ಅಂಕೋಲಾದ ತುಳಸಿ ಗೌಡರಿಗೆ ಪದ್ಮಶ್ರೀ ಪ್ರಶಸ್ತಿ

Source: sonews | By Staff Correspondent | Published on 25th January 2020, 10:44 PM | Coastal News | Special Report | Don't Miss |

ಅಂಕೋಲಾ: ಪರಿಸರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆಯುತ್ತಿರುವ ಮತ್ತೋರ್ವ ಮಹಿಳಾ ಸಾಧಕಿ ತುಳಸಿ ಗೌಡ. ಈಕೆ ಈ ಶತಮಾನ ಕಂಡ ನಿಜವಾದ ಪರಿಸರ ಪ್ರೇಮಿ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡರ ಸಾಧನೆ ಅಪಾರ.ವೃಕ್ಷಮಾತೆ ಎಂದೆನಿಸಿಕೊಂಡಿರುವ ಈಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ.. ಲಕ್ಷಗಟ್ಟಲೇ ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944 ರಲ್ಲಿ ಜನಿಸಿದವರು ತುಳಸಿ ಗೌಡರು. ಬಡತನದ ಜತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ಶಾಲೆ ಮೆಟ್ಟಿಲನ್ನು ಏರದೆ ತಾಯಿಯ ಜೊತೆ ಕೂಲಿ ಕೆಲಸಕ್ಕೆ ತೆರಳಲು ಪ್ರಾರಂಭಿಸಿದ್ದರು. ಗೋವಿಂದೇ ಗೌಡ ಎನ್ನುವವರ ಜತೆ ಬಾಲ್ಯ ವಿವಾಹವಾದ ತುಳಸಿ ಗೌಡರು, ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನೂ ಕಳೆದುಕೊಂಡು ವಿಧವೆಯಾದರು.

ಹುಟ್ಟು ಪರಿಸರ ಪ್ರೇಮಿ

ಪರಿಸರ ಪ್ರೇಮ ಅನ್ನುವುದು ಈಕೆಗೆ ಹುಟ್ಟಿನಿಂದ ಬಂದಿತ್ತು. ಊರಿನವರ ಜೊತೆ ಕಟ್ಟಿಗೆ ತರುವ ಕೆಲಸವನ್ನ ಮಾಡಿ ಪ್ರತಿನಿತ್ಯ ಐದರಿಂದ ಆರು ರೂಪಾಯಿ ದುಡಿಯುತ್ತಿದ್ದ ತುಳಸಿಗೆ ಅರಣ್ಯ ಇಲಾಖೆ ಬೀಜಗಳನ್ನು ಶೇಖರಣೆ ಮಾಡಿ ಸಸಿಗಳನ್ನಾಗಿ ಮಾಡಿಕೊಡುವ ಕೆಲಸವನ್ನು ಹಚ್ಚಿತು. ಪರಿಸರದ ಮೇಲೆ ಕಾಳಜಿ ಇದ್ದುದರಿಂದ ಬೀಜಗಳನ್ನು ತಂದು ಸಸಿ ಮಾಡುವ ಕೆಲಸ ಪ್ರಾರಂಭಿಸಿದರು ತುಳಸಿ ಗೌಡ. ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನ ಮಾಡುತ್ತಿದ್ದ ತುಳಸಿ ಗೌಡರಿಗೆ, ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರು. ಆದರೆ ಪರಿಸರ ಕಾಳಜಿಯಿಂದ ಅವರು ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ. ವರ್ಷಕ್ಕೆ 30 ಸಾವಿರ ಗಿಡಗಳ ನಾಟಿ ಇದರೊಂದಿಗೆ ತಾನು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಿಸಿದ್ದರು. ವರ್ಷಕ್ಕೆ ಈಕೆ ಸುಮಾರು 30 ಸಾವಿರ ಸಸಿಗಳನ್ನ ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದರು. ಈಕೆ ನೆಟ್ಟು ಪೋಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳನ್ನ ಕೊಡುವ ಕೆಲಸ ಮಾಡುತ್ತಿವೆ. ಪರಿಸರದ ಮೇಲಿನ ಈಕೆಯ ಪ್ರೀತಿಯನ್ನ ಕಂಡು ಅಂದಿನ ಅರಣ್ಯಾಧಿಕಾರಿಯಾಗಿದ್ದ ಅ.ನಾ ಯಲ್ಲಪ್ಪ ರೆಡ್ಡಿ ಈಕೆಗೆ ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಸಸಿಗಳನ್ನು ಪೋಷಿಸುವ ಕೆಲಸವನ್ನು ಸಹ ಕೊಡಿಸಿದ್ದರು.

ಮರಗಳ ವಿಜ್ಞಾನಿ: ತುಳಸಿ ಪರಿಸರ ಪ್ರೀತಿ ಎಷ್ಟಿದೆ ಎಂದರೆ ಈಕೆಯನ್ನ ಮರಗಳ ವಿಜ್ಞಾನಿ ಎಂದೇ ಹೇಳಬಹುದು. ಯಾವ ಯಾವ ಗಿಡಗಳನ್ನ ಯಾವ ಯಾವ ಋತುವಿನಲ್ಲಿ ನೆಡಬೇಕು. ಎಷ್ಟು ನೀರು ಗೊಬ್ಬರ ಬೇಕು. ಯಾವ ಗಿಡಗಳು ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ. ಹೀಗೆ ಅರಣ್ಯದಲ್ಲಿನ ಸುಮಾರು 300ಕ್ಕೂ ಹೆಚ್ಚು ಪ್ರಭೇದದ ಮರಗಳ ಬಗ್ಗೆ ಇವರ ಅಂಗೈಯಲ್ಲೇ ಮಾಹಿತಿ ಇದೆ.ಅರಣ್ಯದಲ್ಲಿನ ಪ್ರತಿ ಮರಗಳ ನಾಡಿ ಮಿಡಿತವನ್ನ ಇವರಿಗೆ ಗೊತ್ತು. ತನ್ನ ಸುತ್ತಮುತ್ತಲೂ ಯಾರು ಮರಗಳನ್ನ ಕಡಿಯದಂತೆ ನೋಡಿಕೊಂಡಿದ್ದಾರೆ. ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನ ಮರಗಳ್ಳರು ಕಡಿದಾಗ ತುಳಸಿ ಕಡಿದ ಮರವನ್ನ ಅಪ್ಪಿ ಅತ್ತ ಘಟನೆಗಳು ಸಾಕಷ್ಟಿವೆ. ಈಕೆ ಲಕ್ಷಾಂತರ ಮರಗಳನ್ನ ಬೆಳೆಸಿಯೂ ಇಂದಿಗೂ ಬೀಜದಿಂದ ಸಸಿ ಮಾಡಿ ನಂತರ ನೆಟ್ಟು ಪೋಷಿಸುವ ಕೆಲಸವನ್ನ ಮುಂದುವರೆಸಿದ್ದಾರೆ.

ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ: ತುಳುಸಿ ಗೌಡಳ ಸಾಧನೆಯನ್ನ ಮೆಚ್ಚಿ ಕೇಂದ್ರ ಸರ್ಕಾರ ಪ್ರತಿಷ್ಠಿತ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿಯನ್ನು ಇವರಿಗೆ ನೀಡಿತ್ತು. ಅಂದಿನ ಪ್ರಧಾನಿ ವಿ.ಪಿ ಸಿಂಗ್ ರಿಂದ ಪ್ರಶಸ್ತಿ ಪಡೆಯುವ ಮೂಲಕ ಹಾಲಕ್ಕಿ ಸಮುದಾಯದ ಮಹಿಳೆ ಇಡೀ ದೇಶದ ಗಮನವನ್ನ ಸೆಳೆದಿದ್ದರು. ಇನ್ನು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು, ಸಂಘ ಸಂಸ್ಥೆಗಳು ನೀಡುವ ಸನ್ಮಾನಗಳು ತುಳಸಿ ಗೌಡರಿಗೆ ಲಭಿಸಿದೆ. ಆದರೂ ಇಂದಿಗೂ ಎಲೆ ಮರೆಯ ಕಾಯಿಯಂತೆ ತುಳಸಿ ಗೌಡ ತನ್ನ ಕಾಯಕವನ್ನ ಮುಂದುವರೆಸಿದ್ದಾರೆ. ನಿಜಕ್ಕೂ ಹಾಲಕ್ಕಿ ಅನ್ನುವ ಪುಟ್ಟ ಸಮುದಾಯದಲ್ಲಿ ಹುಟ್ಟಿ ತುಳಸಿ ಇಡೀ ರಾಷ್ಟ್ರವೇ ಮೆಚ್ಚುವಂತಹ ಕೆಲಸವನ್ನು ಮಾಡುವ ಮೂಲಕ ಸಾಧಕಿಯಾಗಿದ್ದಾರೆ.

Read These Next

‘ಕೊರೋನಾ ವಾರಿಯರ್ಸ್’ ಗಳ ಸಹಾಯಕ್ಕೆ ಭಟ್ಕಳದ ಧೃತಿ ಸರ್ಜಿಕಲ್ ಫ್ಯಾಕ್ಟರಿ; ಮುಖಗವಚ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರು

ಭಟ್ಕಳ: ದೇಶದಲ್ಲಿ ಕೊರೋನಾ ಸೋಂಕು ಪ್ರವೇಶಿಸಿದ ನಂತರದಲ್ಲಿ ದೇಶದ ರಾಜಧಾನಿಯಿಂದ ಹಿಡಿದು ಸಣ್ಣಪುಟ್ಟ ಗ್ರಾಮಗಳಲ್ಲಿಯೂ ಕೂಡ ಮಾಸ್ಕ್ ...

ಭಟ್ಕಳದಲ್ಲಿ ಮತ್ತೊಂದು ಕೋವಿಡ್-19ಪ್ರಕರಣ ಪತ್ತೆಯೊಂದಿಗೆ  ರಾಜ್ಯದಲ್ಲಿ100 ರ ಗಡಿ ತಲುಪಿದ ಕೊರೋನ ಪೀಡಿತರು

ಭಟ್ಕಳ: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಕೊರೋನ ಮಹಾಮಾರಿ ಮಂಗಳವಾರ (ಬೆಳಿಗ್ಗೆ ೮ಗಂಟೆಗೆ ಇದ್ದಂತೆ) ಮತ್ತೆ ತನ್ನ ...

ಭಟ್ಕಳದ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು 24x7 ಸಹಾಯವಾಣಿ ಸಿದ್ಧ; ಮನೆಬಾಗಿಲಿಗೆ ವೈದ್ಯರ ಸೇವೆ

ಭಟ್ಕಳ: ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ತಾಲೂಕಿನಾದ್ಯನ ಜನರ ಸಮಸ್ಯೆಗಳಿಗೆ ಸ್ಪಂಧಿಸಲು ದಿನ ೨೪ಗಂಟೆಯೂ ಸಹಾಯವಾಣಿ ಸಿದ್ದವಿದ್ದು ...

ಸಾಮಾಜಿಕ ಜಾಲಾತಾಣದಲ್ಲಿ ಕೊರೋನ ಜಿಹಾದ್; ಗಮನಕ್ಕೆ ತಂದಲ್ಲಿ ಕ್ರಮ-ಜಿಲ್ಲಾ ಎಸ್.ಪಿ ಶಿವಪ್ರಕಾಶ

ಭಟ್ಕಳ:ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಕುರಿತಂತೆ ತಮ್ಮ ಗಮನಕ್ಕೆ ತಂದರೆ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ...

‘‘ಸತ್ತವರೆಲ್ಲ ಒಂದೇ ಸಮುದಾಯದವರು’’, ಆದುದರಿಂದ ಒಂದು ಸಮುದಾಯದವರೆಲ್ಲ ಸಾಯಬೇಕೆ!?

ಬೆಂಗಳೂರು: ಇಂದು (ಶನಿವಾರ) ನಮ್ಮ ನಾಡಿನ ದಿನಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಪ್ರಕಟಿಸಿದ ‘ಕೊರೋನ ಸೋಂಕಿನಿಂದ ಸತ್ತವರೆಲ್ಲ ಒಂದೇ ...

ಪೌರತ್ವ ನೊಂದಣಿ ಹಾಗು ಎನ್ ಪಿ ಆರ್  ಬಗ್ಗೆ ಗೃಹಮಂತ್ರಿ ಅಮಿತ್ ಷಾ ರಾಜ್ಯ ಸಭೆಯಲ್ಲಿ ಹೇಳೀದ ಸುಳ್ಳುಗಳ ಕುರಿತು...

NPR-NRC- CAA ಗಳ ವಿರುದ್ಧ ದೇಶಾದ್ಯಂತ ಜನರು ರಾಜಿಯಿಲ್ಲದ ಹೋರಾಟ ನಡೆಸುತ್ತಿರುವುದರಿದ ಕಂಗೆಟ್ಟಿರುವ ಮೊ-ಷಾ ಸರ್ಕಾರ ಸುಳ್ಳುಗಳನ್ನು ...

‘ಕೊರೋನಾ ವಾರಿಯರ್ಸ್’ ಗಳ ಸಹಾಯಕ್ಕೆ ಭಟ್ಕಳದ ಧೃತಿ ಸರ್ಜಿಕಲ್ ಫ್ಯಾಕ್ಟರಿ; ಮುಖಗವಚ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರು

ಭಟ್ಕಳ: ದೇಶದಲ್ಲಿ ಕೊರೋನಾ ಸೋಂಕು ಪ್ರವೇಶಿಸಿದ ನಂತರದಲ್ಲಿ ದೇಶದ ರಾಜಧಾನಿಯಿಂದ ಹಿಡಿದು ಸಣ್ಣಪುಟ್ಟ ಗ್ರಾಮಗಳಲ್ಲಿಯೂ ಕೂಡ ಮಾಸ್ಕ್ ...

ಭಟ್ಕಳದಲ್ಲಿ ಮತ್ತೊಂದು ಕೋವಿಡ್-19ಪ್ರಕರಣ ಪತ್ತೆಯೊಂದಿಗೆ  ರಾಜ್ಯದಲ್ಲಿ100 ರ ಗಡಿ ತಲುಪಿದ ಕೊರೋನ ಪೀಡಿತರು

ಭಟ್ಕಳ: ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಕೊರೋನ ಮಹಾಮಾರಿ ಮಂಗಳವಾರ (ಬೆಳಿಗ್ಗೆ ೮ಗಂಟೆಗೆ ಇದ್ದಂತೆ) ಮತ್ತೆ ತನ್ನ ...

ಭಟ್ಕಳದ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು 24x7 ಸಹಾಯವಾಣಿ ಸಿದ್ಧ; ಮನೆಬಾಗಿಲಿಗೆ ವೈದ್ಯರ ಸೇವೆ

ಭಟ್ಕಳ: ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ತಾಲೂಕಿನಾದ್ಯನ ಜನರ ಸಮಸ್ಯೆಗಳಿಗೆ ಸ್ಪಂಧಿಸಲು ದಿನ ೨೪ಗಂಟೆಯೂ ಸಹಾಯವಾಣಿ ಸಿದ್ದವಿದ್ದು ...

ಸಾಮಾಜಿಕ ಜಾಲಾತಾಣದಲ್ಲಿ ಕೊರೋನ ಜಿಹಾದ್; ಗಮನಕ್ಕೆ ತಂದಲ್ಲಿ ಕ್ರಮ-ಜಿಲ್ಲಾ ಎಸ್.ಪಿ ಶಿವಪ್ರಕಾಶ

ಭಟ್ಕಳ:ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಕುರಿತಂತೆ ತಮ್ಮ ಗಮನಕ್ಕೆ ತಂದರೆ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ...

ಗಲ್ಫ್ ರಾಷ್ಟ್ರಗಳಿಂದ ಬಂದವರ ಅಜಾಗರೂಕತೆಯಿಂದಾಗಿ ಉ.ಕ.ಜಿಲ್ಲೆಯ ಜನ ಬೆಲೆ ತೆರುವಂತಾಗಿದೆ

ಭಟ್ಕಳ:ಉ.ಕ.ಜಿಲ್ಲೆಯ ಜನರು ಇಂದು ಆತಂಕದಲ್ಲಿದ್ದಾರೆ. ಒಬ್ಬರು ಇನ್ನೊಬ್ಬರೊಂದಿಗೆ ಮಾತನಾಡಲು ಹೆದರುತ್ತಿದ್ದಾರೆ. ತನ್ನದೆ ಸಮುದಾಯದ, ...

‘‘ಸತ್ತವರೆಲ್ಲ ಒಂದೇ ಸಮುದಾಯದವರು’’, ಆದುದರಿಂದ ಒಂದು ಸಮುದಾಯದವರೆಲ್ಲ ಸಾಯಬೇಕೆ!?

ಬೆಂಗಳೂರು: ಇಂದು (ಶನಿವಾರ) ನಮ್ಮ ನಾಡಿನ ದಿನಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಪ್ರಕಟಿಸಿದ ‘ಕೊರೋನ ಸೋಂಕಿನಿಂದ ಸತ್ತವರೆಲ್ಲ ಒಂದೇ ...