ಪಾಕಿಸ್ತಾನ್ ಝಿಂದಾಬಾದ್ ಘೋಷಣೆ; ಅಮೂಲ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Source: sonews | By Staff Correspondent | Published on 20th February 2020, 11:27 PM | State News | Don't Miss |

ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪದಡಿ ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಲಿಯೋನ(19) ಅನ್ನು ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದರು.

ಗುರುವಾರ ನಗರದ ಸ್ವಾತಂತ್ರ ಉದ್ಯಾನವನ ಮೈದಾನದಲ್ಲಿ ಹಿಂದೂ, ಮುಸ್ಲಿಂ, ಸಿಖ್, ಈಸಾಯಿ ಫೆಡರೇಶನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಪ್ರಕ್ರಿಯೆ ವಿರೋಧಿಸಿ ಬೃಹತ್ ಪ್ರತಿಭಟನೆಯಲ್ಲಿ ಭಾಷಣ ಆರಂಭಕ್ಕೂ ಮುನ್ನಾ ಅಮೂಲ್ಯ ಲಿಯೋನ್, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು.

ನೆರೆದಿದ್ದ ಸಹಸ್ರಾರು ಜನರು, ಒಂದು ಕ್ಷಣ ಮೌನಕ್ಕೆ ಶರಣಾದರೂ, ಅಮೂಲ್ಯ ಮೂರು ಬಾರಿ ಘೋಷಣೆ ಕೂಗಿದರು. ಈ ವೇಳೆ, ಮಧ್ಯಪ್ರವೇಶಿಸಿದ ಆಯೋಜಕರು ಮೈಕ್ ಕಸಿದುಕೊಳ್ಳುತ್ತಿದ್ದಂತೆಯೇ, ವೇದಿಕೆ ಬಳಿಯಿದ್ದ ಪೊಲೀಸರು ಆಕೆಯನ್ನು ತಡೆದರು. ಕೂಡಲೇ ಉಪ್ಪಾರಪೇಟೆ ಠಾಣೆಯ ಮಹಿಳಾ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಕರೆದೊಯ್ದರು.

ತಡೆದ ಉವೈಸಿ: ವೇದಿಕೆ ಮೇಲೆಯೇ ನಮಾಝ್ ಮಾಡಲು ಎಐಎಂಐಎಂ ಅಧ್ಯಕ್ಷ, ಸಂಸದ ಅಸದುದ್ದೀನ್ ಉವೈಸಿ ತೆರಳುತ್ತಿದ್ದರು. ಈ ವೇಳೆ ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರತಿಧ್ವನಿಸುತ್ತಿದ್ದಂತೆಯೇ, ನೇರವಾಗಿ ಆಕೆ ಬಳಿ ಬಂದ ಉವೈಸಿ, ಮೈಕ್ ಕಸಿದು, ಇದನ್ನು ನಾನು ಬೆಂಬಲಿಸುವುದಿಲ್ಲ ಎಂದರು.

ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದಡಿ ಅಮೂಲ್ಯ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಐಪಿಸಿ ಸೆಕ್ಷನ್ 124ಎ (ದೇಶದ್ರೋಹ) ಸೇರಿ ವಿವಿಧ ಕಾಯ್ದೆ ಅಡಿ ಎಫ್ ಐಆರ್ ದಾಖಲಿಸಲಾಗಿದೆ.

ಯುವತಿ ವೇದಿಕೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿರುವುದು ಸ್ಪಷ್ಟವಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಅವುಗಳನ್ನು ಪ್ರಕರಣದ ತನಿಖೆಗೆ ಸಾಕ್ಷ್ಯವಾಗಿ ಪರಿಗಣಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾವೇಶದ ಆಯೋಜಕರು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದವರಿಂದ ಹೇಳಿಕೆ ಪಡೆಯಲಾಗುವುದು.
- ರಮೇಶ್ ಬಾನೋತ್, ಪಶ್ಚಿಮ ವಿಭಾಗದ ಡಿಸಿಪಿ 

"ಕಠಿಣ ಕ್ರಮ ಕೈಗೊಳ್ಳಲಾಗುವುದು"
ಪಾಕಿಸ್ತಾನ್ ಪರ ಯುವತಿ ಘೋಷಣೆ ಕೂಗಿದ ಪ್ರಕರಣ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಇಂತಹ ಹೇಳಿಕೆಗಳಿಂದ ಮನಸ್ಸಿಗೆ ನೋವುಂಟಾಗುತ್ತದೆ. ಪ್ರಕರಣದ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಇಂತಹವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಅಮೂಲ್ಯ ಅವರನ್ನು ನಾವು ಆಹ್ವಾನಿಸಿಲ್ಲ. ಉದ್ದೇಶಪೂರ್ವಕವಾಗಿ ಅವರು ಇಂತಹ ಹೇಳಿಕೆ ನೀಡಿ, ಗೊಂದಲ ಸೃಷ್ಟಿಸಿದ್ದಾರೆ. ಆಕೆ ಮೇಲೆ ದೂರು ದಾಖಲಿಸಿ ತನಿಖೆ ನಡೆಸಲಿ.
-ಇಮ್ರಾನ್ ಪಾಷಾ, ಕಾರ್ಯಕ್ರಮ ಆಯೋಜಕ, ಜೆಡಿಎಸ್ ಮುಖಂಡ

Read These Next

‘‘ಸತ್ತವರೆಲ್ಲ ಒಂದೇ ಸಮುದಾಯದವರು’’, ಆದುದರಿಂದ ಒಂದು ಸಮುದಾಯದವರೆಲ್ಲ ಸಾಯಬೇಕೆ!?

ಬೆಂಗಳೂರು: ಇಂದು (ಶನಿವಾರ) ನಮ್ಮ ನಾಡಿನ ದಿನಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಪ್ರಕಟಿಸಿದ ‘ಕೊರೋನ ಸೋಂಕಿನಿಂದ ಸತ್ತವರೆಲ್ಲ ಒಂದೇ ...

ಕೋವಿಡ್-19 ಮಾಹಿತಿಗಾಗಿ ವೆಬ್‍ಸೈಟ್ ಹಾಗೂ ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಶುಲ್ಕ-ರಹಿತ ದೂರವಾಣಿ ಲೋಕಾರ್ಪಣೆ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಾಣು 19  (ಕೋವಿಡ್-19)  ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ...

ಕಾರವಾರ: ಕೊರೊನಾ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ ಮಾಡಲು ಜಿಲ್ಲಾಡಳಿತ ನಿರ್ಧಾರ

ಕೊರೊನಾ ವೈರಸ್ ಹರಡುವಿಕೆ ತಡೆ ನಿಟ್ಟಿನಲ್ಲಿ  ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ  ಮಾಡಲು ಜಿಲ್ಲಾಡಳಿತ ...

ಭಟ್ಕಳದಲ್ಲಿ ಮತ್ತೊಂದು ಕೋವಿಡ್-19ಪ್ರಕರಣ ಪತ್ತೆಯೊಂದಿಗೆ  ರಾಜ್ಯದಲ್ಲಿ100 ರ ಗಡಿ ತಲುಪಿದ ಕೊರೋನ ಪೀಡಿತರು

ಭಟ್ಕಳ: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಕೊರೋನ ಮಹಾಮಾರಿ ಮಂಗಳವಾರ (ಬೆಳಿಗ್ಗೆ ೮ಗಂಟೆಗೆ ಇದ್ದಂತೆ) ಮತ್ತೆ ತನ್ನ ...

ಭಟ್ಕಳದ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು 24x7 ಸಹಾಯವಾಣಿ ಸಿದ್ಧ; ಮನೆಬಾಗಿಲಿಗೆ ವೈದ್ಯರ ಸೇವೆ

ಭಟ್ಕಳ: ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ತಾಲೂಕಿನಾದ್ಯನ ಜನರ ಸಮಸ್ಯೆಗಳಿಗೆ ಸ್ಪಂಧಿಸಲು ದಿನ ೨೪ಗಂಟೆಯೂ ಸಹಾಯವಾಣಿ ಸಿದ್ದವಿದ್ದು ...

ಸಾಮಾಜಿಕ ಜಾಲಾತಾಣದಲ್ಲಿ ಕೊರೋನ ಜಿಹಾದ್; ಗಮನಕ್ಕೆ ತಂದಲ್ಲಿ ಕ್ರಮ-ಜಿಲ್ಲಾ ಎಸ್.ಪಿ ಶಿವಪ್ರಕಾಶ

ಭಟ್ಕಳ:ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಕುರಿತಂತೆ ತಮ್ಮ ಗಮನಕ್ಕೆ ತಂದರೆ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ...

ಗಲ್ಫ್ ರಾಷ್ಟ್ರಗಳಿಂದ ಬಂದವರ ಅಜಾಗರೂಕತೆಯಿಂದಾಗಿ ಉ.ಕ.ಜಿಲ್ಲೆಯ ಜನ ಬೆಲೆ ತೆರುವಂತಾಗಿದೆ

ಭಟ್ಕಳ:ಉ.ಕ.ಜಿಲ್ಲೆಯ ಜನರು ಇಂದು ಆತಂಕದಲ್ಲಿದ್ದಾರೆ. ಒಬ್ಬರು ಇನ್ನೊಬ್ಬರೊಂದಿಗೆ ಮಾತನಾಡಲು ಹೆದರುತ್ತಿದ್ದಾರೆ. ತನ್ನದೆ ಸಮುದಾಯದ, ...

‘‘ಸತ್ತವರೆಲ್ಲ ಒಂದೇ ಸಮುದಾಯದವರು’’, ಆದುದರಿಂದ ಒಂದು ಸಮುದಾಯದವರೆಲ್ಲ ಸಾಯಬೇಕೆ!?

ಬೆಂಗಳೂರು: ಇಂದು (ಶನಿವಾರ) ನಮ್ಮ ನಾಡಿನ ದಿನಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಪ್ರಕಟಿಸಿದ ‘ಕೊರೋನ ಸೋಂಕಿನಿಂದ ಸತ್ತವರೆಲ್ಲ ಒಂದೇ ...

ಕೊರೋನಾ ಚಿಕಿತ್ಸೆಗಾಗಿ ತನ್ನ ಐದು ಆಸ್ಪತ್ರೆಗಳಲ್ಲಿ 1,000 ಹಾಸಿಗೆಗಳನ್ನು ಮೀಸಲಿಟ್ಟ ಜಮಾಅತೆ ಇಸ್ಲಾಮೀ ಹಿಂದ್ ;10 ಸಾವಿರ ಸ್ವಯಂ ಸೇವಕರು ಸಕ್ರಿಯ

ಕೇರಳ:  ಕೇರಳದಲ್ಲಿ ಕೊರೋನಾವನ್ನು ಎದುರಿಸಲು ಮುಖ್ಯಮಂತ್ರಿ ಪಿಣರಾಯಿ ಸರಕಾರ ಪ್ರಶಂಸಾರ್ಹ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ...