ಅತಿಕ್ರಮಣದಾರರಿಗೆ ದೊರಕದ ಆದೇಶ ಪ್ರತಿ; ನಾಪತ್ತೆಯಾಗಿರುವ ಶಂಕೆ-ರವೀಂದ್ರ ನಾಯ್ಕ

Source: sonews | By Staff Correspondent | Published on 12th September 2019, 6:08 PM | Coastal News | Don't Miss |

ಭಟ್ಕಳ: ಕರ್ನಾಟಕ ಅರಣ್ಯ ಕಾಯಿದೆ ಅಡಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯದಲ್ಲಿ ಒಕ್ಕಲೆಬ್ಬಿಸಿರುವ ಆದೇಶದ ಪ್ರತಿ ಸಕಾಲದಲ್ಲಿ ಅತಿಕ್ರಮಣದಾರರಿಗೆ ದೊರಕದೇ ಇದ್ದು ಆದೇಶದ ಪ್ರತಿಗಳು ನಾಪತ್ತೆಯಾಗಿರುವ ಕುರಿತು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಸಂಶಯ ವ್ಯಕ್ತಪಡಿಸಿದೆ.

ಈ ಕುರಿತು ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಜಿಲ್ಲೆಯ ಭಟ್ಕಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಆದೇಶದ ಪ್ರತಿ ಅಪೇಕ್ಷಿಸಿ ಅರ್ಜಿ ಸಲ್ಲಿಸಿ ಸಾಕಷ್ಟು ದಿನಗಳಾದರೂ ಪ್ರತಿ ದೊರಕದೇ ಸಂಬಂಧಿಸಿದ ಅಧಿಕಾರಿಗಳು ಆದೇಶದ ಪ್ರತಿ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಆದೇಶದ ಪ್ರತಿ ನಾಪತ್ತೆಯಾಗಿರುವದೆಂಬ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾ ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದ್ದಾರೆ.

2000ನೇ ಇಸ್ವಿಯ ನಂತರದ ದಿನಗಳಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಅಡಿಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯದಲ್ಲಿ ಜರುಗಿದ್ದು ಅದರಂತೆ ಒಕ್ಕಲೆಬ್ಬಿಸಲು ಆದೇಶಿಸಿ ಅಂತಿಮ ಆದೇಶ ಸಹಿತ ಸದ್ರಿ ನ್ಯಾಯಾಲಯದಲ್ಲಿ ನೀಡಿದ್ದಾಗಿತ್ತು. ಆದೇಶ ಆಗಿದ ಕುರಿತು ಅತಿಕ್ರಮಣದಾರರಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅತಿಕ್ರಮಿಸಿದ ಭೂಮಿಯ ಮಂಜೂರಿ ಹಕ್ಕನ್ನು ಊರ್ಜಿತವಾಗಿಟ್ಟುಕೊಳ್ಳಲು ಮೇಲ್ಮನವಿ ಸಲ್ಲಿಸುವುದು ಅವಶ್ಯವಾಗಿರುವುದರಿಂದ ಹಾಗೂ ಅತಿಕ್ರಮಣದಾರರ ಕ್ಷೇತ್ರದಿಂದ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದೇ ಅತಿಕ್ರಮಣದಾರರ ಕಬ್ಜಾ ಭೋಗ್ವಟೆಗೆ ಅರಣ್ಯಾಧಿಕಾರಿಗಳು ಆತಂಕ ಪಡಿಸದಂತೆ ಕಾನೂನಾತ್ಮಕ ಪ್ರಕ್ರಿಯೆ ಮುಂದುವರೆಸಬೇಕಿದ್ದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ಒಕ್ಕಲೆಬ್ಬಿಸಲು ಆದೇಶಿಸಿದ ಪ್ರತಿ ಪಡೆದುಕೊಂಡು ಮೇಲ್ಮನವಿ ಮಾಡುವುದು ಕಾನೂನಾತ್ಮಕವಾಗಿ ಅವಶ್ಯವಾಗಿದ್ದು ಇರುತ್ತದೆ.

ಒಕ್ಕಲೆಬ್ಬಿಸುವ ಆದೇಶ ನೀಡಲು ಅರ್ಜಿ ಸಲ್ಲಿಸಿದ್ದಾಗ್ಯೂ ಆದೇಶದ ಪ್ರತಿ ಒದಗಿಸಲು ಹಿಂದೇಟು ಹಾಕುತ್ತಿರುವುದು ಖಂಡನಾರ್ಹ. ಆದೇಶದ ಪ್ರತಿ ಒದಗಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವೇದಿಕೆಯು ನಿರ್ಣಯಿಸಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಉಚ್ಛ ನ್ಯಾಯಾಲಯಕ್ಕೆ ಮೊರೆ: ಅರಣ್ಯ ಸಾಗುವಳಿ ಮತ್ತು ಭೂಮಿ ಮಂಜೂರಿ ಹಕ್ಕು ಊರ್ಜಿತವಾಗಿ ಇಟ್ಟುಕೊಳ್ಳಲು ಒಕ್ಕಲೆಬ್ಬಿಸಿದ ಆದೇಶಕ್ಕೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ಒಕ್ಕಲೆಬ್ಬಿಸಿದ ಆದೇಶದ ಪ್ರತಿ ದೊರಕದ ಹಿನ್ನೆಲೆಯಲ್ಲಿ ಸಾವಿರಾರು ಅರಣ್ಯ ಅತಿಕ್ರಮಣದಾರರಿಗೆ ಉಂಟಾಗಿರುವ ಕಾನೂನು ತೊಡಕು ಗಮನಿಸಿ ಹೋರಾಟ ವೇದಿಕೆಯು ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂರು ದಿನಕ್ಕೂ ಆದೇಶ ಪ್ರತಿ ಇಲ್ಲ: ಭಟ್ಕಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನ್ಯಾಯಾಲಯದಲ್ಲಿ ಒಕ್ಕಲೆಬ್ಬಿಸಲಾದ ಆದೇಶ ಪ್ರತಿ ಕೋರಿ ಅರ್ಜಿ ಸಲ್ಲಿಸಿ ನೂರು ದಿನಗಳಾದರೂ ಆದೇಶ ಪ್ರತಿ ಆಗಲೀ ಹಿಂಬರಹವಾಗಲಿ ನೀಡದಿರುವುದು ಆಶ್ಚರ್ಯಕರ ಹಾಗೂ ಅರಣ್ಯಾಧಿಕಾರಿಗಳ ಕರ್ತವ್ಯ ಚ್ಯುತಿಯ ಕಾರಣವಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
 

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...