ಆಗಸ್ಟ್‌ನಲ್ಲಿ 15 ಲಕ್ಷ ಭಾರತೀಯರಿಗೆ ಉದ್ಯೋಗ ನಷ್ಟ; ಸಿಎಂಐಇ ಅಂಕಿಅಂಶಗಳಿಂದ ಬಹಿರಂಗ

Source: VB | By I.G. Bhatkali | Published on 4th September 2021, 8:19 PM | National News |

ಹೊಸದಿಲ್ಲಿ: ಕಳೆದ ಆಗಸ್ಟ್ ತಿಂಗಳಿನಲ್ಲಿ ಔಪಚಾರಿಕ ಮತ್ತು ಅನೌಪಚಾರಿಕ ಕ್ಷೇತ್ರಗಳಲ್ಲಿ 15 ಲಕ್ಷಕ್ಕೂ ಅಧಿಕ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ)ಯ ಅಂಕಿ ಅಂಶ ಗಳು ತೋರಿಸಿವೆ.

ಜುಲೈನಲ್ಲಿ ಸುಮಾರು 39,938 ಕೋಟಿಗಳಷ್ಟಿದ್ದ ಒಟ್ಟು ಉದ್ಯೋಗಿಗಳ ಸಂಖ್ಯೆ ಆಗಸ್ಟ್‌ನಲ್ಲಿ 39.778 ಕೋಟಿಗೆ ಕುಸಿದಿದೆ.  ಗ್ರಾಮೀಣ ಭಾರತದಲ್ಲಿ 13 ಲಕ್ಷಉದ್ಯೋಗಗಳು ನಷ್ಟಗೊಂಡಿರುವುದು ಗಮನಾರ್ಹವಾಗಿದೆ.

ಕನಿಷ್ಠ ಕೆಲವು ತಿಂಗಳಾದರೂ ಉದ್ಯೋಗ ಬಿಕ್ಕಟ್ಟು ಮುಂದುವರಿಯಲಿದೆ. ಔಪಚಾರಿಕ ಕ್ಷೇತ್ರಗಳು ಹೆಚ್ಚಿನ ಭರವಸೆಯನ್ನು ಮೂಡಿಸದಿದ್ದರೆ ಗುಣಮಟ್ಟದ ಉದ್ಯೋಗಗಳ ಚೇತರಿಕೆಯು ಸಮಯವನ್ನು ತೆಗೆದುಕೊಳ್ಳಲಿದೆ.

ಕೆ.ಆರ್.ಶ್ಯಾಮಸುಂದರ, ಕಾರ್ಮಿಕ ಆರ್ಥಿಕ ತಜ್ಞ

ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವ •ಕಾಶಗಳು ಕಡಿಮೆಯಾಗಿದ್ದು ನಿರುದ್ಯೋಗ ದರ ಏರಿಕೆಗೆ ಕಾರಣವಾಗಿದೆ.

ಮಹೇಶ ವ್ಯಾಸ್, ಸಿಎಂಐಇ ಆಡಳಿತ ನಿರ್ದೇಶಕ

ರಾಷ್ಟ್ರೀಯ ನಿರುದ್ಯೋಗ ದರವೂ ತೀವ್ರವಾಗಿ ಹೆಚ್ಚಳಗೊಂಡಿದೆ. ಜುಲೈನಲ್ಲಿ ಶೇ. 6.95 ರಷ್ಟಿದ್ದ ಅದು ಆಗಸ್ಟ್‌ನಲ್ಲಿ ಶೇ.8.32ಕ್ಕೆ ಏರಿಕೆಯಾಗಿದೆ ಎಂದು ಸಿಎಂಐಇ ತನ್ನ ವರದಿಯಲ್ಲಿ ಹೇಳಿದೆ.

ನಗರ ನಿರುದ್ಯೋಗ ದರ ಜುಲೈನಲ್ಲಿ ಶೇ.8.3ರಷ್ಟಿದ್ದುದು ಆಗಸ್ಟ್‌ನಲ್ಲಿ ಶೇ.9.78ಕ್ಕೇರಿದೆ. ಕೋವಿಡ್ ಎರಡನೇ ಅಲೆಯು ದೇಶವನ್ನು ಅಪ್ಪಳಿಸುವ ಮುನ್ನ ಮಾರ್ಚ್‌ನಲ್ಲಿ ಅದು ಶೇ.7.27ರಷ್ಟಿತ್ತು. ಜುಲೈನಲ್ಲಿ ಶೇ.6.34ರಷ್ಟಿದ್ದ ಗ್ರಾಮೀಣ ನಿರುದ್ಯೋಗ ದರವೂ ಆಗಸ್ಟ್‌ನಲ್ಲಿ ಶೇ.7.64ಕ್ಕೆ ಏರಿಕೆಯಾಗಿದೆ. ಮುಂಗಾರು ಋತುವಿನಲ್ಲಿ ನಿಧಾನ ಬೆಳೆ ಬಿತ್ತನೆಯಾಗಿದ್ದು ಇದಕ್ಕೆ ಮುಖ್ಯ ಕಾರಣವಾಗಿದೆ.

ಕಾರ್ಮಿಕ ವರ್ಗದ ಪಾಲ್ಗೊಳ್ಳುವಿಕೆ ದರವು ಆಗಸ್ಟ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದ್ದು, ಇದು ಹೆಚ್ಚು ಜನರು ಸಕ್ರಿಯವಾಗಿ ಉದ್ಯೋಗ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ ಎಂದೂ ಸಿಎಂಐಇ ವರದಿಯು ತಿಳಿಸಿದೆ.

ಭಾರತದ ಆರ್ಥಿಕತೆ ಚೇತರಿಸಿ ಭಾಕೊಳ್ಳುತ್ತಿದೆ ಎಂದು ಸರಕಾರವು ಕೊಳ್ಳುತ್ತಿದೆ ಎಂದು ಸರಕಾರವು ಹೇಳಿದೆಯಾದರೂ ದಿಲ್ಲಿ, ಹರ್ಯಾಣ ಮತ್ತು ರಾಜಸ್ಥಾನ ಸೇರಿದಂತೆ ಕನಿಷ್ಠ ಎಂಟು ರಾಜ್ಯ ಗಳು ಈಗಲೂ ಎರಡಂಕಿಯ ನಿರುದ್ಯೋಗ ದರಗಳನ್ನು ವರದಿ ಮಾಡುತ್ತಿವೆ.

ನಿರುದ್ಯೋಗ ದರ ಏರಿಕೆಗಾಗಿ ಶುಕ್ರವಾರ ಬಿಜೆಪಿ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಮೋದಿ ಸರಕಾರವು ಉದ್ಯೋಗಕ್ಕೆ ಹಾನಿಕಾರಕವಾಗಿದೆ. ಅದು ತನ್ನ ಸ್ನೇಹಿತರಿಗೆ ಸೇರಿರದ ಯಾವುದೇ ಉದ್ಯಮ ಅಥವಾ ಉದ್ಯೋಗವನ್ನು ಉತ್ತೇಜಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ, ಬದಲಿಗೆ ಉದ್ಯೋಗಗಳನ್ನು ಹೊಂದಿರುವವರಿಂದ ಅವುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಟ್ವೀಟಿಸಿದ್ದಾರೆ.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...