ಚಳಿಗಾಲದ ಅಧಿವೇಶನ; 12 ವಿಪಕ್ಷ ಸಂಸದರ ಅಮಾನತು

Source: VBs | By I.G. Bhatkali | Published on 30th November 2021, 10:19 AM | National News |

ಹೊಸದಿಲ್ಲಿ,: ಸಂಸತ್‌ನ ಮುಂಗಾರು ಅಧಿವೇಶನದ ಕೊನೆಯ ದಿನದಂದು ಸದನದಲ್ಲಿ ಹಿಂಸಾತ್ಮಕವಾಗಿ ವರ್ತಿಸಿದ್ದಾರೆಂಬ ಕಾರಣಕ್ಕಾಗಿ ಪ್ರತಿಪಕ್ಷಗಳ 12 ಮಂದಿ ರಾಜ್ಯಸಭಾ ಸದಸ್ಯರನ್ನು ಚಳಿಗಾಲದ ಇಡೀ ಅಧಿವೇಶನಕ್ಕೆ ಅಮಾನತುಗೊಳಿಸಲಾಗಿದೆ.
ದುರ್ವರ್ತನೆ, ಅವಹೇಳನಕಾರಿ, ಹಿಂಸಾತ್ಮಕ ಹಾಗೂ ಅಶಿಸ್ತಿನ ವರ್ತನೆಗಾಗಿ ಮತ್ತು ಸಂಸತ್‌ ಭದ್ರತಾ ಸಿಬ್ಬಂದಿ ಮೇಲೆ ಉದ್ದೇಶಪೂರ್ವಕ ದಾಳಿಗಾಗಿ ಈ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಟಿಪ್ಪಣಿ ತಿಳಿಸಿದೆ.

ರಾಜ್ಯಸಭಾ ಸದಸ್ಯರಾದ ಶಿವಸೇನೆಯ ಪ್ರಿಯಾಂಕ ಚತುರ್ವೇದಿ ಹಾಗೂ ಅನಿಲ್ ದೇಸಾಯಿ, ತೃಣಮೂಲ ಕಾಂಗ್ರೆಸ್‌ನ ಡೋಲಾ ಸೇನ್ ಹಾಗೂ ಶಾಂತಾ ಚೈತ್ರಿ, ಸಿಪಿಎಂನ ಎಲಾಮಾರಾಮ್ ಕರೀಂ, ಸಿಪಿಐನ ಬಿನಯ್ ವಿಸ್ತಂ ಮತ್ತು ಕಾಂಗ್ರೆಸ್ ಸಂಸದರಾದ ರಾಜಮಣಿ ಪಟೇಲ್, ಪುಲೋದೇವಿನೇತಾಮ್, ಛಾಯಾವರ್ಮಾ, ರಿಪುನ್ ಬೋರಾ, ಸೈಯದ್‌ನಝೀರ್‌ ಹುಸೇನ್‌ ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ ಅವರನ್ನು ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ ಎಂದು ಟಿಪ್ಪಣಿ ತಿಳಿಸಿದೆ.

ಪ್ರತಿಪಕ್ಷ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ರಾಜಕೀಯ ಮುಖಂಡರ ಸಂಭಾಷಣೆ ಹಾಗೂ ಸಂದೇಶಗಳ ಕದ್ದಾಲಿಕ ನಡೆಸಿರುವ ಪೆಗಾಸಸ್ ಸ್ಪೆವೇರ್ ಹಗರಣದ ಕುರಿತು ಚರ್ಚೆ ನಡೆಸಬೇಕೆಂಬ ಪ್ರತಿಪಕ್ಷಗಳ ಆಗ್ರಹಕ್ಕೆ ಕೇಂದ್ರ ಸರಕಾರವು ಮಣಿಯದೆ ಇದ್ದುದರಿಂದ ಸಂಸತ್‌ನ ಮುಂಗಾರು ಅಧಿವೇಶನದ ಬಹುತೇಕ ಕಲಾಪಗಳು ಸಂಸದರ ಗದ್ದಲ ಹಾಗೂ ಕೋಲಾಹಲಗಳಿಗೆ ಬಲಿಯಾಗಿದ್ದವು. ಆಗಸ್ 11ರಂದು ಚಳಿಗಾಲದ ಅಧಿವೇಶನವು ಮುಕ್ತಾಯಗೊಂಡ ಸಂದಭ ಕೆಲವು ಸಂಸದರು ಹಿಂಸಾತ್ಮವಾಗಿ ವರ್ತಿಸಿದ್ದರಲ್ಲದೆ, ಮಹಿಳಾ ಮಾರ್ಶಲ್ ಗಳ ಮೇಲೂ ಹಲ್ಲೆ ನಡೆಸಿದ್ದಾರೆಂಬ ಆರೋಪ ಹೊರಿಸಲಾಗಿತ್ತು.

ಸಂಸತ್ ಅಧಿವೇಶನದ ಕೊನೆಯದಿನದಂದು ಕೇಂದ್ರ ಸರಕಾರವು ಜನರಲ್ ಇನ್ಸೂರೆನ್ಸ್ (ರಾಷ್ಟ್ರೀಕರಣ) ತಿದ್ದುಪಡಿ ವಿಧೇಯಕವನ್ನು ಮಂಡಿಸಿತ್ತು. ಈ ವಿಧೇಯಕವನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಯ ಪ್ರಸ್ತಾವನೆಗೆ ಒಪ್ಪಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಕೇಂದ್ರ ಒಪ್ಪದೆ ಇದ್ದುದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತ್ತಲ್ಲದೆ, ಕೆಲವು ಸಂಸದರು ಹಿಂಸಾತ್ಮಕವಾಗಿ ವರ್ತಿಸಿದ್ದರೆಂದು ಆರೋಪಿಸಲಾಗಿತ್ತು.

.

Read These Next

ಉತ್ತರಪ್ರದೇಶ: ಮಾಜಿ ಸಚಿವರಿಬ್ಬರ ಸಹಿತ ಹಲವು ಬಿಜೆಪಿ, ಬಿಎಸ್ಪಿ ನಾಯಕರು ಸಮಾಜವಾದಿ ಪಕಕ್ಕೆ ಸೇರ್ಪಡೆ

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಗೆ ಕೆಲವೇ ದಿನಗಳು ಬಾಕಿ ಇರುವಾಗ ಇಬ್ಬರು ಮಾಜಿ ಸಚಿವರು ಸೇರಿದಂತೆ ಹಲವು ಬಿಜೆಪಿ ಹಾಗೂ ಬಿಎಸ್ಪಿ ...