ಪ್ರತಿಭಾ ಕಾರಂಜಿಯಲ್ಲಿ  ನ್ಯೂ ಶಮ್ಸ್ ಶಾಲಾ ವಿದ್ಯಾರ್ಥಿಗಳ ಸಾಧನೆ

Source: sonews | By Staff Correspondent | Published on 13th August 2018, 6:54 PM | Coastal News | Don't Miss |

ಭಟ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಭಟ್ಕಳ ಇವರು ಸೋಮವಾರ ಹೆಬಳೆ ಪಂಚಾಯತ್ ವ್ಯಾಪ್ತಿಯ ಬೀಬಿ ಮೊಂಟೆಸರಿ ಶಾಲೆಯಲ್ಲಿ ಆಯೋಜಿಸಿದ್ದ ಮುರುಡೇಶ್ವರ ನ್ಯಾಶನಲ್ ಕಾಲೋನಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ, 

ಈ  ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆಯ ಪ್ರಾಂಶುಪಾಲೆ ಫಹಮಿದಾ ಮುಲ್ಲಾ, ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಮುಹಮ್ಮದ್ ಶೂಐಬ್ ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ಅಬ್ದುಲ್ಲಾ ಪ್ರಥಮ, ಆಶುಭಾಷಣದಲ್ಲಿ ಅಬ್ದುಲ್ಲಾ ಪ್ರಥಮ, ಉರ್ದು ಕಂಠಪಾಠ ಸ್ಪರ್ಧೆಯಲ್ಲಿ ಸೈಯ್ಯದ್ ಆಹ್ಮದ್ ಪ್ರಥಮ, ಭಕ್ತಿ ಗೀತೆಯಲ್ಲಿ ಅಬ್ಬಾದ್ ಜಾಕ್ಟಿ ಪ್ರಥಮ, ಇಂಗ್ಲಿಷ್ ಕಂಠಪಾಟ ಸ್ಪರ್ಧೆಯಲ್ಲಿ ಉನೈಸ್ ಸಿದ್ದೀಖಾ ದ್ವಿತೀಯಾ, ದೇಶ ಭಕ್ತಿ ಗೀತೆಯಲ್ಲಿ ನುಬೈದ್ ಮತ್ತು ತಂಡ ದ್ವಿತೀಯಾ ಸ್ಥಾನವನ್ನು ಪಡೆದುಕೊಂಡಿದ್ದಾರೆ. 

ಕಿರಿಯ ಪ್ರಾಥಮಿಕ ಶಾಲಾ ಸ್ಪರ್ಧೆಗಳಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಬಹಾ ಸಮನ್ ಪ್ರಥಮ, ಚಿತ್ರಕಲೆಯಲ್ಲಿ ಫಾತಿಮಾ ಇಮ್ರಾಹ್ ಪ್ರಥಮ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಅಸ್ರಾರ್ ಆಹ್ಮದ್ ದ್ವಿತೀಯಾ, ಆಶುಭಾಷಣ ಸ್ಪರ್ಧೆಯಲ್ಲಿ ಬಾಸಿಖ್ ಪ್ರಥಮ, ಫುರ್ಖಾನ್ ಆಹ್ಮದ್ ಉರ್ದು ಕಂಠಪಾಟದಲ್ಲಿ ಪ್ರಥಮ ಹಾಗೂ ಹಿಂದಿ ಕಂಠಪಾಟ ಸ್ಪರ್ಧೆಯಲ್ಲಿ ದ್ವಿತೀಯಾ ಸ್ಥಾನ ಪಡೆದುಕೊಂಡಿದ್ದಾರೆ. 

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...