ಸತತ ಐದನೇ ದಿನವೂ ಇಂಧನ ಬೆಲೆಯೇರಿಕೆ

Source: VB News | By I.G. Bhatkali | Published on 25th October 2021, 10:40 AM | National News |

ಹೊಸದಿಲ್ಲಿ: ಸತತ ಐದನೇ ದಿನವಾದ ರವಿವಾರವೂ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿದೆ.

ವಿಲ್ಲಿಯಲ್ಲಿ ಉಭಯ ಇಂಧನಗಳ ಬೆಲೆಗಳನ್ನು ತಲಾ 35 ಪೈಸೆ ಹೆಚ್ಚಿಸಲಾಗಿದ್ದು, ಈಗ ಪ್ರತಿ ಲೀ ಪೆಟ್ರೋಲ್ 107.24 ರೂ.ಗೆ ಮತ್ತು ಡೀಸೆಲ್ 96.32 ರೂ.ಗೆ ಏರಿಕೆಯಾಗಿವೆ. ಮುಂಬೈನಲ್ಲಿ ಪೆಟ್ರೋಲ್‌ಗೆ 34 ಪೈಸೆ ಮತ್ತು ಡೀಸೆಲ್‌ಗೆ 38 ಪೈಸೆ ಹೆಚ್ಚಿಸಲಾಗಿದ್ದು, ಅವುಗಳ ಬೆಲೆ ಪ್ರತಿ ಲೀ.ಗೆ ಅನುಕ್ರಮವಾಗಿ 113.46 ರೂ. ಮತ್ತು 104.38 ರೂ.ಗೇರಿದೆ.

ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಚೆನ್ನೈನಲ್ಲಿ 104.52 ರೂ. ಮತ್ತು 100.59 ರೂ.ಗೆ ಹಾಗೂ ಕೋಲ್ಕತಾದಲ್ಲಿ 108.11 ರೂ.ಮತ್ತು 99.43 ರೂ.ಗೆ ಹೆಚ್ಚಿಸಲಾಗಿದೆ. ಆದರೆ ಪುರುಲಿಯಾ, ಕೃಷ್ಣನಗರ, ಬೆಹ್ರಾಮಸ್ಥರ ಮತ್ತು ಕೂಚ್ ಬಿಹಾರ್‌ ನಂತಹ ಪ.ಬಂಗಾಳದ ಇತರ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಪ್ರತಿ ಲೀ.ಗೆ 100ರೂ.ಗಳ ಗಡಿಯನ್ನು ದಾಟಿದೆ.

ರಾಜಸ್ಥಾನದ ಗಂಗಾನಗರದಲ್ಲಿ ಇಂಧನ ಬೆಲೆಗಳು ಅತ್ಯಂತ ದುಬಾರಿ ಯಾಗಿದ್ದು, ಅಲ್ಲಿ ಪ್ರತಿ ಲೀ.ಪೆಟ್ರೋಲ್‌ಗೆ 119.79 ರೂ. ಮತ್ತು ಡೀಸೆಲ್‌ಗೆ 110.63 ರೂ. ತೆರಬೇಕಿದೆ. ವಿಭಿನ್ನ ಮೌಲ್ಯವರ್ಧಿತ ತೆರಿಗೆ ಗಳು ಮತ್ತು ಸಾಗಣೆ ವೆಚ್ಚಗಳಿಂದಾಗಿ ರಾಜ್ಯಗಳಲ್ಲಿ ಇಂಧನ ಬೆಲೆ ಗಳಲ್ಲಿ ವ್ಯತ್ಯಾಸವಾಗುತ್ತದೆ. ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ನೂರರ ಗಡಿಯನ್ನು ದಾಟಿದ್ದರೆ, 18ಕ್ಕೂ ಅಧಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡೀಸೆಲ್ ಶತಕವನ್ನು ಬಾರಿಸಿದೆ. ಸೆ.28 ರಿಂದೀಚೆಗೆ ರವಿವಾರ ಇಂಧನ ಬೆಲೆಗಳನ್ನು 21ನೇ ಸಲ ಹೆಚ್ಚಿಸಲಾಗಿದೆ.

Read These Next