರ, ಒನ್‍ಸ್ಟಾಪ್ ಸೆಂಟರ್, ಶಿಶು ಅಭಿವೃದ್ಧಿ ಸೇರಿರಿದಂತೆ  ಇನ್ನಿತರ ಯೋಜನೆಗಳ  ಬಗ್ಗೆ ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
     ಬುಧವಾರ ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಸಾರ್ವಜನಿಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ಹಲವಾರು ಯೋಜನೆಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ದೂರವಾಣಿ ಸಂಖ್ಯೆ: 08382-226344 ಗೆ ಕರೆ ಮಾಡುವ ಮೂಲಕ ನೇರವಾಗಿ ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆಯಬಹುದಾಗಿರುತ್ತದೆ.
      ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಾದ ವಿರುಪಾಕ್ಷಪ್ಪ ಪಾಟೀಲ್, ಲಕ್ಷ್ಮೀ ದೇವಿ ಸೇರಿದಂತೆ ಮಾಧ್ಯಮ ಮಿತ್ರರು ಹಾಜರಿರುವರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...