ಭಟ್ಕಳ ಬೆಳ್ನಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ತಡೆದು ಸಾರ್ವಜನಿಕರ ಪ್ರತಿಭಟನೆ; ಪೊಲೀಸ್ ಕಾವಲು؛ ಸಮಸ್ಯೆ ಪರಿಹಾರಕ್ಕೆ ಮತ್ತೊಂದು ಸುತ್ತಿನ ಸಭೆ

Source: S O NEWS | By V. D. Bhatkal | Published on 12th January 2022, 1:04 AM | Coastal News |

ಭಟ್ಕಳ: ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ ಬೆಳ್ನಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಯನ್ನು ಸಾರ್ವಜನಿಕರು ತಡೆದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. 

ಮಂಗಳವಾರ ಬೆಳಿಗ್ಗೆ ಘಟಕ ನಿರ್ಮಾಣಕ್ಕೆ ಗುರುತು ಹಾಕಲು ಬಂದ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿಗಳನ್ನು, ಭಟ್ಕಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಠ್ಠಲ್ ನಾಯ್ಕ ನೇತೃತ್ವದಲ್ಲಿ ತಡೆದ ಸಾರ್ವಜನಿಕರು, ಇದು ಜನವಸತಿ ಪ್ರದೇಶವಾಗಿದೆ. ಸದರಿ ನಿವೇಶನಕ್ಕೆ ಹೊಂದಿಕೊಂಡೇ ರಾಜ್ಯ ಹೆದ್ದಾರಿ ಇದೆ. ಘನತ್ಯಾಜ್ಯ ವಿಲೇವಾರಿ ಘಟಕದಿಂದ ಪರಿಸರ, ಜನರ ಆರೋಗ್ಯ ಹದಗೆಡಲಿದೆ, ಇಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದಕ್ಕೆ ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಜನರ ಆರೋಪವನ್ನು ಅಲ್ಲಗಳೆದ ಪಂಚಾಯತ ಅಧ್ಯಕ್ಷೆ ಸುಮಿತ್ರಾ ಗೊಂಡ, ಉಪಾಧ್ಯಕ್ಷ ದಾಸ

ಘನ ತ್ಯಾಜ್ಯವಿಲೇವಾರಿ ಘಟಕ ನಿರ್ಮಿಸಲು ಆಯ್ಕೆ ಮಾಡಿಕೊಂಡ ನಿವೇಶನ ಸರಿಯಾದುದಲ್ಲಿ. ಇಲ್ಲಿ ದೇವಸ್ಥಾನ, ದರ್ಗಾ ಇದೆ. ರಾಜ್ಯ ಹೆದ್ದಾರಿ ಹೊಂದಿಕೊಂಡೇ ಇದ್ದು, ಅಪಘಾತ ಹೆಚ್ಚಲಿದೆ. ಬೇರೆ ಕಡೆ ಘಟಕ ನಿರ್ಮಿಸಿದರೆ ಜನರು ಬೇಡ ಎನ್ನುವುದಿಲ್ಲ.
   - ವಿಠ್ಠಲ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರು

ನಾಯ್ಕ, ಪಂಚಾಯತ ಅಭಿವೃದ್ಧಿ ಅಧಿಕಾರಿ ಜಯಂತಿ ನಾಯ್ಕ, ಜನರಿಗೆ ಅರಿವಿನ ಕೊರತೆ ಇದೆ, ಜಿಲ್ಲೆಯ ಬೇರೆ ಸ್ಥಳಗಳಲ್ಲಿ ಜನವಸತಿ ಪ್ರದೇಶದಲ್ಲಿಯೇ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದೆ, ಇಲ್ಲಿ ಒಣ ತ್ಯಾಜ್ಯವನ್ನಷ್ಟೇ ಸಂಗ್ರಹಿಸಿ ನಂತರ ವಿಲೇವಾರಿ ಮಾಡಲಾಗುತ್ತಿದ್ದು, ಇದರಿಂದ ಪರಿಸರಕ್ಕೆ, ಜನರಿಗೆ ಯಾವುದೇ ಹಾನಿಯಾಗುವುದಿಲ್ಲ. ಭಟ್ಕಳ ಸಹಾಯಕ ಆಯುಕ್ತರಾಗಲಿ, ತಾಪಂ ಕಾರ್ಯನಿರ್ವಹಣಾಧಿಕಾರಿಗಳಾಗಲಿ ಲಿಖಿತವಾಗಿ ಕೆಲಸವನ್ನು ನಿಲ್ಲಿಸುವಂತೆ ತಿಳಿಸಿದರೆ ಮಾತ್ರ ಕಾಮಗಾರಿ ಸ್ಥಗಿತಗೊಳಿಸುತ್ತೇವೆ. ನಾವು ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ನಡೆಸಲು ಬದ್ಧರಾಗಿದ್ದೇವೆ ಎಂದು ತಿರುಗೇಟು ನೀಡಿದರು. ಇದನ್ನು ಒಪ್ಪದ ಪ್ರತಿಭಟನಾಕಾರರು, ನೀವು ಹೆಸರಿಗೆ ಒಣ ತ್ಯಾಜ್ಯ ಎನ್ನುತ್ತೀರಿ, ಆದರೆ ಜನರು ಹಸಿ ತ್ಯಾಜ್ಯವನ್ನು ನೀಡುತ್ತಾರೆ ಅಥವಾ ಈ ಜಾಗದಲ್ಲಿ ಎಸೆದು ಹೋಗುತ್ತಾರೆ, ದಿನ ಕಳೆದಂತೆ ಹೊಸ ಸಮಸ್ಯೆ ಸೃಷ್ಟಿಯಾಗುತ್ತ ಹೋಗುತ್ತದೆ. ನೀವು ಕಾಮಗಾರಿಯ ಬಿಲ್ ಪಾವತಿಸಿ ಮನೆಯಲ್ಲಿ ಇರುತ್ತೀರಿ, ತೊಂದರೆ ಅನುಭವಿಸುವವರು ಜನರು ಎಂದು ಅಸಮಾಧಾನ ಹೊರ ಹಾಕಿದರು. ಪರ, ವಿರೋಧದ ಹೇಳಿಕೆಗಳಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕಾಮಗಾರಿ ಸ್ಥಗಿತಗೊಳಿಸಲು ಪಂಚಾಯತ ಆಡಳಿತ ಒಪ್ಪದ ಕಾರಣ ಸಹಾಯಕ ಆಯುಕ್ತರ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಸಹಾಯಕ ಆಯುಕ್ತರು, ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಅಲ್ಲಿನ ಸಿಬ್ಬಂದಿಗಳ ಮುಂದೆ ಅಹವಾಲು ಮಂಡಿಸಿದರು. ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು, ಇಲ್ಲದಿದ್ದರೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ತಿಳಿಸಿ ಅಲ್ಲಿಂದ ತೆರಳಿದರು. 

ಸಿಪಿಐ ದಿವಾಕರ ಭೇಟಿ:
ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಳದಲ್ಲಿ ಪ್ರತಿಭಟನೆ ಮುಂದುವರೆಯುತ್ತಿದ್ದಂತೆಯೇ ಅಕ್ಕಪಕ್ಕದ ಜನರು ಸ್ಥಳದಲ್ಲಿ ಜಮಾಯಿಸಲಾರಂಭಿಸಿದರು. ಸಿಪಿಐ ದಿವಾಕರ, ಎಸೈ ಭರತ್, ಎಸೈ ಬಿ. ಸುಮಾ, ಎಸೈ ಹನುಮಂತ ಕುಡಗುಂಟಿ ಸಿಬ್ಬಂದಿಗಳೊಡನೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ನಂತರ ತಾಪಂ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಿಪಿಐ, ಈ ಕಾಮಗಾರಿ ಒಂದೇ ದಿನದಲ್ಲಿ ಆಗುವ ಕೆಲಸವಲ್ಲ, ಕನಿಷ್ಠ 1 ವಾರದವರೆಗೆ ಪೊಲೀಸ್ ಭದ್ರತೆ

 ಈ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಜನರಿಗೆ ಯಾವುದೇ ರೀತಿಯಿಂದ ತೊಂದರೆಯಾಗುವುದಿಲ್ಲ. ಇಲ್ಲಿ ಒಣಕಸವನ್ನಷ್ಟೇ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತದೆ.
  - ಸುಮಿತ್ರಾ ಗೊಂಡ, ಅಧ್ಯಕ್ಷರು, ಗ್ರಾಪಂ ಅಧ್ಯಕ್ಷ ಮಾವಿನಕುರ್ವೆ ಭಟ್ಕಳ

ಒದಗಿಸಬೇಕಾಗುತ್ತದೆ, ಈ ಕ್ಷಣವೇ ಭದ್ರತೆ ಬೇಕು ಎಂದರೆ ಒದಗಿಸುವುದು ಕಷ್ಟ, ಒಂದೆರಡು ದಿನಗಳ ಒಳಗೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳೋಣ, ಅಲ್ಲಿಯವರೆಗೆ ಕಾಮಗಾರಿಯನ್ನು ಮುಂದೂಡುವುದು ಒಳಿತು ಎಂದು ವಿವರಿಸಿದರು. ನಂತರ ಪ್ರತಿಭಟನಾಕಾರರಿಗೂ ಈ ಬಗ್ಗೆ ಮಾಹಿತಿ ನೀಡಲಾಯಿತು. ಇದಕ್ಕೆ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಒಪ್ಪಿಗೆ ಸೂಚಿಸಿದರು. 

ಕಾಮಗಾರಿಯ ಕಥೆ ಏನು?;   
ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಈಗಾಗಲೇ ಬೆಳ್ನಿ ರಾಜ್ಯಹೆದ್ದಾರಿಯ ಪಕ್ಕದಲ್ಲಿ 2019ರಲ್ಲಿ 30 ಗುಂಟೆ ನಿವೇಶನ ಮಂಜೂರಾಗಿದ್ದು, ಕಾಮಗಾರಿಗಾಗಿ ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತಗಳಿಂದ ತಲಾ ರು.5 ಲಕ್ಷ ( ಒಟ್ಟೂ ರು.10 ಲಕ್ಷ) ಹಣವನ್ನು ಬಿಡುಗಡೆ ಮಾಡಲಾಗಿದೆ. ಜನವಸತಿ ಸ್ಥಳದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವೇ ಬೇಡ ಎಂದು ಪಟ್ಟು ಹಿಡಿದಿರುವ ಬೆಳ್ನಿ ಭಾಗದ ಜನರು, ಈ ಸಂಬಂಧ ಗ್ರಾಮ ಪಂಚಾಯತ, ತಹಸೀಲ್ದಾರ, ಸಹಾಯಕ ಆಯುಕ್ತರು ಸೇರಿದಂತೆ ಈ ಹಿಂದೆಯೇ ವಿವಿಧ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೂ ಅಲ್ಲಿನ ಜನರ ಬೇಡಿಕೆಗೆ ಅಧಿಕಾರಿಗಳು ಮಣಿಯದ ಕಾರಣ ಸಮಸ್ಯೆ ಇನ್ನೂ ಜಟಿಲವಾಗಿಯೇ ಉಳಿದುಕೊಂಡಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...