ವಿಕಲಚೇತನರು ಘನತೆ ಹಾಗೂ ಗೌರವದಿಂದ ಬದುಕುವ ಅವಕಾಶ ಕಲ್ಪಿಸಬೇಕು: ವಿ.ಎಸ್.ಬಸವರಾಜ್

Source: so news | By Staff Correspondent | Published on 7th September 2019, 11:47 AM | State News | Don't Miss |

ಚಿಕ್ಕಮಗಳೂರು: ವಿಕಲಚೇತನರ ಘನತೆ ಹಾಗೂ ಗೌರವದಿಂದ ಬದುಕುವ ಅವಕಾಶವನ್ನು ಸಮಾಜ ಹಾಗೂ ಸರ್ಕಾರ ಮಾಡಿಕೊಡಬೇಕು ಆಗ ಮಾತ್ರ ವಿಕಲಚೇತನರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಅಂಗವಿಕಲರ ರಾಜ್ಯ ಆಯುಕ್ತ ವಿ.ಎಸ್.ಬಸವರಾಜ್ ಹೇಳಿದರು. 
ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಅಂಗವಿಕಲರ ಹಕ್ಕುಗಳ ರಕ್ಷಣೆ ಅರಿವು ಕಾರ್ಯಕ್ರಮ ಹಾಗೂ ಅಂಗವಿಕಲರ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ವಿಕಲಚೇತನರ ಸಬಲೀಕರಣಕ್ಕೆ ನೀಡುವ ಆರ್ಥಿಕ ನೆರವಿನಿಂದ ಪೂರ್ಣ ಪ್ರಮಾಣದ ಸಬಲೀಕರಣವಾಗುವುದಿಲ್ಲ. ಅವರನ್ನು ಶಿಕ್ಷಣವಂತರನ್ನಾಗಿ ಮಾಡಿ ಸ್ವ-ಉದ್ಯೋಗ ಕೈಗೊಂಡು, ಸ್ವಾವಲಂಬಿಗಳನ್ನಾಗಿಸಿದಾಗ ಮಾತ್ರ ಅವರು ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.
ವಿಕಲಚೇತನರ ಸಬಲೀಕರಣಕ್ಕೆ ಯಾವ ರೀತಿಯ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ರೂಪಿಸಿದಾಗ ಅನುಕೂಲವಾಗುತ್ತದೆ ಎಂಬ ಮಾಹಿತಿಯನ್ನು ಕ್ರೋಢಿಕರಿಸಿದ ನಂತರ ಯೋಜನೆಗಳನ್ನು ರೂಪಿಸಲಾಗುವುದು ಎಂದರು. 
ವಿಕಲಚೇತನರ ಕೆಲವು ಸಂಶೋಧನೆಗಳ ಪ್ರಕಾರ ಪ್ರತಿ ೧೦೦ ಅಂಗವಿಕಲರ ವಿದ್ಯಾಥಿಗಳಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಪಡೆಯುವಷ್ಟರಲ್ಲಿ ಅಂಗವಿಕಲರ ವಿದ್ಯಾರ್ಥಿಗಳ ಸಂಖ್ಯೆ ಶೇ.೩೦ ರಷ್ಟಕ್ಕೆ ಬಂದು ನಿಂತಿರುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ವಿ.ಆರ್.ಡಬ್ಲ್ಯೂ ಪ್ರತಿನಿಧಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ತೇರ್ಗಡೆಯಾಗುವಂತೆ ಅವರ ಪೋಷಕರಲ್ಲಿ ಮನವೊಲಿಸಿ ವಿದ್ಯಾಭ್ಯಾಸ ಪಡೆಯುವಂತೆ ಮಾಡಿದರೆ ಅಂಗವಿಕರಿಗೆ ಸಿಗುವಂತಹ ಕೆಲವು ಅವಶ್ಯಕ ಸೌಲಭ್ಯಗಳಿಂದ ವಂಚಿತರಾಗದೆ ಇರುವದಕ್ಕೆ ಸಾಧ್ಯವಾಗುತ್ತದೆ ಎಂದರು.
ಜಿಲ್ಲೆಯ ತೋಟಗಾರಿಕೆ ಇಲಾಖೆಯಲ್ಲಿ ವಿಕಲಚೇತನರಿಗಾಗಿ ಒಂದು ಕೋಟಿ ಹಣವು ಮೀಸಲಿರಿಸಿದ್ದು, ಈ ಹಣವನ್ನು ಯಾವೊಬ್ಬ ಅಂಗವಿಕಲರು ಸಹ ಸದುಪಯೋಗಪಡಿಸಿಕೊಂಡಿಲ್ಲ ಅಲ್ಲದೇ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗಾಗಿ ಇರುವಂತಹ ರೂ. ೧೫ ಕೋಟಿಯ ಹಣವು ಸಹ ಬಳಕೆಯಾಗಿಲ್ಲ ಇದನ್ನು ಅಂಗವಿಕಲರಿಗೆ ತಲುಪಿಸುವಂತಹ ಕೆಲಸಗಳನ್ನು ಎಂ.ಆರ್.ಡಬ್ಲ್ಯೂ ಮತ್ತು ವಿ.ಆರ್.ಡಬ್ಲ್ಯೂ ಅವರು ಮಾಡಬೇಕು ಎಂದರು.
ವಿಕಲಚೇತನರ ಜೀವನ ಸುಧಾರಣೆ ಮಾಡುವುದು ನಿಮ್ಮ ಜವಾಬ್ದಾರಿ ಆದ್ದರಿಂದ ಸರ್ಕಾರದಿಂದ ಯಾವ ಯೋಜನೆಗಳು ಇವೆ ಎಂಬ ಅರಿವನ್ನು ವಿಕಲಚೇತನರಿಗೆ ತಿಳಿಸಿಕೊಟ್ಟು ಅವರ ಶ್ರೇಯಾಭಿವೃದ್ದಿಗೆ ಶ್ರಮಿಸಬೇಕು ಎಂದು ಹೆಳಿದರು.  
ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ವಿಕಲಚೇತನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ವಿತರಿಸಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ನೀಡಬೇಕು. ಅಲ್ಲದೇ ಜಾಬ್ ಕಾರ್ಡ್ ಹೊಂದಿದವರು ಅವರ ಜಮೀನುಗಳಲ್ಲಿಯೇ ಕೆಲಸ ಮಾಡಲು ಅವಕಾಶವಿದ್ದು ಶೇ.೫೦ ರಷ್ಟು ಕೆಲಸ ಮಾಡಿದರೆ ಸಾಕು ಸರ್ಕಾರದಿಂದ ಪೂರ್ಣ ಪ್ರಮಾಣದ ಕೂಲಿ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ವಿಕಲಚೇತನರಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸಲು ಅನುಕೂಲವಾಗುವಂತೆ ಹೋಬಳಿ ಮಟ್ಟದಲ್ಲಿ ವಿಶೇಷ ವಸತಿ ಶಾಲೆಗಳನ್ನು ತೆರೆಯಬೇಕು ಹಾಗೂ ಕೆಲವೊಂದು ಇಲಾಖೆಗಲ್ಲಿ ನೀಡುವಂತಹ ಸವಲತ್ತುಗಳು ಸಕಾಲದಲ್ಲಿ ಸಿಗುವುದಿಲ್ಲವೆಂದು ಆಯುಕ್ತರ ಗಮನಕ್ಕೆ ತಂದರು.
ಸಭೆಯಲ್ಲಿ ಅಂಗವಿಕಲರ ಸಹಾಯಕ ಆಯುಕ್ತ ಪದ್ಮನಾಭ್, ಸಹಾಯಕ ಅಂಕವಿಕಲ ಅಧಿಕಾರಿ ನಾರಾಯಣ ಭಟ್, ಡಯಟ್ ಪ್ರಾಂಶುಪಾಲರಾದ ಸಿದ್ದರಾಜು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಅಂಗವಿಕಲ ಹಾಗೂ ಹಿರಿಯ ನಾಗರೀಕ ಸಬಲೀಕರಣ ಅಧಿಕಾರಿ ಶಿವಕುಮಾರ್, ಡಿ.ಡಿ.ಆರ್.ಸಿ. ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್, ಶಿಕ್ಷಣ ಇಲಾಖೆಯ ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...