ರಾಜ್ಯದಲ್ಲಿ ಸ್ವಚ್ಛತೆಯಲ್ಲಿ ದಾಖಲೆ ಬರೆದ ಕಾರವಾರದ ಪಹರೆ ವೇದಿಕೆ

Source: SO News | By Laxmi Tanaya | Published on 26th September 2020, 8:07 PM | State News | Don't Miss |

ಕಾರವಾರ : ಸತತವಾಗಿ ಅನೇಕ ದಿನಗಳಿಂದ ಸ್ವಚ್ಛತೆ ಅಭಿಯಾನ ನಡೆಸಿಕೊಂಡು ಬಂದಿರುವ ಪಹರೆ ಇಂದು  ಮೂನ್ನುರನೇ ವಾರ ಪೂರೈಸಿತು. ಸೇಂಟ್ ಜೋಸೆಫ್ ಶಾಲೆಯ ಮುಂದಿನಿಂದ ಸ್ವಚ್ಛತೆ ಆರಂಭಿಸಿ ನಂತರ ಕಾಜುಭಾಗ ಬಳಿ ಕಾರ್ಯಕ್ರಮ ಮುಗಿಸಲಾಯಿತು.

 ಆರಂಭದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿ.ಪಂ. ಸದಸ್ಯೆ ಚೈತ್ರಾ ಕೊಠಾರಕರ ,  ಆಕಾಶವಾಣಿ ಅಧಿಕಾರಿ ಪ್ಲೋರಿನ್ ರೋಚ್, ಎಲಿಷಾ ಎಲಕಪಡಿ, ಮನೋಜ ಭಟ್ ಮತ್ತು ಸದಾನಂದ ಮಾಂಜ್ರೇಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಕಾರ್ಯಕ್ರಮದ ಅಂತ್ಯದಲ್ಲಿ ಮಾತನಾಡಿದ ಚೈತ್ರಾ ಕೊಠಾರಕರ, ಪಹರೆ ನಮ್ಮ ರಾಜ್ಯದ ಹೆಮ್ಮೆಯ ಮತ್ತು ಮಾದರಿ ಸಂಸ್ಥೆ. ಇದು ಈ ನಾಡಿನ ಅದ್ಭುತ. ನಾನು ಪಹರೆಯ ಸೇವೆಗೆ ಮಾರು ಹೋಗಿದ್ದೇನೆ ಎಂದರು.

 ಆಕಾಶವಾಣಿ ಅಧಿಕಾರಿ ಪ್ಲೋರಿನ್ ಮಾತನಾಡಿ, ಇಂತಹ ಒಳ್ಳೆಯ ಸಂಘಟನೆ ಬೆಳೆಯಲು ಕಾರಣೀಕರ್ತರೊಬ್ಬರು ಇರಬೇಕು. ಪಹರೆಯೆ ಸಾಧನೆ ಮಾದರಿ ಎಂದು ನುಡಿದರು. ಕಾರ್ಯಕ್ರಮದಲ್ಲಿ ಅನೇಕ ಜನ ಉಪಸ್ಥಿತರಿದ್ದು ಮಾಸ್ಕ್ ಗಳನ್ನು ಧರಿಸಿ ಕಾರ್ಯಕ್ರಮ ನಡೆಸಲಾಗಿತ್ತು.
 
ಪಹರೆ ವೇದಿಕೆ ಸತತವಾಗಿ 300 ವಾರಗಳ ವರೆಗೆ ಸ್ವಚ್ಛತೆಯನ್ನು ನಡೆಸಿ  ಕರ್ನಾಟಕ ರಾಜ್ಯದಲ್ಲಿಯೇ ಹೊಸ ದಾಖಲೆ ಬರೆದಿದೆ. 

ಜನವರಿ 2015 ರಿಂದ ಶುರುವಾದ ಪಹರೆಯ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಲೇ ಸಾಗಿದೆ. 
ಮಳೆ , ಬಿಸಿಲು ಎನ್ನದೇ ಇಷ್ಟು ಸುಧೀರ್ಘವಾಗಿ ನಡೆದು ಕೊಂಡು ಬಂದ ಸ್ವಚ್ಛತೆಯ ಹಿಂದೆ ಸಂಘಟಕರ ದೊಡ್ಡದಾದ ಸೇವಾ ಮನೋಭಾವವಿದೆ. ಕೊರೋನಾ ಸಂಧರ್ಭದಲ್ಲಿ ಸಹ ಸರ್ಕಾರದ ನಿಯಮದಂತೆ ಬೀದಿಗಿಳಿದು ಸ್ವಚ್ಛತೆ ಮಾಡಲಾಗದ ಪಹರೆಯು ತನ್ನ ಕಾರ್ಯಕರ್ತರಿಗೆ ತನ್ನ ಮನೆಯ ಸುತ್ತ- ಮುತ್ತ ಪ್ರತಿಯೊಬ್ಬರು ಸ್ವಚ್ಛತೆಯಲ್ಲಿ ತೊಡಗಬೇಕು ಎಂಬ ಕರೆಯನ್ನು ಸಹ ನೀಡಿತು.  ಈಗ ಮತ್ತೆ ಕಳೆದ ಅನೇಕ ದಿನಗಳಿಂದ ಸಾಮಾಜಿಕ ಅಂತರ ಕಾದುಕೊಂಡು ಮಾಸ್ಕ್ ಧರಿಸಿ ಸ್ವಚ್ಛತೆಯಲ್ಲಿ ಅತ್ಯುತ್ಸಾಹದಿಂದ ತೊಡಗಿಸಿ ಕೊಂಡಿದ್ದಾರೆ.

          ಮೈಸೂರಿನಲ್ಲಿಯೂ ಸಂಸ್ಥೆಯೊಂದು ಸುಮಾರು ಐದು ವರ್ಷಗಳವರೆಗೆ ಸ್ವಚ್ಛತೆ ನಡೆಸಿ ಕಳೆದ ಮೂರು ತಿಂಗಳ ಹಿಂದೆ ಐದು ವರ್ಷವಾದ ತರುವಾಯ ತನ್ನ ಕಾರ್ಯವನ್ನು ಮುಗಿಸಿರುತ್ತದೆ. ಆದರೆ ಜಿಲ್ಲೆಯ ಹೆಮ್ಮೆಯ ಪಹರೆ ವೇದಿಕೆ ಮಾತ್ರ ಐದು ವರ್ಷಗಳು ದಾಟಿ ಐದುವರೆ ವರ್ಷಗಳ ವರೆಗೆ ತನ್ನ ಸ್ವಚ್ಛತಾ ಕಾರ್ಯ ನಡೆಸುತ್ತಾ ರಾಜ್ಯಲ್ಲಿಯೇ ಸುಧೀರ್ಘವಾಗಿ ಸ್ವಚ್ಛತೆ ನಡೆಸಿದ ಸಂಸ್ಥೆ ಎಂದು ಹೆಮ್ಮೆಗೆ ಪಾತ್ರವಾಗಿದೆ.

       ಸ್ವಚ್ಛತೆಯಲ್ಲಿ ತೊಡಗಿಸಿಕೊಂಡ ಕೆಲ ಸಂಸ್ಥೆಗಳು ಒಂದಿಷ್ಟು ದಿನ ನಡೆಸಿ  ಅರ್ಧಕ್ಕೇ ನಿಲ್ಲಿಸಿದ ಉದಾಹರಣೆಗಳು ಇವೆ. ಇನ್ನು ಕೆಲವು ಸಂಸ್ಥೆಗಳು ಅಲ್ಲೊಂದು - ಇಲ್ಲೊಂದು ದಿನ ಸ್ವಚ್ಛತೆ ನಡೆಸಿವೆ. ಆದರೆ ಪಹರೆ ಮಾತ್ರ ಅವಿಚ್ಚಿನ್ನವಾಗಿ ತನ್ನ ಸೇವೆ ಮುಂದುವರೆಸಿಕೊಂಡು ಬಂದಿರುವುದು ನಾಡಿನ ಜನರ ಶ್ಲಾಘನೆಗೆ ಒಳಗಾಗಿದೆ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...