ಅವನತಿಯತ್ತ ಕಾಂಗ್ರೇಸ್; ಪಕ್ಷದ ವಿರುದ್ಧ ಅಸಮಧಾನ ಹೊರ ಹಾಕಿದ ಕಾಂಗ್ರೇಸ್ ಹಿರಿಯ ಮುಖಂಡ

Source: sonews | By Staff Correspondent | Published on 16th November 2020, 6:07 PM | National News |

ಹೊಸದಿಲ್ಲಿ: ಕಾಂಗ್ರೇಸ್ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂದು ಹಿರಿಯ ಕಾಂಗ್ರೇಸ್ ಮುಖಂಡ ಕಪಿಲ್ ಸಿಬಿಲ್ ತಮ್ಮ ಅಸಮಾದಾನ ಹೊರಹಾಕಿದ್ದು “ಜನರು ಕಾಂಗ್ರೆಸ್ ಪಕ್ಷವನ್ನು ಒಂದು ಪರ್ಯಾಯ ಎಂದು ಪರಿಗಣಿಸುವುದಿಲ್ಲ'' ಎಂದು ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ನಿರ್ವಹಣೆ ಬೆನ್ನಲ್ಲಿ ಅವರ ಈ ಹೇಳಿಕೆ ಬಂದಿದೆ. ಪಕ್ಷದ ಸಮಸ್ಯೆಗಳ ಬಗ್ಗೆ ನಾಯಕತ್ವಕ್ಕೆ ಅರಿವಿದ್ದರೂ ಅದನ್ನು ಒಪ್ಪಿಕೊಳ್ಳಲು ಅದು ಸಿದ್ಧವಿಲ್ಲ ಎಂದ ಸಿಬಲ್ ಇದೇ ರೀತಿ ಮುಂದುವರಿದರೆ ಪಕ್ಷದ ಪ್ರಗತಿ ಕುಂಠಿತಗೊಳ್ಳುತ್ತಾ ಹೋಗಲಿದೆ ಎಂದರು.

ಬಿಹಾರದಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಹೊರತಾಗಿಯೂ ಕೇವಲ 19ರಲ್ಲಿ ಜಯ ಗಳಿಸಿದೆ ಹಾಗೂ ಗುಜರಾತ್ ಉಪಚುನಾವಣೆಗಳಲ್ಲೂ ಸೋಲುಂಡಿದೆ ಎಂದು ಸಿಬಲ್ ಹೇಳಿದರು.

“ಲೋಕಸಭಾ ಚುನಾವಣೆಯಲ್ಲೂ ಗುಜರಾತ್ ‍ನಲ್ಲಿ ಒಂದೇ ಒಂದು ಸ್ಥಾನವನ್ನು ನಾವು ಗಳಿಸಿಲ್ಲ. ಉತ್ತರ ಪ್ರದೇಶದ ಕೆಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಶೇ 2ಕ್ಕಿಂತ ಕಡಿಮೆ ಮತಗಳು ದೊರಕಿವೆ. ಗುಜರಾತ್‍ನಲ್ಲಿ ಮೂವರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ''ಎಂದು ಸಿಬಲ್ ಅಸಮಾಧಾನ ವ್ಯಕ್ತಪಡಿಸಿದರು.

ಆಗಸ್ಟ್ ತಿಂಗಳಲ್ಲಿ ಸಿಬಲ್ ಸಹಿತ ಪಕ್ಷದ ಕೆಲ ಹಿರಿಯ ನಾಯಕರು ಪಕ್ಷ ಅವನತಿಯ ಹಾದಿ ಹಿಡಿಯುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಬರೆದ ಪತ್ರದ ಕುರಿತು ಉಲ್ಲೇಖಿಸಿದ ಅವರು ಆ ಕುರಿತೂ ಚರ್ಚೆಯಿಲ್ಲ ಹಾಗೂ ನಾಯಕತ್ವ ಕೂಡ ಚರ್ಚೆಗೆ ಪ್ರಯತ್ನಿಸುತ್ತಿಲ್ಲ ಎಂದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲರನ್ನೂ ನಾಮಕರಣಗೊಳಿಸಲಾಗುತ್ತಿರುವ ಕುರಿತು ಮಾತನಾಡಿದ ಅವರು, “ಸಿಡಬ್ಲ್ಯುಸಿ ವಿಚಾರದಲ್ಲೂ ಪ್ರಜಾಪ್ರಭುತ್ವ ಪ್ರಕ್ರಿಯೆ ಅನುಸರಿಸಬೇಕು'' ಎಂದರು. ಪಕ್ಷಕ್ಕೆ ಸಮಸ್ಯೆಗಳ ಬಗ್ಗೆ ಅರಿವಿದೆ. ಆದರೆ ಅವುಗಳ ಪರಿಹಾರಕ್ಕೆ ಮನಸ್ಸು ಮಾಡುತ್ತಿಲ್ಲ ಎಂದು ಅವರು ಹೇಳಿದರು.

Read These Next

ಪಣಜಿ: ಗೋವಾ ಜಿಎಂಸಿಎಚ್‌ನಲ್ಲಿ ಆಮ್ಲಜನಕದ ಕೊರತೆ; 26 ಸೋಂಕಿತರ ಸಾವು ತನಿಖೆಗೆ ಸಚಿವ ರಾಣೆ ಮನವಿ

ಸರಕಾರಿ ಸ್ವಾಮಿತ್ವದ ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಜಿಎಂಸಿಎಚ್)ಯಲ್ಲಿ ಮಂಗಳವಾರ ಬೆಳಗ್ಗೆ 26 ಕೊರೋನ ಸೋಂಕಿತರು ...

ಗಂಗಾ ನದಿಯಲಿ ಇನ್ನಷ್ಟು ಶವಗಳು ಪತ್ತೆ, ಕೊರೋನ ಸಹಿತ ಇನ್ನಿತರ ಸಾಂಕ್ರಾಮಿಕ ಸೋಂಕು ಹರಡುವ ಭೀತಿ

ಉತ್ತರಪ್ರದೇಶದ ಘಾಝಿಪುರದ ಗಂಗಾ ನದಿ ತೀರಕ್ಕೆ ಮಂಗಳವಾರ ಹಲವು ಮೃತದೇಹಗಳು ತೇಲಿ ಬಂದಿವೆ. ಸೋಮವಾರ 100ಕ್ಕೂ ಅಧಿಕ ಮೃತದೇಹಗಳು ತೇಲಿ ...

ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜ ಆಗಬೇಕೆಂಬ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್.

ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಸರಬರಾಜ ಆಗಬೇಕೆಂಬ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್.

ಜನರ ಜೀವನವನ್ನು ಕೇಂದ್ರವಾಗಿಸಿ, ನಿಮ್ಮ ಕುರುಡು ದುರಹಂಕಾರವನ್ನಲ್ಲ: ಸೆಂಟ್ರಲ್ ವಿಸ್ಟಾ ಯೋಜನೆ ಕುರಿತು ರಾಹುಲ್ ಗಾಂಧಿ ವಾಗ್ದಾಳಿ

ಕೇಂದ್ರ ಸರ್ಕಾರದ "ಸೆಂಟ್ರಲ್ ವಿಸ್ಟಾ " ಯೋಜನೆ ಕುರಿತು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅದೊಂದು "ಕ್ರಿಮಿನಲ್ ವೇಸ್ಟ್" ...