ಪರಮೇಶ್ವರನ್ ಅಯ್ಯರ್ ನೀತಿ ಆಯೋಗದ ನೂತನ ಸಿಇಓ

Source: PTI | By MV Bhatkal | Published on 25th June 2022, 12:30 AM | National News |

ನವದೆಹಲಿ:ನೀತಿ ಆಯೋಗದ ನೂತನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಪರಮೇಶ್ವರನ್ ಅಯ್ಯರ್ ಅವರನ್ನು ನೇಮಕ ಮಾಡಲಾಗಿದೆ. ಎರಡು ವರ್ಷಗಳ ಅವಧಿಗೆ ಅವರನ್ನು ನೀತಿ ಆಯೋಗದ ಸಿಇಒ ಹುದ್ದೆಗೆ ನೇಮಕಗೊಳಿಸಿರುವುದಾಗಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಶುಕ್ರವಾರ ಪ್ರಕಟಿಸಿದೆ.

ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಇಒ ಅಮಿತಾಭ್ ಕಾಂತ್ ಅವರ ಅಧಿಕಾರವಧಿ ಜೂನ್ 30, 2022 ರಂದು ಅಂತ್ಯಗೊಳ್ಳಲಿದೆ. ತದನಂತರ ಅಯ್ಯರ್ ಅಧಿಕಾರ ಸ್ವೀಕರಿಸಲಿದ್ದಾರೆ.ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಪರಮೇಶ್ವರನ್ ಅಯ್ಯರ್ ಅವರ ನೇಮಕಕ್ಕೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

ಮುಂದಿನ ಆದೇಶದವರೆಗೂ ಅವರು ನೀತಿ ಆಯೋಗದ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದು, ಅಮಿತಾಭ್ ಕಾಂತ್ ಅವರಿಗೆ ಅನ್ವಯಿಸಲಾದ ನಿಯಮಗಳು ಮತ್ತು ಷರತ್ತುಗಳು ಪರಮೇಶ್ವರನ್ ಅಯ್ಯರ್ ಅವರಿಗೂ ಅನ್ವಯವಾಗಲಿವೆ ಎಂದು ಸರ್ಕಾರದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.

ಅಮಿತಾಭ್ ಕಾಂತ್ ಫೆ.17, 2016 ರಂದು ನೀತಿ ಆಯೋಗದ ಸಿಇಒ ಆಗಿ ನೇಮಕವಾಗಿದ್ದರು. ತದನಂತರ ಜೂನ್ 30,2019ರವರೆಗೂ ಅವರ ಅಧಿಕಾರವಧಿಯನ್ನು ವಿಸ್ತರಿಸಲಾಗಿತ್ತು. 2019 ಜೂನ್ 30 ರಂದು ಮತ್ತೆ ಎರಡು ವರ್ಷ ಅಧಿಕಾರವಧಿ ವಿಸ್ತರಣೆಗೊಂಡಿತ್ತು. ಜೂನ್ 2021ರಲ್ಲಿ ಮತ್ತೆ ಒಂದು ವರ್ಷ ಕಾಲ ಕಾಂತ್ ಅವರ ಅಧಿಕಾರವಧಿ ವಿಸ್ತರಣೆಯಾಗಿತ್ತು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...