ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಟ್ಕಳ ತಾಲೂಕಾ ಕಸಾಪ ವತಿಯಿಂದ ದೇಶಭಕ್ತಿಗೀತೆ ಸ್ಪರ್ಧೆ

Source: sonews | By Staff Correspondent | Published on 15th August 2019, 11:23 PM | Coastal News | Don't Miss |

ಭಟ್ಕಳ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಸಾಪ ವತಿಯಿಂದ ತಾಲೂಕಿನ ತೆರ್ನಮಕ್ಕಿ ಹಾಗೂ ಬೈಲೂರಿನ ಸರ್ಕಾರಿ  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ತೆರ್ನಮಕ್ಕಿಯ ಸರ್ಕಾರಿ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ  ನಡೆಸಿದ ದೇಶಭಕ್ತಿ ಸ್ಪರ್ಧೆಯಲ್ಲಿ ವಸುಂಧರಾ ಹೊನ್ನಪ್ಪ ನಾಯ್ಕ ಹಾಗೂ ಅಶ್ವಿನಿ ವಿಷ್ಣು ನಾಯ್ಕ ಪ್ರಥಮ ಸ್ಥಾನ ಪಡೆದರೆ ಧನ್ಯ ಮೋಹನ ನಾಯ್ಕ ದ್ವಿತೀಯ ಸ್ಥಾನ, ಎಂ.ವಾಣಿಶ್ರೀ ತೃತೀಯ ಬಹುಮಾನ ಪಡೆದರು. ಸರ್ಕಾರಿ ಪ್ರೌಢಶಾಲೆ ತೆರ್ನಮಕ್ಕಿಯ ವಿದ್ಯಾರ್ಥಿಗಳಿಗೆ ಕಸಾಪ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಾರ್ಯ, ಮುಖ್ಯಾಧ್ಯಾಪಕ ಪ್ರಶಾಂತ ಪಟಗಾರ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಬಹುಮಾನ ವಿತರಿಸಿದರು.

ಬೈಲೂರಿನ ಸರ್ಕಾರಿ ಪ್ರೌಢಶಾಲಾ  ವಿಧ್ಯಾರ್ಥಿಗಳಿಗೆ  ನಡೆಸಿದ ದೇಶಭಕ್ತಿ ಸ್ಪರ್ಧೆಯಲ್ಲಿ ನಿಶಾ ಲಕ್ಷ್ಮಣ ಮೊಗೇರ ಪ್ರಥಮ ಸ್ಥಾನ ಪಡೆದರೆ ಸಹನಾ ವಿಷ್ಣು  ನಾಯ್ಕ ದ್ವಿತೀಯ ಸ್ಥಾನ, ಛಾಯಾ ಜಿ.ಹರಿಕಂತ್ರ ತೃತೀಯ ಬಹುಮಾನ ಪಡೆದರು. ಬಹುಮಾನ ವಿಜೇತರಿಗೆ ಕಸಾಪ ಗೌರವ ಕಾರ್ಯದರ್ಶೀಗಳಾದ ಎಂ.ಪಿ.ಬಂಢಾರಿ, ಎಸ.ಡಿ.ಎಮ್.ಸಿ. ಅಧ್ಯಕ್ಷರಾದ ವೆಂಕಟ್ರಮಣ ಹರಿಕಾಂತ, ಶಾಲಾ ಮುಖ್ಯಾಧ್ಯಾಪಕಿ ಮಹಾದೇವಿ ಭಟ್ ಬಹುಮಾನ ವಿತರಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು. ಸ್ಪರ್ಧೇಯಲ್ಲಿ ವಿಜೇತರಾದ ಹಾಗು ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...