ಮಾಸ್ಕ್ ಇಲ್ಲದೆ ಮುಂಡಗೋಡ ಪಟ್ಟಣವನ್ನು ಪ್ರವೇಶಿಸುವರಿಗೆ ದಂಡ

Source: Nazir Tadapatri | By S O News | Published on 3rd August 2021, 5:43 PM | Coastal News |

ಮುಂಡಗೋಡ: ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಅತಿ ಕಡಿಮೆ ಬೆರಳಣಿಕೆಷ್ಟು ಇದ್ದರೂ ಮಹಾರಾಷ್ಟ್ರ ಹಾಗೂ ಕೆರಳದ ಸೋಂಕಿನ ಪ್ರಮಾಣ ನೋಡಿ ಈಗಿನಿಂದಲೇ ಜನರನ್ನು ಎಚ್ಚರಿಸುವುದು ಅವಶ್ಯವೆಂದುಕೊಂಡು ಪಟ್ಟಣ ಪಂಚಾಯತ್ ಮುಂದಾಗಿ ಸೋಮವಾರದೊಂದು ಮಾಸ್ಕ ಧರಿಸದೆ ಇದ್ದವರಿಗೆ ಎಚ್ಚರಿಕೆ ನೀಡಿ ದಂಡವಿಧಿಸಿ ದಂಡದ ರೂಪವಾಗಿ 1000 ರೂ ಸಂಗ್ರಹಿಸಿದ್ದಾರೆ.

ಸೋಮವಾರ ಸಂತೆ ದಿನ ಪಟ್ಟಣ ಪಂಚಾಯತ್ ಸಿಬ್ಬಂದಿ ಸಂತೆಗೆ ಕೊಳ್ಳಲು ಬರುವವರನ್ನು ಹಾಗೂ ಮಾರಾಟ ಮಾಡುವವರಿಗೆ ಧ್ವನಿವರ್ಧಕದಿಂದ ಎಚ್ಚರಿಕೆ ನೀಡಿದೆ ಕೆಲವರಿಗೆ ದಂಡ ವಿಧಿಸಿದೆ ಇವರ ಕಾರ್ಯಾಚರಣೆಯನ್ನು ನೋಡಿ ಮಾಸ್ಕ ಹಾಕದೆ ಇದ್ದವರು ಲಗುಬಗೆಯಿಂದ ಅಂಗಡಿಗಳಲ್ಲಿ ಮಾಸ್ಕ್ ಖರಿದೀಸಿ ಮಾಸ್ಕ್ ಹಾಕಿಕೊಂಡು ಸಂತೆಗೆ ಪ್ರವೇಶ ಮಾಡುತ್ತಿರುವುದು ಕಂಡು ಬಂದಿತು.

ಸರಕಾರ ಅನ್‍ಲಾಕ್ ಮಾಡಿದರೂ ಕೊರೊನಾ ನಿಯಮಾವಳಿ ಪಾಲಿಸಿಕೊಂಡು ಬರಬೇಕು ಎಂದು ಹೇಳಿತ್ತು ಆದರೆ ಅದ್ಯಾವುದು ನಿಯಮಗಳನ್ನು ಪಾಲಿಸದೆ ಬಹುತೇಕ ಜನರು ತಮ್ಮ ಮನಸ್ಸಿಗೆ ಬಂದ ಹಾಗೆ ಇದ್ದಾರೆ. ತಾಲೂಕಿನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಅತಿ ಕಡಿಮೆ ಕೆಲವಂದು ಸಾರೆ ಸೋಂಕಿನ ಪ್ರಮಾಣ ಸೊನ್ನೆ ಬರುತ್ತಿರುವುದರಿಂದ ಜನರು ಮಾಸ್ಕ್ ದಿಂದ ವಿಮುಖ ರಾಗುತ್ತಿರುವುದು ಕಂಡು ಬಂದಿತು.

ಮಾಸ್ಕ ಹಾಕದೆ ಇದ್ದ ಕುರಿತು ಜನರನ್ನು ಕೇಳಿದರೆ ನಮಗ್ಯಾಕರೀ ಮಾಸ್,್ಕ ವಿದ್ಯಾವಂತರು, ಸುಸಂಸ್ಕøತರು, ದೊಡ್ಡ ವ್ಯಕ್ತಿಗಳು ಎನಿಸಿಕೊಂಡವರೇ ಮಾಸ್ಕ್ ಧರಿಸುತ್ತಿಲ್ಲಾ ಎಂದಾದರೆ. ಇನ್ನೂ ನಮ್ಮಂತ ಸಾಮನ್ಯಜನರು ಮಾಸ್ಕ್ ಧರಿಸಲು ಸಾಧ್ಯವೆ ಎಂದು ಪ್ರಶ್ನೆಸುತ್ತಿದ್ದಾರೆ.

ಕೊರೊನಾ ಸೋಂಕಿನ ಕುರಿತು ಜನರು ಜಾಗೃತೆ ವಹಿಸುವುದು ಅವಶ್ಯವಾಗಿದೆ ಪ್ರತಿಯೊಂದು ಸಾರಿಯೂ ಅಧಿಕಾರಿಗಳು ದಂಡ ಹಾಕಬೇಕು ಎಚ್ಚರಿಕೆ ನೀಡಬೇಕು ಎಂದೆನಿಲ್ಲಾ. ಪ್ರತಿಯೊಬ್ಬ ಸ್ವಯಂಪ್ರೇರಣೆಯಾಗಿ ಪ್ರತಿಯೊಬ್ಬ ವ್ಯಕ್ತಿ ತನ್ನ ಆರೋಗ್ಯ ಪ್ರಾಣದ ಹಾಗೂ ತನ್ನ ಕುಟುಂಬಸ್ಥರ ಕುರಿತು ಚಿಂತನೆ ಮಾಡುವುದು ಅವಶ್ಯವಾಗಿದೆ ಸೋಂಕಿನಿಂದ ಆಗಬಹುದಾಗದ ಅವಾಂತರಗಳು ನೆನದು ಕೊರೊನಾ ನಿಯಮಾವಳಿ ಪಾಲಿಸುವುದು ಅವಶ್ಯವಾಗಿದೆ. ಮಾಸ್ಕ ಕಾರ್ಯಾಚರಣೆ ಪ್ರತಿದಿನವೂ ನಡೆಯಲಿದೆ ಆದ್ದರಿಂದ ಪತ್ರಿಯೊಬ್ಬರು ಮಾಸ್ಕ ಧರಿಸಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂಗನಬಸಯ್ಯ ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಕಳೆದೊಂದು ತಿಂಗಳಿನಿಂದ ತಾಲೂಕಿನಲ್ಲಿ ಬಹುತೇಕರು ಮಾಸ್ಕ ಧರಿಸದೇ ಸಂಚರಿಸುವುದು ಕಂಡು ಬಂದಿತು. ಬರುಬರುತ್ತಾ ಮಾಸ್ಕ ಧರಿಸುವರನ್ನು ಕೆಲವರು ಹುಬ್ಬೇರಿಸುವ ದೃಷ್ಠಿಯಲ್ಲಿ ನೋಡುವಂತಾಗಿತ್ತು.

Read These Next

ಅಂಕೋಲಾದ ಅನ್ನದಂಗಳದಲ್ಲಿ ಮಾತುಕತೆ ಕಾರ್ಯಕ್ರಮ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ. ಕೃಷಿಕರೊಂದಿಗೆ ಸಂವಾದ

ಕಾರವಾರ : ರೈತರ ಏಳಿಗೆಯ ಜೊತೆ ಕೃಷಿಯಲ್ಲಿ ದೇಶ ಸ್ವಾವಲಂಬಿಯಾಗುವ ದೃಷ್ಟಿಯಲ್ಲಿ ಕೇಂದ್ರ ಸರ್ಕಾರವು ರೈತ ಸ್ನೇಹಿ ಸರ್ಕಾರವಾಗಿ ...

ಶಾಲಾ ಕಾಲೇಜುಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಪರಿಶೀಲನೆ.

ಉಡುಪಿ : ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಲನೆ ಮಾಡುತ್ತಿರುವ ...

ಭಾರತ ವಿಶ್ವಕ್ಕೆ ಸಿರಿ ಧಾನ್ಯ ರಫ್ತು ಮಾಡುವ ಹಬ್ ಆಗಲಿದೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ : ಮುಂದಿನ ಎರಡು ವರ್ಷದ ಅವಧಿಯಲ್ಲಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ, ...