ರವಿವಾರದಂದು ರಾಜ್ಯದಲ್ಲಿ 9 ಸಾವಿರಕ್ಕೂ ಹೆಚ್ಚು ಕೊರೋನ ಪಾಸಿಟಿವ್: 79 ಮಂದಿ ಸೋಂಕಿಗೆ ಬಲಿ

Source: sonews | By Staff Correspondent | Published on 27th September 2020, 8:41 PM | State News |

ಬೆಂಗಳೂರು: ರಾಜ್ಯದಲ್ಲಿ ರವಿವಾರ 9,543 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 79 ಜನರು ಸೋಂಕಿಗೆ ಬಲಿಯಾಗಿದ್ದು, 6,522 ಜನರು ಗುಣಮುಖರಾಗಿದ್ದಾರೆ. ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 5,75,566ಕ್ಕೆ ತಲುಪಿದ್ದು, 835 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 8,582ಕ್ಕೆ ತಲುಪಿದ್ದು, ರಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 1,047,24ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

79 ಸೋಂಕಿತರು ಬಲಿ: ಬಾಗಲಕೋಟೆ 1, ಬಳ್ಳಾರಿ 9, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 15, ಚಿಕ್ಕಮಗಳೂರು 1, ಚಿತ್ರದುರ್ಗ 2, ದಕ್ಷಿಣ ಕನ್ನಡ 6, ಧಾರವಾಡ 2, ಗದಗ 1, ಹಾಸನ 6, ಹಾವೇರಿ 2, ಕಲಬುರ್ಗಿ 6,  ಕೋಲಾರ 3, ಮಂಡ್ಯ 1, ಮೈಸೂರು 1, ರಾಯಚೂರು 1, ಶಿವಮೊಗ್ಗ 5, ತುಮಕೂರು 5, ಉಡುಪಿ 1, ವಿಜಯಪುರ 3, ಯಾದಗಿರಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.  

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 9,543 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 46, ಬಳ್ಳಾರಿ 310, ಬೆಳಗಾವಿ 184, ಬೆಂಗಳೂರು ಗ್ರಾಮಾಂತರ 213, ಬೆಂಗಳೂರು ನಗರ 4,217, ಬೀದರ್ 50, ಚಾಮರಾಜನಗರ 38, ಚಿಕ್ಕಬಳ್ಳಾಪುರ 195, ಚಿಕ್ಕಮಗಳೂರು 206, ಚಿತ್ರದುರ್ಗ 198, ದಕ್ಷಿಣ ಕನ್ನಡ 460, ದಾವಣಗೆರೆ 74, ಧಾರವಾಡ 139, ಗದಗ 61, ಹಾಸನ 408, ಹಾವೇರಿ 115, ಕಲಬುರ್ಗಿ 10, ಕೊಡಗು 53, ಕೋಲಾರ 125, ಕೊಪ್ಪಳ 87, ಮಂಡ್ಯ 276, ಮೈಸೂರು 952, ರಾಯಚೂರು 102, ರಾಮನಗರ 79, ಶಿವಮೊಗ್ಗ 164, ತುಮಕೂರು 282, ಉಡುಪಿ 320, ಉತ್ತರ ಕನ್ನಡ 100, ವಿಜಯಪುರ 35, ಯಾದಗಿರಿ ಜಿಲ್ಲೆಯಲ್ಲಿ 44 ಪ್ರಕರಣಗಳು ಪತ್ತೆಯಾಗಿವೆ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...