ನಮ್ಮ ಕರ್ನಾಟಕ ಭವ್ಯ ಪರಂಪರೆಯನ್ನು ಹೊಂದಿದ್ದು, ಎಲ್ಲೆಡೆ ಪಸರಿಸಿದೆ: ಜಿಲ್ಲಾಧಿಕಾರಿ

Source: so news | Published on 19th November 2019, 11:55 PM | State News | Don't Miss |

ಮಂಡ್ಯ:ನಮ್ಮ ದೇಶ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ನಮ್ಮ ಚರಿತ್ರೆಯ ಪುಟಗಳನ್ನು ನೋಡಿದಾಗ ಭಾರತ ದೇಶ ಅದರಲ್ಲೂ, ನಮ್ಮ ಕರ್ನಾಟಕ ಭವ್ಯ ಪರಂಪರೆಯನ್ನು ಹೊಂದಿದ್ದು, ಎಲ್ಲೆಡೆ ಪಸರಿಸಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ದರಿಯಾ ದೌಲತ್ ಬಾಗ್‍ನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಬೆಂಗಳೂರು ಅವರ ವತಿಯಿಂದ ನಡೆದ ವಿಶ್ವ ಪರಂಪರಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು ಬಳುವಳಿಯಾಗಿ ನಾನಾ ರೀತಿಯಾದ ವೈಶಿಷ್ಟ್ಯ ಹಾಗೂ ವಿಶೇಷತೆಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ದೇವಸ್ಥಾನಗಳು, ತೋಪುಗಳು, ಘೋರಿಗಳು, ಸಸ್ಯರಾಶಿ ಹಾಗೂ ಅರಮನೆಗಳು ಒಳಗೊಂಡಂತೆ ಇನ್ನಿತರ ಹಲವಾರು ವಿಶೇಷತೆಗಳು ಒಂದೊಂದು ಪರಂಪರೆ, ವೈಶಿಷ್ಟ್ಯ ಹಾಗೂ ಪಾಠವನ್ನು ತಿಳುವಳಿಕೆಯ ಮೂಲಕ ತಿಳುಸುತ್ತವೆ. ಇಂತಹ ವೈಶಿಷ್ಟ್ಯವನ್ನು ಸಂರಕ್ಷಣೆ ಮಾಡುವಂತಹ ಗುರುತರ ಜವಾಬ್ದಾರಿ ನಮ್ಮೇಲ್ಲರ ಮೇಲೆ ಇದೆ. ಇತ್ತೀಚಿನ ಶಿಕ್ಷಣದಲ್ಲಿ ಕೇವಲ ಪುಸ್ತಕದ ಜ್ಞಾನವನ್ನು ತಿಳಿದುಕೊಳ್ಳುತ್ತಿದ್ದೇವೆ. ಕೋಶವನ್ನು ಓದಬೇಕು, ಇಲ್ಲ ದೇಶವನ್ನಾದರೂ ಸುತ್ತಬೇಕು ಎನ್ನುವ ಗಾದೆಯಂತೆ, ನಾವೇಲ್ಲರೂ ದೇಶವನ್ನು ಸುತ್ತುವುದರ ಮೂಲಕ ನಮ್ಮ ಪೂರ್ವಜರು ನೀಡಿದ ಕೊಡುಗೆಯನ್ನು ನೋಡುವುದರ ಜತೆಗೆ ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ನಾವು ನಮ್ಮ ಗತವೈಭವವನ್ನು ಗಮನಿಸಿ ನೋಡಿದಾಗ ಹಾಗೂ ನಮ್ಮಲ್ಲಿರುವಂತಹ ಅತ್ಯುತ್ತಮವಾದ ಕಲೆ, ಸಂಸ್ಕøತಿ ಮತ್ತು ನಾಟ್ಯವನ್ನು ಸಿಂಹವಲೋಕನವಾಗಿ ನೋಡಿದಾಗ ಒಂದೊಂದು ವೈಶಿಷ್ಟ್ಯವನ್ನು ಒಂದೊಂದು ರಾಜ ಆಶ್ರಯದಲ್ಲಿ ನೋಡಬಹುದಾಗಿದೆ. ಪ್ರಥಮವಾಗಿ ಬಾದಮಿ ಚಾಲುಕ್ಯರಲ್ಲಿ ನಾಗರಶೈಲಿ ಕಲೆ ಹಾಗೂ ವಿಜಯನಗರ ಅಸರ ಕಾಲದಲ್ಲಿ ದ್ರಾವಿಡ ಶೈಲಿ ಕಲೆಯನ್ನು ನೋಡಬಹುದು. ಇದೇ ರೀತಿ ಪ್ರತಿಯೊಂದು ಕಲೆಯಲ್ಲೂ ಒಂದೊಂದು ವಿಶಿಷ್ಟತೆ ಇದೆ. ಇತಂಹ ಪರಂಪರೆಯ ಭವ್ಯವನ್ನು ನಾವೇಲ್ಲರೂ ಕೂಡ ತಿಳಿದುಕೊಳ್ಳಬೇಕು. ಕಲ್ಲುಗಳನ್ನು ಕೇವಲ ಕೆತ್ತನೆ ಮಾಡಿದ್ದಾರೆ ಎಂದು ನೋಡದೆ, ಆ ಕೆತ್ತನೆಗೆ ಒಂದು ಜೀವ ಹಾಗೂ ಅದರಲ್ಲಿ ಒಂದು ಚಿಂತನೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಂಡಾಗ ನಮ್ಮ ಇತಿಹಾಸವನ್ನು ನಾವೇಲ್ಲರೂ ಖುಷಿಯಿಂದ ನೋಡಲು ಸಾಧ್ಯ. ಇಂತಹ ಭವ್ಯ ಇತಿಹಾಸವನ್ನು ನಮ್ಮ ಮುಂದಿನ ಪಿಳೀಗೆಗೆ ಕೊಂಡೊಯ್ಯಬೇಕೆಂದರೇ ಇಂತಹ ಕಾರ್ಯಕ್ರಮಗಳು ಜರುಗಬೇಕು ಎಂದು ಹೇಳಿದರು.
ಇಂತಹ ಕಾರ್ಯಕ್ರಮಗಳ ಮೂಲಕ ಇತ್ತೀಚಿನ ಯುವಕರಿಗೆ ಇತಿಹಾಸದ ಬಗ್ಗೆ ತಿಳುವಳಿಕೆ ಹಾಗೂ ಜಾಗೃತಿಯನ್ನು ಮೂಡಿಸಲು ಸಾಧ್ಯ. ನಮ್ಮ ಹಿಂದಿನ ಪರಂಪರೆ ಹಾಗೂ ನಮ್ಮ ಮುಂದಿನ ಪರಂಪರೆಯ ಬೆಸುಗೆ ಯಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅದರಲ್ಲೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪುರಾತತ್ವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಇಲ್ಲಿ ಪಾರಂಪರಿಕವುಳ್ಳ ಹಲವಾರು ಕುರುಹುಗಳು ಇದ್ದು, ಇವುಗಳನ್ನು ಕೇವಲ 100, 200 ವರ್ಷ ರಕ್ಷಿಸುವುದಲ್ಲ, ಸೂರ್ಯ ಚಂದ್ರ ಇರುವವರೆಗೂ ಸಂರಕ್ಷಣೆ ಮಾಡಬೇಕು. ಮತ್ತು ಯಾವುದೇ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯವರಾದ ಜಿ.ಹೇಮಂತ್ ಕುಮಾರ್, ಬೆಂಗಳೂರು ಭಾರತೀಯ ಪುರತಾತ್ವ ಸರ್ವೇಕ್ಷಣಾ ನಿರ್ದೇಶಕರಾ ಡಾ. ಎಸ್.ವಿ.ವೆಂಕಟೇಶಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Read These Next

ಗದಗ:ಉಚಿತ ಆರೋಗ್ಯ ತಪಾಸಣೆ

ಗದಗ:ಜಿಲ್ಲಾಡಳಿತ ಗದಗ-ಬೆಟಗೇರಿ ನಗರ ಸಭೆ ಹಾಗೂ ಗದಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ನಗರದ ಹಳೇ ಬಸ್ ನಿಲ್ದಾಣ ಹತ್ತಿರದ ...

ಆಯುಷ್ಮಾನ್ ಆರೋಗ್ಯ ಕಾರ್ಡ್ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಗೆ ಚಿಕಿತ್ಸೆ - ಜಿಲ್ಲಾಧಿಕಾರಿ ಜಿ. ಜಗದೀಶ್

ಆಯುಷ್ಮಾನ್ ಆರೋಗ್ಯ ಕಾರ್ಡ್ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಗೆ ಚಿಕಿತ್ಸೆ - ಜಿಲ್ಲಾಧಿಕಾರಿ ಜಿ. ಜಗದೀಶ್

ದೇಶದಲ್ಲಿ ಒಂದೇ ದಿನ 22,752 ಸೋಂಕು: ಸತತ 6ನೇ ದಿನ 20 ಸಾವಿರಕ್ಕೂ ಅಧಿಕ ಮಂದಿಗೆ ವೈರಸ್; ಒಟ್ಟು ಸೋಂಕಿತರ ಸಂಖ್ಯೆ 7.42 ಲಕ್ಷ

ದೇಶದಲ್ಲಿ ಒಂದೇ ದಿನ 22,752 ಸೋಂಕು: ಸತತ 6ನೇ ದಿನ 20 ಸಾವಿರಕ್ಕೂ ಅಧಿಕ ಮಂದಿಗೆ ವೈರಸ್; ಒಟ್ಟು ಸೋಂಕಿತರ ಸಂಖ್ಯೆ 7.42 ಲಕ್ಷ