ಮಾಸ್ಕ್ ಧರಿಸದಿದ್ದಲ್ಲಿ ಗ್ರಾಮೀಣ ಪ್ರದೇಶದಲ್ಲೂ ದಂಡ : ಜಿಲ್ಲಾಧಿಕಾರಿ.

Source: SO News | By Laxmi Tanaya | Published on 19th September 2020, 12:46 PM | Coastal News | Don't Miss |

ಕಾರವಾರ :  ಗ್ರಾಮೀಣ ಪ್ರದೇಶದ  ಸಾರ್ವಜನಿಕ ಅಥವಾ  ಜನರು ಗುಂಪಾಗಿ ಸೇರಿರುವ ಸ್ಥಳಗಳಲ್ಲಿ  ಮಾಸ್ಕ್  ಹಾಕಿಕೊಳ್ಳದೇ ಇರುವ ವ್ಯಕ್ತಿಗಳಿಗೆ ದಂಡ ವಿಧಿಸುವ  ಕಾರ್ಯವಾಗಬೇಕೆಂದು  ಜಿಲ್ಲಾಧಿಕಾರಿ  ಡಾ. ಹರೀಶ ಕುಮಾರ ಕೆ.  ಅವರು  ಸೂಚಿಸಿದರು

ಜಿಲ್ಲಾಧಿಕಾರಿ  ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ  ಶುಕ್ರವಾರ ಜಿಲ್ಲೆಯ ಎಲ್ಲ  ಎ ಸಿ,  ತಹಸೀಲ್ದಾರ್,  ತಾಲೂಕು  ಆರೋಗ್ಯಾಧಿಕಾರಿ  ಮತ್ತು  ಸ್ಥಳೀಯ  ಸಂಸ್ಥೆಗಳ ಅಧಿಕಾರಿಗಳೊಂದಿಗೆ  ವಿಡಿಯೋ  ಸಂವಾಧ ನಡೆಸಿ  ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ  ನಗರ  ಪ್ರದೇಶದಲ್ಲಿರುವ  ಕಚೇರಿಗಳಿಗೆ  ಬರುವ ಸಾರ್ವಜನಿಕರಿಗೆ  ಮಾಸ್ಕ್  ಧರಿಸುವುದು  ಕಡ್ಡಾಯವಾಗಿ ಮಾಡಲಾಗಿದೆ.  ಅದೇ  ರೀತಿ ಗ್ರಾಮ ಪಂಚಾಯತ್ ದಲ್ಲೂ ಕೂಡ  ಕ್ರಮ  ಕೈಗೊಳ್ಳಿ  ಎಂದು ಅವರು  ತಿಳಿಸಿದರು. 

  ಸಾಮಾಜಿಕ ಅಂತರ  ಕಾಯ್ದುಕೊಳ್ಳುವಲ್ಲಿ  ಕಷ್ಟ  ಅನಿಸಬಹುದು  ಆದರೆ  ಮಾಸ್ಕ್  ಧರಿಸುವುದು ಸುಲಭೋಪಾಯವಾಗಿದ್ದು  ಇದರ  ಬಗ್ಗೆ  ಸಾರ್ವಜನಿಕರಿಗೆ  ಜಾಗೃತಿ  ಮೂಡಿಸಬೇಕು,  ಮಾಸ್ಕ್  ಧಾರಣೆ ನಿಯಮ  ಉಲ್ಲಂಘಿಸುವರಿಗೆ ದಂಡ ವಿದಿಸಬೇಕೆಂದು ಅವರು  ಹೇಳಿದರು. 

   ಕೋವಿಡ್ -19 ಪರೀಕ್ಷೆ  ಹೆಚ್ಚಿನ  ಸಂಖ್ಯೆಯಲ್ಲಿ  ಆಗಬೇಕು.  ಒಂದು  ಪಾಸಿಟಿವ್ ಕೇಸ್ ಕಂಡುಬಂದಲ್ಲಿ  ಅಲ್ಲಿ  ಕನಿಷ್ಠ 10 ಆದರೂ ಕೋವಿಡ್-19 ಪರೀಕ್ಷೆ ಆಗಬೇಕು. ಲಕ್ಷಣವಿಲ್ಲದಿದ್ದಲ್ಲಿ ಹೋಮ್ ಐಸೊಲ್ಯೂಷನ್ ಗೆ  ಮತ್ತು  ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆ  ದಾಖಲೆಗೆ  ಸೂಚಿಸಬೇಕು.  ಪ್ರತಿ  ಆಸ್ಪತ್ರೆಯಲ್ಲೂ  ಚಿಕಿತ್ಸೆ  ದೊರೆಯಲು   ಕ್ರಮ ಕೈಗೊಳ್ಳಬೇಕು. ನಾನ್  ಕೋವಿಡ್  ಕೇಸ್ ಗಳಿಗೂ  ಅಷ್ಟೇ  ಪ್ರಾಮುಖ್ಯತೆ ನೀಡಿ  ಗಮನ  ಹರಿಸಬೇಕೆಂದರು. 

  ಪ್ರತಿ  ತಾಲೂಕು  ಆಸ್ಪತ್ರೆಗಳಲ್ಲಿ  ಶಿಷ್ಟಾಚಾರದಂತೆ  ಕೋವಿಡ್ ಪೇಶೆಂಟ್ ಗೆ ಚಿಕಿತ್ಸೆ  ನೀಡಬೇಕು. ಆಧುನಿಕ  ಚಿಕಿತ್ಸಾ ವಿಧಾನಗಳನ್ನೆಲ್ಲ ತುರ್ತಾಗಿ  ಬಳಸಿಕೊಳ್ಳಬೇಕು. ಪಕ್ಕದ  ಜಿಲ್ಲೆಯ  ಆಸ್ಪತ್ರೆಗಳಲ್ಲಿ  ಜಿಲ್ಲೆಯ  ಜನರಿಗೆ  ಚಿಕಿತ್ಸೆಗೆ ದಾಖಲಾಗುವ   ಅವಕಾಶ ಕಷ್ಟವಾಗಿದ್ದು,  ಜನರಿಗೆ   ತೊಂದರೆ ಆಗದಂತೆ   ಚಿಕಿತ್ಸೆ  ನೀಡಲು ಎಲ್ಲ ಕ್ರಮ  ಕೈಗೊಳ್ಳಬೇಕು  ಎಂದರು. 

    ಎಲ್ಲ  ರೋಗಿಗಳನ್ನು   ಕಾರವಾರ  ಆಸ್ಪತ್ರೆಗೆ  ಕಳುಹಿಸಲು  ಮುಂದಾಗದೆ,  ಸ್ಥಳೀಯವಾಗಿ  ಚಿಕಿತ್ಸೆ  ನೀಡಲು ಕ್ರಮ ಕೈಗೊಳ್ಳಬೇಕು.  ಅಗತ್ಯವಿದ್ದಲ್ಲಿ  online  ಮತ್ತು ವರ್ಚುವಲ್ ಪ್ಲಾಟಫಾರ್ಮ್   ಮೂಲಕ ಹಿರಿಯ ವೈದ್ಯರ ನೆರವು ಪಡೆಯಬೇಕು  ಸ್ಥಳೀಯವಾಗಿದ್ದಲ್ಲಿ  ಹೆಚ್ಚಿನ  ಗಮನ  ನೀಡಲು  ಸಾಧ್ಯವಾಗುತ್ತದೆ.   ಅದೇ  ರೀತಿ  ಡಿಸ್ ಚಾರ್ಜ್  ಬಗ್ಗೆ ಕೂಡ  ಗಮನ  ಕೊಡಬೇಕು ಎಂದರು. 

ಈ  ಸಂದರ್ಭದಲ್ಲಿ  ಅಪರ  ಜಿಲ್ಲಾಧಿಕಾರಿ  ಕೃಷ್ಣಮೂರ್ತಿ  ಹೆಚ್.  ಕೆ.  ಎಎಸ್ ಪಿ  ಬದರಿನಾಥ್ ಎಸ್  ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...