ಅತಿಕ್ರಮಣ ತೆರವಿಗೆ ಆಕ್ರೋಶ. ಭಟ್ಕಳದಲ್ಲಿ ಅರಣ್ಯ ಅತಿಕ್ರಮಣದಾರರ ಪ್ರತಿಭಟನೆ

Source: SO News | By Laxmi Tanaya | Published on 30th October 2020, 8:38 PM | Coastal News |

ಭಟ್ಕಳ : ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್, ಜಾಲಿ ಪಟ್ಟಣ ಪಂಚಾಯತ್ ಮತ್ತು ಇತರ ಕಡೆಗಳಲ್ಲಿ  ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡು ನಿರ್ಮಿಸಲಾಗಿದ್ದ ಮನೆ, ಅಂಗಡಿ ಮತ್ತು ಕಂಪೌಂಡ್ಗಳನ್ನು ತೆರವುಗೊಳಿಸಿದ ಅಧಿಕಾರಿಗಳ ವರ್ತನೆ  ಖಂಡಿಸಿ ಅತಿಕ್ರಮಣದಾರರು ಅರಣ್ಯ ಇಲಾಖೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಹೆಬಳೆ ಸರ್ವೆ ನಂಬರ್ 214, 220, 228,  ಜಾಲಿ ಸರ್ವೆ ನಂಬರ್ 108, 73, ,ಜಾಲಿ ಮೂಸಾನಗರ ಸರ್ವೆ ನಂಬರ್   65,  228ರಲ್ಲಿ ಅರಣ್ಯಾಧಿಕಾರಿಗಳು ತೆರವು ಕಾರ್ಯಾಚರಣೆಗೆ  ಮುಂದಾದರು. ಕೆಲವೆಡೆ ಸೆಂಟ್ರಿಂಗ್  ಕಾಮಗಾರಿ ಮುಂದುವರಿಸಲು ತಡೆಯೊಡ್ಡಲಾಗಿತ್ತು.  ಅಂಗಡಿಗೆ ಹೊದಿಸಲಾಗಿದ್ದ ಶಿಟ್‌ಗಳನ್ನು ತೆರವುಗೊಳಿಸಲಾಯಿತು. ಹೀಗಾಗಿ ಅತಿಕ್ರಮಣದಾರರು ವಿರೋಧ ವ್ಯಕ್ತಪಡಿಸಿದರು. ಆದರೂ ಕೂಡ  ತಮ್ಮ ಕಾರ್ಯಾಚರಣೆಯನ್ನ  ಮುಂದುವರೆಸಿದರು. 

ಹೀಗಾಗಿ ಅತಿಕ್ರಮಣದಾರರು ಅರಣ್ಯ ಇಲಾಖೆ  ಕಚೇರಿಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ನಾವು ಕಳೆದ 25/30 ವರ್ಷಗಳಿಂದ ಈ ಅರಣ್ಯ ಭೂಮಿಯಲ್ಲಿ ನೆಲೆಸಿದ್ದೇವೆ. ನಮಗೆ ಈ ಭೂಮಿ ಬಿಟ್ಟು ಬೇರೆ ನೆಲೆ ಇಲ್ಲ.  ಅರಣ್ಯಾಧಿಕಾರಿಗಳು ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವುದು ಸರಿಯಾದ ಕ್ರಮ ಅಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಆರ್ಎಫ್ಓ ಸವಿತಾ ದೇವಾಡಿಗ,  ನಾವು ಹಳೆಯ ಅತಿಕ್ರಮಣವನ್ನು ತೆರವುಗೊಳಿಸಿಲ್ಲ. ಹೊಸದಾಗಿ ಅರಣ್ಯ ಭೂಮಿಗೆ ಕೈ ಹಾಕಿದರೆ ಸುಮ್ಮನಿರಲು ಸಾಧ್ಯ ಇಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Read These Next

ಭಟ್ಕಳ ಹೆಬಳೆಯಲ್ಲಿ ಕಸ, ತ್ಯಾಜ್ಯ ಸಂಗ್ರಹಕ್ಕೆ ತಡೆ; ಊರೆಲ್ಲ ದುರ್ವಾಸನೆ; ಜಾಗ, ಹಣವಿದ್ದರೂ ಯೋಜನೆ ಇಲ್ಲ !

ತಾಲೂಕಿನ ಹೆಬಳೆ ಪಂಚಾಯತ ಪ್ರದೇಶದಲ್ಲಿ ಮನೆ ಮನೆಯ ಕಸ, ತ್ಯಾಜ್ಯಗಳನ್ನು ಎತ್ತಿಕೊಂಡು ಊರ ನಡುವಿನ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಿ ...

ಉ.ಕ.ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಅರಣ್ಯ ಹಕ್ಕು ಹೋರಾಟಗಾರ ಆಗ್ರಹ

ಶಿರಸಿ : ರಾಜ್ಯ ಸರ್ಕಾರದ ಅಧಿಸೂಚನೆ ನಿರ್ಲಕ್ಷಿಸಿ ಅರಣ್ಯ ವಾಸಿಗಳು ಸಾಗುವಳಿ ಮಾಡುತ್ತಿರುವ ಜಿಲ್ಲೆಯ 47,708 ಎಕರೆ ಅರಣ್ಯ ಭೂಮಿ ಪ್ರದೇಶ ...