ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಸಹಿತ 300ಕ್ಕೂ ಅಧಿಕ ಮಂದಿ ಗಣ್ಯರ ಮೊಬೈಲ್ ಫೋನ್ ಹ್ಯಾಕ್

Source: VB News | By S O News | Published on 20th July 2021, 1:13 PM | National News |

ಹೊಸದಿಲ್ಲಿ: ಇಸ್ರೇಲ್ ಮೂಲದ ಕಣ್ಗಾವಲು ತಂತ್ರಜ್ಞಾನ ಸಂಸ್ಥೆಯೊಂದು 'ಪೆಗಾಸಸ್' ಸ್ಪೈವೇರ್‌ ಬಳಸಿಕೊಂಡು ಸಚಿವರು, ಪ್ರತಿಪಕ್ಷ ನಾಯಕರು, ಪತ್ರಕರ್ತರು, ವಿಜ್ಞಾನಿಗಳು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಭಾರತದ 300ಕ್ಕೂ ಅಧಿಕ ಮಂದಿಯ ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಿದೆಯೆಂದು 'ದಿ ವೈರ್' ಪತ್ರಿಕೆಯ ತನಿಖಾ ವರದಿ ಆಪಾದಿಸಿದೆ.

ದತ್ತಾಂಶ ಸೋರಿಕೆಯಾಗಿರುವ ದೂರವಾಣಿ ಸಂಖ್ಯೆಗಳನ್ನು ಹೊಂದಿರುವ ಕೆಲವು ಫೋನ್ ಗಳನ್ನು ವಿಧಿವಿಜ್ಞಾನ ಪರೀಕ್ಷೆಗೊಳಪಡಿಸಲಾಗಿದ್ದು, ಆ ಪೈಕಿ 37 ದೂರವಾಣಿ ಸಂಖ್ಯೆಗಳನ್ನು ಪೆಗಾಸಸ್ ಸ್ಪೈ ವೇರ್‌ ಮೂಲಕ ಹ್ಯಾಕ್ ಮಾಡಲಾಗಿದೆಯೆಂದು ದೃಢಪಟ್ಟಿರುವುದಾಗಿ ದಿ ವೈರ್ ತಿಳಿಸಿದೆ. ಪೆಗಾಸಸ್ ಸ್ಪೈವೇರ್‌ನ ಮಾರಾಟ ಸಂಸ್ಥೆಯಾದ ಎನ್‌ಎಸ್‌ ಗ್ರೂಪ್, ಸ್ಪೈವೇರ್‌ನಿಂದ ಸೋರಿಕೆಯಾದ ದತ್ತಾಂಶಗಳನ್ನು ಯಾವ ಗ್ರಾಹಕರಿಗೆ ನೀಡಿದ್ದೇನೆಂಬುದನ್ನು ತಿಳಿಸಲು ನಿರಾಕರಿಸಿದೆ. ಆದರೆ ತನ್ನ ಗ್ರಾಹಕರೆಲ್ಲರೂ ಸರಕಾರಿ ಏಜೆನ್ಸಿಗಳೆಂದು ಅದು ತಿಳಿಸಿದೆ. ಎನ್.ಎಸ್ಒ ಗ್ರೂಪ್ 36ಕ್ಕೂ ಅಧಿಕ ಸರಕಾರಗಳಿಗೆ ಪೆಗಾಸಸ್ ಸ್ಪೈವೇರ್ ಮಾರಾಟ ಮಾಡಿರುವ ಸಾಧ್ಯತೆಯಿದೆ ಯೆಂದು ಶಂಕಿಸಲಾಗಿದೆ.

50,000, ಅಲ್ಪ 5,000'

50 ಸಾವಿರ ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳಲು  ಪೆಗಾಸಸ್ ಬಳಕೆಯಾಗಿದೆಯೆಂಬ ವರದಿ ಯನ್ನು ಸ್ಪೈವೇರ್‌ನ ಮಾರಾಟ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ನಿರಾಕರಿಸಿದೆ. ತನ್ನ ಎಲ್ಲಾ ಸರಕಾರಿ ಗ್ರಾಹಕರನ್ನು ಪರಿಗಣನೆಗೆ ತೆಗೆದುಕೊಂಡರೂ ಕಣ್ಗಾವಲಿಗೊಳಗಾದ ಗುರಿಗಳ(ಮೊಬೈಲ್ ಫೋನ್) ಗಳ ಸಂಖ್ಯೆ 5,000 ಮೀರಲಾರದು ಎಂದು ಅದು ಹೇಳಿದೆ.

ಸೋರಿಕೆಯಾದ ದತ್ತಾಂಶದ ವಿವರಗಳು ಪ್ಯಾರಿಸ್ ನ ಲಾಭೋದ್ದೇಶ ರಹಿತ ಮಾಧ್ಯಮ ಸಂಸ್ಥೆ 'ಫಾರ್‌ಬಿಡನ್ ಸ್ಟೋರೀಸ್' ಮತ್ತು ಮಾನವಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಗೆ ಲಭ್ಯವಾಗಿದ್ದು, ಅದನ್ನು ದಿ ವೈರ್, ಲೆ ಮಾಂಡ, ದಿ ಗಾರ್ಡಿಯನ್, ವಾಶಿಂಗ್ಟನ್ ಪೋಸ್ಟ್, ಡೀ ಝಟ್ ಮತ್ತು ಇತರ 10 ಮೆಕ್ಸಿಕನ್, ಅರಬ್ ಮತ್ತು ಯುರೋಪಿಯನ್ ಮಾಧ್ಯಮ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಸೋರಿಕೆಯಾಗಿರುವ ದತ್ತಾ೦ಶಸ೦ಜೆಯವು ಎನ್ ಎಸ್ಒ ಗ್ರಾಹಕರು ತಮ್ಮ ಗುರಿಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದ ದೂರವಾಣಿಗಳ ದಾಖಲೆಗಳನ್ನು ಒಳಗೊಂಡಿದೆ ಎಂಬ 'ಫಾರ್‌ಬಿಡನ್ ಸ್ಟೋರೀಸ್'ನ ಹೇಳಿಕೆಯನ್ನು ಕ೦ಪೆನಿಯು ವಿಧ್ಯುಕ್ತವಾಗಿ ನಿರಾಕರಿಸಿದೆಯಾದರೂ ತನ್ನ ಗ್ರಾಹಕರು ಇತರ ಉದ್ದೇಶಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಬಳಸಿಕೊಂಡಿರಬಹುದು ಎಂದು ಒಪ್ಪಿಕೊಂಡಿದೆ.

ಪೆಗಾಸಸ್ ಸ್ಪೈವೇರ್‌ ಮೂಲಕ ಹ್ಯಾಕ್ ದೂರವಾಣಿ ಸಂಖ್ಯೆಗಳು ಭಾರತ, ಅಜರ್‌ಬೈಜಾನ್, ಬೆಹರಿನ್, ಹಂಗರಿ, ಕಝಕಿಸ್ತಾನ್, ಮೆಕ್ಸಿಕೊ, ಮೊರೊಕ್ಕೊ,ರವಾಂಡಾ , ಸೌದಿ ಅರೇಬಿಯಾ ಮತ್ತು ಯುಎಇಗಳಿಗೆ ಸೇರಿದ್ದಾಗಿವೆ ಎಂದು ಟೊರೊಂಟೊ ವಿವಿಯ ಡಿಜಿಟಲ್ ಕಣ್ಗಾವಲು ಸಂಶೋಧನಾ ಸಂಸ್ಥೆ ಸಿಟಿಜನ್ ಲ್ಯಾಬ್‌ನ ತಜ್ಞರು ಗುರುತಿಸಿದ್ದಾರೆ.

ಭಾರತದಲ್ಲಿ 2017ರ ಮಧ್ಯದಿಂದ 2019ರ ಮಧ್ಯದವರೆಗೆ ಭಾರತೀಯ ಮೊಬೈಲ್ ಫೋನ್ ನಂಬರ್‌ಗಳನ್ನು ಹ್ಯಾಕ್ ಮಾಡಲಾಗಿತ್ತೆಂದು ವರದಿ ತಿಳಿಸಿದೆ. ಭಾರತದ 40ಕ್ಕೂ ಅಧಿಕ ಪತ್ರಕರ್ತರು, ಓರ್ವ ಸಾಂವಿಧಾನಿಕ ಅಧಿಕಾರಿ, ನರೇಂದ್ರ ಮೋದಿ ಸರಕಾರದ ಇಬ್ಬರು ಸಚಿವರು, ಭದ್ರತಾ ಸಂಸ್ಥೆಗಳ ಹಾಲಿ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಮತ್ತು ಹಲವಾರು ಉದ್ಯಮಿಗಳ ದೂರವಾಣಿ ಸಂಖ್ಯೆಗಳು ಕೂಡಾ ಪೆಗಾಸಸ್ ಮೂಲಕ ಹ್ಯಾಕ್ ಆಗಿವೆ ಎಂಬುದಾಗಿ ವರದಿ ತಿಳಿಸಿದೆ.

ಈ ದೂರವಾಣಿ ಸಂಖ್ಯೆಗಳು ಯಾರಿಗೆ ಸೇರಿವೆ ಎನ್ನುವುದನ್ನು ಪತ್ತೆ ಹಚ್ಚಿ ದೃಢೀಕರಿಸಿಕೊಳ್ಳಲು ಮತ್ತು ದತ್ತಾಂಶ ಸಂಚಯದ ಅವಧಿಯಲ್ಲಿ ಅವರು ಬಳಸುತ್ತಿದ್ದ ಫೋನ್‌ಗಳ ವಿಧಿವಿಜ್ಞಾನ ಪರೀಕ್ಷೆಯನ್ನು ನಡೆಸಲು 'ಫಾರ್‌ಬಿಡನ್ ಸ್ಟೋರೀಸ್' 80 ಪತ್ರಕರ್ತರನ್ನು ಸಂಯೋಜಿಸಿತ್ತು ಮತ್ತು ಇದಕ್ಕೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕೈಜೋಡಿಸಿತ್ತು.

ಜಗತ್ತಿನಾದ್ಯಂತ ಐವತ್ತು ಸಾವಿರ ಮೊಬೈಲ್‌ ಫೋನ್‌ಗಳಿಗೆ ಪೆಗಾಸಸ್ ಕನ್ನ!

ವಾಶಿಂಗ್ಟನ್: ಇಸ್ರೇಲ್ ಕಂಪೆನಿ ಎನ್ ಎಸ್‌ಒ 2016ದಿಂದೀಚೆಗೆ 50 ಸಾವಿರ ಮೊಬೈಲ್ ಫೋನ್ ಸಂಖ್ಯೆಗಳಿಗೆ ಪೆಗಾಸಸ್ ಸ್ಪೈವೇರ್ ಅನ್ನು ಲಿಂಕ್ ಮಾಡಿದೆಯೆಂದು ವಾಶಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ಲಿ ಮಾಂಡೆ ಸೇರಿದಂತೆ ವಿವಿಧ ಪಾಶ್ಚಾತ್ಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಎನ್‌ಎಸ್‌ಒ ಸರಕಾರಗಳಿಗೆ ಸ್ಪೈವೇರ್‌ ಪೂರೈಕೆ ಮಾಡುತ್ತಿರುವ ಸಂಸ್ಥೆಯಾಗಿದೆ.

ಸ್ಪೈವೇರ್ ಲಿಂಕ್ ಆಗಿರುವ ದೂರವಾಣಿ ಸಂಖ್ಯೆಗಳ ಪೈಕಿ 15 ಸಾವಿರ ದೂರವಾಣಿ ಸಂಖ್ಯೆಗಳು ಮೆಕ್ಸಿಕೊ ದೇಶದ್ದೆಂದು ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ರಾಜಕಾರಣಿಗಳು, ಕಾರ್ಮಿಕ ಒಕ್ಕೂಟದ ಪ್ರತಿನಿಧಿಗಳು, ಪತ್ರಕರ್ತರು ಹಾಗೂ ಸರಕಾರದ ಟೀಕಾಕಾರರ ದೂರವಾಣಿ ಸಂಖ್ಯೆಗಳು ಪಟ್ಟಿಯಲ್ಲಿರುವುದಾಗಿ ಅದು ಹೇಳಿದೆ.

2018ರಲ್ಲಿ ಹತ್ಯೆಯಾದ ಸೌದಿಯ ಪತ್ರಕರ್ತ ಜಮಾಲ್ ಖಶೋಗಿ ಅವರಿಗೆ ನಿಕಟವಾಗಿರುವ ಇಬ್ಬರು ಮಹಿಳೆಯರ ಮೊಬೈಲ್‌ ಫೋನ್‌ಗಳನ್ನು ಕೂಡಾ ಪೆಗಾಸಸ್ ಮೂಲಕ ಹ್ಯಾಕ್ ಮಾಡಲಾಗಿದೆಯೆಂದು ವಾಶಿಂಗ್ಟನ್ ಪೋಸ್ಟ್ ವರದಿ ಹೇಳಿದೆ.

ಏಜೆನ್ಸಿ ಫ್ರಾನ್ಸ್ ಪ್ರೆಸ್ , ದಿ ವಾಲ್‌ ಸ್ಟ್ರೀಟ್ ಜರ್ನಲ್, ದಿ ನ್ಯೂಯಾರ್ಕ್ ಟೈಮ್ಸ್, ಅಲ್ ಜಝೀರಾ, ಫ್ರಾನ್ಸ್ 24,ವಾಟ್ಸ್ ಆಫ್ ಅಮೆರಿಕ, ದಿ ಇಕನಾಮಿಸ್ಟ್ ಸಹಿತ ಹಲವಾರು ಅಂತರ್‌ ರಾಷ್ಟ್ರೀಯ ಸುದ್ದಿಸಂಸ್ಥೆಗಳ ಪತ್ರಕರ್ತರ ಫೋನ್‌ಗಳನ್ನು ಕೂಡಾ ಹ್ಯಾಕ್ ಮಾಡಲಾಗಿದೆಯೆಂದು ಗಾರ್ಡಿಯನ್ ವರದಿ ಹೇಳಿದ.

ರಾಹುಲ್, ಪ್ರಶಾಂತ್ ಕಿಶೋರ್‌ ಮೊಬೈಲ್ ಫೋನ್ ಸ್ಪೈವೇರ್‌ಗೆ ಗುರಿ

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ವ್ಯೂಹ ತಜ್ಞ ಪ್ರಶಾಂತ್ ಕಿಶೋರ್ ಹಾಗೂ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಬಳಸುತ್ತಿರುವ ಮೊಬೈಲ್ ಫೋನ್‌ಗಳು ಕೂಡಾ ಪೆಗಾಸಸ್ ಸ್ಪೈವೇರ್ ಮೂಲಕ ಕಣ್ಗಾವಲಿಗೊಳಗಾಗಿರುವ ಸಾಧ್ಯತೆಯಿದೆಯೆಂದು 'ದಿ ಗಾರ್ಡಿಯನ್' ಪತ್ರಿಕೆ ವರದಿ ಮಾಡಿದೆ. ರಾಹುಲ್‌ಗಾಂಧಿಯವರ ಐವರು ಸಹಾಯಕರು ಹಾಗೂ ಪಕ್ಷದ ಇತರ ಕೆಲವು ನಾಯಕರು ಪೆಗಾಸಸ್ ಸ್ಪೈವೇರ್‌ನ ದಾಳಿಗೆ ಗುರಿಯಾಗಿರಬಹುದೆಂದು ವರದಿ ಹೇಳಿದೆ.

ಕೇಂದ್ರದಿಂದ ಪೆಗಾಸಸ್ ಸ್ಪೈವೇರ್ ಬಳಕೆ ಆರೋಪ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ಹಚ್ಚುವ ಯತ್ನ ಐಟಿ ಸಚಿವ ಅಶ್ವಿನಿ ವೈಷ್ಣವ್

ಹೊಸದಿಲ್ಲಿ: ಇಸ್ರೇಲ್ ಮೂಲದ ಸ್ಪೈವೇರ್ ಪೆಗಾಸಸ್ ಅನ್ನು ಬೇಹುಗಾರಿಕೆಗೆ ತಾನು ಬಳಸಿಕೊಳ್ಳುತ್ತಿ ದ್ದೇನೆಂಬ ವರದಿಗಳ ವಿರುದ್ಧ ಮೋದಿ ಸರಕಾರವು ತನ್ನನ್ನು ಸಮರ್ಥಿಸಿಕೊಂಡಿದೆ. ಭಾರತದ ಪ್ರಜಾಪ್ರಭುತ್ವ ಹಾಗೂ ಅದರ ಸುಸ್ಥಾಪಿತ ಸಂಸ್ಥೆಗಳಿಗೆ ಕಳಂಕಹಚ್ಚುವ ಪ್ರಯತ್ನ ಇದಾಗಿದೆ ಎಂದು ಅದು ಹೇಳಿದೆ.

ತನ್ನದೇ ಕೆಲವು ಸಚಿವರು ಹಾಗೂ ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಾಧೀಶ ಸೇರಿದಂತೆ ಪ್ರತಿಪಕ್ಷ ನಾಯಕರು, ಪತ್ರಕರ್ತರು ಮತ್ತಿತರರ ಮೇಲೆ ಬೇಹುಗಾರಿಕೆ ನಡೆಸಲು ಕೇಂದ್ರ ಸರಕಾರವು ಪೆಗಾಸಸ್ ಸ್ಪೈವೇರ್ ಬಳಸುತ್ತಿದೆಯೆಂಬ ವರದಿಯನ್ನು ಐಟಿ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ

ಖಂಡಿಸಿದ್ದಾರೆ. ಸಂಸತ್‌ನ ಮುಂಗಾರು ಅಧಿವೇಶನದ ಆರಂಭಕ್ಕೆ ಒಂದು ದಿನ ಮೊದಲು

ಐಟಿ ಸಚಿವ ಅಶ್ವಿನಿ ವೈಷ್ಣವ್ ಸಹಿತ ಇಬ್ಬರು ಸಚಿವರ ಫೋನ್ ಕೂಡಾ ಹ್ಯಾಕಿಂಗ್!

ಕೇಂದ್ರದ ನೂತನ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಸಹಿತ ನರೇಂದ್ರ ಮೋದಿ ಸರಕಾರದ ಇಬ್ಬರು ಸಚಿವರ ಮೊಬೈಲ್‌ ಫೋನ್ ಕೂಡಾ ಪೆಗಾಸಸ್ ಮೂಲಕ ಹ್ಯಾಕ್ ಆಗಿದೆಯೆಂಬ ಕುತೂಹಲಕಾರಿ ವಿಷಯವನ್ನು ದಿ ವೈರ್ ವರದಿ ಬಹಿರಂಗಪಡಿಸಿದೆ. ಭದ್ರತಾ ಸಂಸ್ಥೆಗಳ ಹಾಲಿ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಮತ್ತು ಹಲವಾರು ಉದ್ಯಮಿಗಳು, ಪತ್ರಕರ್ತರು, ಓರ್ವ ಹಾಲಿ ನ್ಯಾಯಾಧೀಶ, ಸಾಮಾಜಿಕ ಹೋರಾಟಗಾರರ ದೂರವಾಣಿ ಸಂಖ್ಯೆಗಳು ಕೂಡಾ ಪೆಗಾಸಸ್ ಮೂಲಕ ಹ್ಯಾಕ್ ಆಗಿವೆ ಎಂಬುದಾಗಿ ವರದಿ ತಿಳಿಸಿದೆ.

ಬಿಡುಗಡೆಗೊಂಡಿರುವುದು ಕಾಕತಾಳೀಯವೇನೂ ಅಲ್ಲವೆಂದು ಅವರು ಅಭಿಪ್ರಾಯಿಸಿದ್ದಾರೆ. ಈ ಹಿಂದೆಯ ಪೆಗಾಸಸ್‌ನ ಬಳಕೆಯ ಬಗ್ಗೆ ಇದೇ ರೀತಿಯ ಆರೋಪಗಳನ್ನು ಮಾಡಲಾಗಿತ್ತು. ಇಂತಹ ಆರೋಪಗಳಿಗೆ ಯಾವುದೇ ವಾಸ್ತವಿಕ ನೆಲೆಗಟ್ಟಿಲ್ಲ ಎಂದವರು ಹೇಳಿದರು.ಆದಾಗ್ಯೂ ಸರಕಾರದಿಂದ ಪೆಗಾಸಸ್‌ನ ಬಳಕೆಯನ್ನು ಅವರು ಸ್ಪಷ್ಟವಾಗಿ ಅಲ್ಲಗಳೆದಿಲ್ಲ.

ಯಾವುದೇ ರೀತಿಯ ಮಾಹಿತಿಯ ಮೇಲೆ ಕಣ್ಗಾವಲು ಪ್ರಕ್ರಿಯೆಗಳು ಕಾನೂನಿಗೆ ಅನುಗುಣವಾಗಿಯೇ ನಡೆಯುತ್ತವೆ ಎಂದವರು ಹೇಳಿದ್ದಾರೆ.

ಏನಿದು ಸ್ಪೈವೇರ್ ?

ಹ್ಯಾಕ್ ಮಾಡಲು ಉದ್ದೇಶಿಸಲಾದ ಫೋನ್‌ ಸಂಖ್ಯೆಗೆ

ಸ್ಪೈವೇರ್  ಅಳವಡಿಸಲು ಹ್ಯಾಕರ್‌ಗಳು, ದುರುದ್ದೇಶ ಪೂರ್ವಕವಾಗಿಯೇ ವೆಬ್‌ಸೈಟ್‌ ಲಿಂಕ್ ಕಳುಹಿಸುತ್ತಾರೆ. ಒಂದು ವೇಳೆ ಮೊಬೈಲ್ ಫೋನ್ ಬಳಕೆದಾರರು ಅದನ್ನು ಕ್ಲಿಕ್ಕಿಸಿದಲ್ಲಿ ಸ್ಪೈವೇರ್ ತಾನಾಗಿಯೇ ಆ ಮೊಬೈಲ್‌ನಲ್ಲಿ ಗುಪ್ತವಾಗಿ ಸ್ಥಾಪನೆಯಾಗಿಬಿಡುತ್ತದೆ. ವಾಟ್ಸ್ ಆ್ಯಪ್ ಧ್ವನಿಕರ (ವಾಯ್ಸ್ ಕಾಲ್)ಗಳ ಮೂಲಕವೂ ಈ ಸ್ಪೈವರ್ ಗಳನ್ನು ಅಳವಡಿಸಲು ಸಾಧ್ಯವಿದೆ. ಅಷ್ಟೇ ಅಲ್ಲದೆ ಮಿಸ್ಡ್ ಕಾಲ್‌ ಮೂಲಕವೂ ಈ ಸ್ಪೈವೇರ್‌ಗಳನ್ನು ಸ್ಥಾಪಿಸಬಹುದಾಗಿದೆ. ಈ ಸ್ಪೈವೇರ್ ಆಳವಡಿಕೆಯಾದ ಬಳಿಕ ಮಿಸ್ಡ್ ಕಾಲ್ ಮಾಡಲಾದ ಸಂಖ್ಯೆಯು ತನ್ನಿಂದ

ತಾನೆ ಅಳಿಸಿಹೋಗುತ್ತದೆ. ಹೀಗಾಗಿ ಈ ಸ್ಪೈವೇರ್‌ನ ಮೂಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ. ಮೊಬೈಲ್ ಫೋನ್‌ನಲ್ಲಿ ಸ್ಥಾಪನೆಯಾದ ಬಳಿಕ ಸ್ಪೈವೇರ್ ಗಳು ಅದರಲ್ಲಿರುವ ಎಲ್ಲಾ ದತ್ತಾಂಶಗಳು, ಕರೆಗಳ ವಿವರಗಳನ್ನು ಸೋರಿಕೆ ಮಾಡತೊಡಗುತ್ತವೆ.

ಭಾರತದಲ್ಲಿ ಯಾವುದೇ ಅಧಿಕೃತ ಅಥವಾ ಖಾಸಗಿ ವ್ಯಕ್ತಿ ಕಣ್ಗಾವಲು ಸ್ಪೈವೇರ್‌ನ್ನು ನುಸುಳಿಸಲು ಸಾಧನಗಳನ್ನು ಹ್ಯಾಕ್ ಮಾಡುವುದು ಐಟಿ ಕಾಯ್ದೆಯಡಿ ಅಪರಾಧವಾಗಿದೆ. ಯಾವುದೇ ವ್ಯಕ್ತಿಯ ಸ್ಮಾರ್ಟ್ ಫೋನ್ ಅನ್ನು ಪೆಗಾಸಸ್ ನಂತಹ ಸ್ಪೈವೇರ್‌ನ ಮೂಲಕ ಕಣ್ಗಾವಲಿಗೊಳಪಡಿಸಲು ಅದನ್ನು ಹ್ಯಾಕ್ ಮಾಡುವುದು ಅಗತ್ಯವಾಗುತ್ತದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...